UK Suddi
The news is by your side.

ಕಿಡ್ನಿಯಲ್ಲಿ ಕಲ್ಲಿದೆಯೇ? ಇಲ್ಲಿದೆ ಪರಿಹಾರ

ಮನುಷ್ಯನನ್ನು ಕಂಗಾಲಾಗಿಸುವ ರೋಗಗಳಲ್ಲಿ ಕಿಡ್ನಿಯಲ್ಲಿ ಕಲ್ಲಾಗುವ ರೋಗವೂ ಒಂದಾಗಿದೆ. ಇದರ ನೋವೇನೆಂಬುವುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಇದಲ್ಲದೇ ಇದು ಮಿತಿ ಮೀರಿ ಬೆಳೆದರೆ ಬಹಳ ಕಠಿಣ ಶಸ್ತ್ರ ಚಿಕಿತ್ಸೆಗೂ ಒಳಗಾಗಬೇಕಾಗುತ್ತದೆ.
ಸರ್ಜರಿ ಲೇಸರ್ ಹಾಯಿಸುವ ಮುಖಾಂತರವೂ ಕಿಡ್ನಿಯ ಕಲ್ಲನ್ನು ವೈದ್ಯರು ತೆಗೆಯುತ್ತಾರೆ. ಆದರೆ ಇದಕ್ಕೆ ಸಾಕಷ್ಟು ಖರ್ಚುಗಳನ್ನು ಮಾಡಬೇಕಾಗುತ್ತದೆ. ಕೆಲವೊಂದು ಬಾರಿ ಶಸ್ತ್ರ ಚಿಕಿತ್ಸೆಯ ಬಳಿಕವೂ ಮತ್ತೆ ಕಿಡ್ನಿಯಲ್ಲಿ ಕಲ್ಲಾಗುವುದೂ ಇದೆ. ಇದನ್ನು ತಡೆಗಟ್ಟಲು ಮನೆಯಲ್ಲೇ ಸುಲಭೋಪಾಯವಿದೆ. ಕೇವಲ 8ರಿಂದ 10 ದಿನಗಳೊಳಗಾಗಿ ನೀವು ಪರಿಹಾರ ಕಂಡುಕೊಳ್ಳ ಬಹುದು.
ಬೇಕಾದ ವಸ್ತುಗಳು
►600 ಮಿ.ಲೀ. ಮಿನರಲ್ ವಾಟರ್
►4 ಚಮಚ ನಿಂಬೆ ರಸ
►4 ಚಮಚ ಸಕ್ಕರೆ (ಬಿಳಿ)
►1 ಚಮಚ ಅರಸಿನ ಹುಡಿ
►10 ಗ್ರಾಂ. ಅಡುಗೆ ಸೋಡ (ಪೊಟಾಸಿಯಂ ನೈಟ್ರೇಟ್)
ತಯಾರಿಸುವ ವಿಧಾನ
ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಒಲೆಯ ಮೇಲಿಟ್ಟು, ಅದರಲ್ಲಿ 600 ಮಿ.ಲೀ. ಮಿನರಲ್ ನೀರು ಹಾಕಿ ಕುದಿಸಬೇಕು. ಆ ನೀರಿನಲ್ಲಿ 4 ಚಮಚ ಸಕ್ಕರೆ (ಬಿಳಿ), 4 ಚಮಚ ನಿಂಬೆ ರಸ, 1 ಚಮಚ ಅರಸಿನ ಹುಡಿ, 10 ಗ್ರಾಂ ಅಡುಗೆ ಸೋಡ (ಪೊಟಾಸಿಯಂ ನೈಟ್ರೇಟ್) ಎಲ್ಲವನ್ನೂ ಸೇರಿಸಬೇಕು. ಅದನ್ನು ಕುದಿಸಿ-ಕುದಿಸಿ ಸುಮಾರು 3೦೦ ಮಿ.ಲೀ. ಆಗಬೇಕು. ನಂತರ ಅದನ್ನು ಕೆಳಗಿಟ್ಟು ತಣ್ಣಗಾಗಿಸಬೇಕು. ಬಳಿಕ ಅದನ್ನು ಸಾರಿಸಿ ಒಂದು ಬಾಟಲಲ್ಲಿ ತುಂಬಿಸಬೇಕು.
ಅದನ್ನು ದಿನಾಲೂ 5೦ಗ್ರಾಂ ನ ಹಾಗೆ ಮೂರು ಸಲ ಸೇವಿಸಬೇಕು. ಇದನ್ನು ಸತತವಾಗಿ 8 ರಿಂದ 10 ದಿನಗಳ ಕಾಲ ಸೇವಿಸಿದಾಗ ನೀವು ಕಿಡ್ನಿಯ ಕಲ್ಲಿನಿಂದ ಪರಿಹಾರ ಕಾಣಲಿದ್ದೀರಿ.
ಈ ಮದ್ದು ಸೇವಿಸುವ ಸಂದರ್ಭದಲ್ಲಿ ಮಾಂಸಾಹಾರ ಸೇವನೆಯನ್ನು ನಿಲ್ಲಿಸಬೇಕು ಮತ್ತು ಬದನೆಕಾಯಿ ಹಾಗೂ ಪೇರಳೆ ಹಣ್ಣನ್ನು ತಿನ್ನಬಾರದು.

Comments