ಅನುಪಮಾ ರಾಜೀನಾಮೆ ಪತ್ರ ಅಂಗೀಕಾರ
ಬೆಂಗಳೂರು: ರಾಜ್ಯ ಸರಕಾರ ಅನುಪಮಾ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಗುರುವಾರ ಅಂಗೀಕರಿಸಿದ್ದು, ಈ ಮೂಲಕ ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಕೂಡ್ಲಿಗಿ ಡಿವೈಎಸ್ ಪಿ ಪ್ರಕರಣಕ್ಕೆ ಬ್ರೇಕ್ ಬಿದ್ದಿದೆ.
ಜೂನ್ 4 ರಂದು ಅನುಪಣಾ ಶೆಣೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಸರಕಾರಕ್ಕೆ ಮತ್ತು ಪೊಲೀಸ್ ಇಲಾಖೆ ಪತ್ರವೊಂದನ್ನು ಬರೆದು ಕಣ್ಮರೆಯಾಗಿದ್ದರು. ನಂತರ ರಾಜಕೀಯ ತಿರುವು ಪಡೆದುಕೊಂಡಿದ್ದ ಈ ಪ್ರಕರಣ ಸಾಮಾಜಿಕ ಜಾಲತಾಣ ಫೇಸ್ ಬುಕ್ ಪೋಸ್ಟ್ ಗಳ ಮೂಲಕ ಜೀವಂತವಾಗಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಬಳಿಕ ಸರಕಾರದ ಆದೇಶದಂತೆ ಅನುಪಮಾ ಶೆಣೈ ಅವರ ಮನವೊಲಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರೂ ಫಲಪ್ರದವಾಗಲಿಲ್ಲ. ಕೊನೆಗೆ ಅನುಪಮಾ ಅವರೇ ಗುರುವಾರ ಬಳ್ಳಾರಿಯಲ್ಲಿ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ಶೆಣೈ ಅವರ ರಾಜೀನಾಮೆ ಹಿಂದಿನ ವಿಚಾರವನ್ನು ಖಾತರಿಪಡಿಸಿಕೊಂಡಿರುವ ರಾಜ್ಯ ಸರಕಾರ ಅಂತಿಮವಾಗಿ ಇದೀಗ ರಾಜಿನಾಮೆ ಪತ್ರವನ್ನು ಅಂಗೀಕರಿಸಿದೆ.