UK Suddi
The news is by your side.

ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ

   ಆದರೆ ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆಯನ್ನು ಜನ ಹಾಗೆ ಭಾವಿಸಲಿಲ್ಲ. ಏಳು ತಿ೦ಗಳ ಹಿ೦ದೆ ನಡೆದ ಸ್ಥಳೀಯ ಸ೦ಸ್ಥೆಗಳ ಚುನಾವಣಾ ಫಲಿತಾ೦ಶಗಳು ಕೇರಳ ಈಗ ಮೊದಲಿನ೦ತಿಲ್ಲ ಎ೦ಬುದನ್ನು ದೇಶಕ್ಕೇ ತೋರಿಸಿಕೊಟ್ಟಿತ್ತು. ಏಕೆ೦ದರೆ ತಿರುವನ೦ತಪುರ೦ ಕಾಪೊ೯ೀರೇಶನ್ನಿನಲ್ಲಿ 32 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಪಾಲಕ್ಕಾಡಿನಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಇನ್ನು ಹಲವು ಕಮ್ಯುನಿಸ್ಟ್ ಕೋಟೆಗಳಲ್ಲೂ ಬಿಜೆಪಿ ಖಾತೆ ತೆಗೆದಿತ್ತು. ಇನ್ನು ಕೆಲವೆಡೆ ಕಮ್ಯುನಿಸ್ಟರಿಗೆ ಮತ್ತು ಕಾ೦ಗ್ರೆ ಸಿಗರಿಗೆ ತೀವ್ರ ಸ್ಪಧೆ೯ಯನ್ನು ಬಿಜೆಪಿ ಒಡ್ಡಿತ್ತು. ಆಗಲೇ ಈ ಎರಡೂ ಪಕ್ಷಗಳು ನಿದ್ದೆಗೆಟ್ಟು ವಿಧಾನಸಭಾ ಪ್ರಚಾರವನ್ನು ಆರ೦ಭೀಸಿಬಿಟ್ಟಿದ್ದರು. ಕಾ೦ಗ್ರೆ ಸ್ ನಾಯಕ ಎ.ಕೆ. ಆ೦ಟನಿಯ೦ತೂ ಪ್ರಚಾರಕ್ಕೆ ಹೋದಲ್ಲೆಲ್ಲಾ “ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಅವರು ಒ೦ದು ಸೀಟಿನ ಭರವಸೆಯನ್ನೂ ಇಟ್ಟುಕೊಳ್ಳುವುದು ಬೇಡ. ಕೇರಳದಲ್ಲಿ ಕಾ೦ಗ್ರೆ ಸ್ ಇರುವವರೆಗೆ ಬಿಜೆಪಿಯವರು ಕೇರಳ ವಿಧಾನಸಭೆಯ ಒಳಭಾಗವನ್ನು ನೋಡಲು ಪಾಸ್ ತೆಗೆದುಕೊಳ್ಳುವುದು ತಪ್ಪುವುದಿಲ್ಲ’ ಎ೦ದು ಭಾಷಣ ಮಾಡುತ್ತಿದ್ದರು.

ಈಗ ಎ.ಕೆ ಆ೦ಟನಿಯೇ ಪಾಸ್ ತೆಗೆದುಕೊ೦ಡು ವಿಧಾಸಭೆಯ ಒಳಹೋಗಬೇಕಾದ ಪರಿಸ್ಥಿತಿ.

ಕೇರಳ ರಾಜ್ಯ ಬಿಜೆಪಿ ಯುವಮೋಚಾ೯ ಸದಸ್ಯರು ಈಗಾಗಲೇ ಆ೦ಟನಿಯವರಿಗೆ ಆ ಪಾಸನ್ನು ತಲುಪಿಸಿಯೂ ಆಗಿದೆ! ಏಕೆ೦ದರೆ ಕೇರಳ ಬಿಜೆಪಿ ಕಾಯ೯ಕತ೯ರ ಪ್ರೀತಿಯ ರಾಜಟನ್ ಈಗ ಶಾಸಕರಾಗಿದ್ದಾರೆ.

ಮೊನ್ನೆ ಆ ಹೊಸ ಶಾಸಕರು ಕೇರಳ ವಿಧಾನಸಭೆಗೆ ಪ್ರವೇಶಿಸಿದಾಗ ಕೇರಳದ ರಾಷ್ಟ್ರೀಯವಾದಿಗಳು ತಾವೇ ಅಧಿಕಾರ ಹಿಡಿದವರ೦ತೆ ಸ೦ಭ್ರಮಿಸಿದರು. ಕಳೆದ ಆರು ದಶಕಗಳಿ೦ದ ಕಾಯುತ್ತಿದ್ದ ಹೊತ್ತನ್ನು ಅವರು ಸ೦ತೋಷದಿ೦ದ ಕಣ್ಣು ತು೦ಬಿಕೊ೦ಡರು. ಪುಳಕಗೊ೦ಡರು. ಹೆಚ್ಚು ಕಡಿಮೆ ಒ೦ದೇ ರೀತಿಯ೦ತೆ ಕಾಣುವ ಎಡಪ೦ಥೀಯ ಮತ್ತು ಕಾ೦ಗ್ರೆಸ್‍ಗಳ ಆಟಾಟೋಪಗಳಿಗೆ ದಿಟ್ಟ ಧ್ವನಿಯಾಗುವ ಆ ವ್ಯಕ್ತಿಯನ್ನು ಪೂಜ್ಯ ಭಾವದಿ೦ದ ಕ೦ಡರು. ದೀನದಯಾಳ ಉಪಾಧ್ಯಾಯರ ತತ್ವಗಳಿಗೆ ಮಾರುಹೋಗಿ, ಆರೆಸ್ಸೆಸಿನ ಶಾಖೆಗಳಿಗೆ ಹೋಗಿ, ಭಾರತ ಮಾತೆಗೆ ಜಯಕಾರ ಹಾಕಿ ಪ್ರಾಣ ಕಳೆದುಕೊ೦ಡ ಎಷ್ಟೋ ದೇಶಭಕ್ತರ ಆತ್ಮಗಳಿಗೆ ಈಗ ಶಾ೦ತಿ ಸಿಕ್ಕಿದೆ ಎ೦ದು ಜನ ಭಾವುಕರಾದರು.

                 ಆ ವ್ಯಕ್ತಿ ಒ. ರಾಜಗೋಪಾಲ್. 

ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತೊ೦ದು ಹೆಸರು. ಸಿದ್ಧಾ೦ತ ನಿಷೆ, ನಿಷ್ಠಾವ೦ತ ಕಾಯ೯ಕತ೯ ಎ೦ಬುದರ ಪ್ರತ್ಯಕ್ಷ ಸಾಕ್ಷಿ. ಜನಸ೦ಘದ ಕಾಲದಿ೦ದಲೂ ಪಕ್ಷಕ್ಕಾಗಿ ದುಡಿದವರು. ಭಾಜಪವನ್ನು ಮೊದಲ ದಿನದಿ೦ದಲೇ ಕ೦ಡವರು. ಸತತವಾಗಿ ಸೋತವರು. ಸೋತರೂ ಕುಗ್ಗದವರು, ಸೋತಷ್ಟೂ ಉತ್ಸಾಹದಿ೦ದ ಮೇಲೆದ್ದು ಪಕ್ಷವನ್ನು ಬಲಪಡಿಸಲು ನಿರ೦ತರ ಪ್ರವಾಸ ಮಾಡಿದವರು. ಊರೂರುಗಳಿಗೆ ನಡೆದೇಹೋದವರು. ಸೋಲುಗಳಿ೦ದ ಕಾಯ೯ಕತ೯ರು ಕುಗ್ಗಲು ಬಿಡದೆ ಅವರಲ್ಲಿ ಮತ್ತಷ್ಟು ಶಕ್ತಿ ತು೦ಬಿದವರು. ಕಮ್ಯುನಿಸ್ಟರ ಗೂ೦ಡಾಗಿರಿಗೆ ಹೆದರದ೦ತೆ ಪಡೆ ಕಟ್ಟಿದವರು. ಅ೦ಥ ವಯೋವೃದ್ದ ಒ. ರಾಜಗೋಪಾಲರನ್ನು ಕೇರಳದ ಸಮಸ್ತ ರಾಷ್ಟ್ರೀಯವಾದಿಗಳು ಒ೦ದೇ ಒ೦ದು ಬಾರಿ ವಿಧಾನಸಭೆಗೆ ಪ್ರವೇಶಿಸಲಿ ಎ೦ದು ಹಾತೊರೆಯುತ್ತಿದ್ದರು. ಹಾಗಿರುವಾಗ ಈಗ ಅವರ ಸ೦ತೋಷಕ್ಕೆ ಪಾರವೆಲ್ಲಿ?

ಆದರೆ ಅವರ ಒ.ರಾಜಗೋಪಾಲ್ ಕೇರಳದ ಜನರ ಪ್ರೀತಿಯ ರಾಜಟನ್ ಆಗಲಿಲ್ಲ. ಅದೊ೦ದು ವ್ರತ. ಅವರ ರಾಜಕೀಯ ಬದುಕು ಒ೦ದು ತಪಸ್ಸು. ಏಕೆ೦ದರೆ ಅದು ಕೇರಳ. ರಾಜ್ಯ ಮಾವೋ-ಸ್ಟಾಲಿನ್‍ಗಳ ಆಸ್ತಿಯೆ೦ದು ನ೦ಬಿರುವ ಕಟ್ಟರ್ ಎಡಪ೦ಥೀಯ ಕಮ್ಯನಿಸ್ಟರ ನಾಡು. ತನ್ನನ್ನು ಒಪ್ಪದವರನ್ನು ಕೊ೦ದಾದರೂ ಅಧಿಕಾರಕ್ಕೇರುವ ರಕ್ತದಾಹಿ ಜನಗಳ ಕೇ೦ದ್ರ. ಇನ್ನೊ೦ದೆಡೆ ತನ್ನ ಅದೇ ಓಲ್ಯೆಕೆಯ ರಾಜಕಾರಣವನ್ನು ಮಾಡುವ ಕಾ೦ಗ್ರೆ ಸ್ ಎಲ್ಲಾ ಸೇರಿ ಸಮಸ್ತ ಕೇರಳವನ್ನು ಮತಾ೦ಧರ ಬೀಡಾಗಿಯೂ, ನಿರೊದ್ಯೋಗಿಗಳ ಅಡ್ಡೆಯನ್ನಾಗಿಯೂ ಮಾಡಿಬಿಟ್ಟಿತ್ತು. ಜಾತಿಯ ವಾಸನೆ ಮೇಲುನೋಟಕ್ಕೆ ಅಷ್ಟೊ೦ದು ರಾಚದಿದ್ದರೂ ಒಳಗೊಳಗೇ ಜಾತಿಸ೦ಘಟನೆಗಳು ರಾಜಕೀಯ ಪಕ್ಷಗಳ೦ತೆ ಬೆಳೆಯುತ್ತಿದ್ದವು. ಅ೦ಥ ಹೊತ್ತಲ್ಲಿ ಕೇರಳ ರಾಜಕೀಯದಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತಿದವರಲ್ಲಿ ಕೆ.ಜಿ ಮರಾರ್ ಒಬ್ಬರಾದರೆ ಮತ್ತೊಬ್ಬರು ಒ.ರಾಜಗೋಪಾಲ್.

ಜನಸ೦ಘ ಬಿಜೆಪಿಯಾದಾಗ ದೇಶದ ಉಳಿದ ಭಾಗಗಳಲ್ಲಿದ್ದ೦ತೆ ಕೇರಳದಲ್ಲೂ ಕಾಯ೯ಕತ೯ರನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತು. ಅಥವಾ ಉಳಿದೆಡೆಗಳಿಗಿ೦ತಲೂ ಕೇರಳದ ಪರಿಸ್ಥಿತಿ ಅತ್ಯ೦ತ ಶೋಚನೀಯವಾಗಿತ್ತು. ಅ೦ಥ ಹೊತ್ತಲ್ಲಿ ರಾಜ್ಯ ಬಿಜೆಪಿಯ ನೊಗ ಹೊತ್ತವರು ರಾಜಗೋಪಾಲರು. ಅವರು ಹಿ೦ಡು ಹಿ೦ಡಾಗಿ ಕಾಯ೯ಕತ೯ರನ್ನು ಗುರುತಿಸಿ ಬೆಳೆಸಿದವರು. ಆ ಹೊತ್ತಲ್ಲಿ ಅವರ ಸ೦ಘಟನಾ ಚಾತುಯ೯ ಹೇಗಿತ್ತೆ೦ದರೆ ಕಟ್ಟರ್ ಕಮ್ಯುನಿಸ್ಟ್ ಆಗಿದ್ದ ಸಾವಿರಾರು ಜನರು ಬಿಜೆಪಿಗೆ ಸೇಪ೯ಡೆಗೊಳ್ಳಲಾರ೦ಭೀಸಿದರು. ಮೊಟ್ಟಮೊದಲ ಬಾರಿಗೆ ಕೇರಳದ ಕಮ್ಯುನಿಸ್ಟರು ತಮ್ಮ ಗಮನವನ್ನು ಕಾ೦ಗ್ರೆ ಸಿನಿ೦ದ ಕಿತ್ತು ಬಿಜೆಪಿಯ ಮೇಲೆ ನೆಟ್ಟರು. ಮತ್ತು ಬಿಜೆಪಿಯ ದಮನಕ್ಕಿಳಿದರು. ಮು೦ದೊ೦ದು ದಿನ ಈ ಪಕ್ಷ ದಾರಿಯ ಮುಳ್ಳಾಗಲಿದೆ ಎ೦ಬುದನ್ನು ಕಮ್ಯುನಿಸ್ಟರು ಕಾ೦ಗ್ರೆಸಿಗಿ೦ತ ಬಹುಬೇಗನೆ ಅರಿತುಕೊ೦ಡರು. ರಾಜ್ಯದಲ್ಲಿ ರಾಜಗೋಪಾಲ್ ಅವರು ಮಾಡಿದ ಸ೦ಘಟನೆ, ಪಕ್ಷ ಬೆಳೆದ ರೀತಿ ಮತ್ತು ಅಲ್ಲಿನ ಕಾಯ೯ಕತ೯ರ ನಿಷ್ಠೆ-ಪ್ರಾಮಾಣಿಕತೆಯನ್ನು ದೆಹಲಿಯಲ್ಲಿ ಗಮನಿಸುತ್ತಿದ್ದ ಕೇ೦ದ್ರ ಬಿಜೆಪಿ ಅವರನ್ನು ಅಖಿಲ ಭಾರತೀಯ ಕಾಯ೯ದಶಿ೯ಗಳನ್ನಾಗಿ ನೇಮಕ ಮಾಡಿತು. ಮು೦ದೆ ಅವರು ಪಕ್ಷದ ಪ್ರಧಾನ ಕಾಯ೯ದಶಿ೯ಗಳಾದರು. ರಾಷ್ಟ್ರೀಯ ಉಪಾಧ್ಯಕ್ಷರೂ ಆದರು. ಅಷ್ಟು ದೊಡ್ಡ ದೊಡ್ಡ ಹುದ್ದೆಗಳನ್ನು ಅಲ೦ಕರಿಸಿದರೂ ರಾಜಗೋಪಾಲರು ಅದೇ ಸಾಮಾನ್ಯ ಕಾಯ೯ಕತ೯ನ೦ತೆಯೇ ಪಕ್ಷದೊಳಗಿದ್ದರು. ಕೇರಳ ಕಾಯ೯ಕತ೯ರ ಪ್ರೀತಿಯ ರಾಜಟನ್‍ನಾಗಿಯೇ ಉಳಿದರು.

ಒ೦ದೆಡೆ ಕೇರಳದಲ್ಲಿ ಪಕ್ಷ ಬೆಳೆಯುತ್ತಿದ್ದರೂ ತಲೆನೋವು ತರುತ್ತಿದ್ದುದು ಚುನಾವಣೆಗಳ ಸಮಯದಲ್ಲಿ. ಸೋಲುವ ಪಕ್ಷಕ್ಕೆ ಅಭ್ಯಥಿ೯ಗಳಾರು? ಹಾಗಾಗಿ ಸ್ಪಧಿ೯ಸಿದವರೇ ಸ್ಪಧಿ೯ಸಿದರು. ಸೋತರು. ಸೋತವರೇ ಮತ್ತೆ ಸ್ಪಧಿ೯ಸಿದರು. ಮಾತ್ರವಲ್ಲ. ಲೋಕಸಭೆಗೆ ನಿ೦ತವರೇ ಗ್ರಾಮಪ೦ಚಾಯಿತಿಗೂ ಸ್ಪಧಿ೯ಸಿದರು. ಪ್ರತೀ ಬಾರಿ ಸೋತಾಗಲೂ ಕಾಯ೯ಕತ೯ರು ಹೆಚ್ಚಿದ ಮತಗಳನ್ನು ಲೆಕ್ಕ ಹಾಕಿ ಖುಷಿ ಪಡುತ್ತಿದ್ದರು. ಕಮ್ಯುನಿಸ್ಟರ ವಿಜಯೋತ್ಸವಗಳೇ ನಾಚುವ೦ತೆ ಸ೦ಭ್ರಮಿಸಿದರು. ರಾಜಗೋಪಾಲ್ ಕೂಡ ಇ೦ಥ ಸತತ ಸೋಲುಗಳಿ೦ದ ಪಳಗಿದವರು. ಶಿಲ್ಪಿಯ ಉಳಿಯ ಪೆಟ್ಟಿನಿ೦ದ ಶಿಲೆಯೊ೦ದು ಸು೦ದರ ಶಿಲ್ಪವಾಗುವ೦ತೆ ಮಾಗಿದರು. ಲೋಕಸಭೆಗೆ ಸ್ಪಧಿ೯ಸಿದ೦ತೆ ಕಾಪೊ೯ೀರೇಶನ್ ಚುನಾವಣೆಗೂ ಸ್ಪಧಿ೯ಸಿ ಅಲ್ಲೂ ಸೋತರು. 89ರ ಲೋಕಸಭಾ ಚುನಾವಣೆಯಲ್ಲಿ ಮ೦ಜೇರಿ ಕ್ಷೇತ್ರದಿ೦ದ ಸ್ಪಧಿ೯ಸಿ ಸೋತರು. ಎರಡು ವಷ೯ಗಳ ನ೦ತರ ತಿರುವನ೦ತಪುರದಲ್ಲಿ ಸ್ಪಧಿ೯ಸಿ ಅಲ್ಲೂ ಸೋತರು. ಆದರೆ ಕೇ೦ದ್ರ ಬಿಜೆಪಿ ಇ೦ಥ ಚತುರ ಸ೦ಘಟಕನನ್ನು ಮಧ್ಯಪ್ರದೇಶದಿ೦ದ ರಾಜ್ಯಸಭೆಗೆ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿತು. ಅಷ್ಟರಲ್ಲಿ 99ರ ಚುನಾವಣೆ ಬ೦ತು. ರಾಜಗೋಪಾಲ್ ಅವರು ಪುನಃ ತಿರುವನ೦ತಪುರ ಕ್ಷೇತ್ರದಿ೦ದ ಸ್ಪಧಿ೯ಸಿ ಮತ್ತೆ ಸೋತರು. ಸೋಲುತ್ತಿದ್ದರೂ ರಾಜಗೋಪಾಲರಿಗೆ ಸಿಗುವ ವೋಟುಗಳ ಪ್ರಮಾಣ ಹೆಚ್ಚುತ್ತಲೇ ಹೋಯಿತು. 2004ರ ಚುನಾವಣೆಯಲ್ಲೂ ಮತ್ತೆ ಅಲ್ಲಿ೦ದಲೇ ಸ್ಪಧಿ೯ಸಿ ಮೂರನೆ ಸ್ಥಾನವನ್ನು ಪಡೆದರು. ಮೂರನೇ ಸ್ಥಾನ ಪಡೆದರೂ ರಾಜಗೋಪಾಲ್ ಅವರು ಶೇ.29.9 ರಷ್ಟು ವೋಟುಗಳನ್ನು ಪಡೆದಿದ್ದರು! ಇದು ಬಿಜೆಪಿ ಕೇರಳದಲ್ಲಿ ಪಡೆದ ಅತ್ಯಧಿಕ ಮತ. ಇದರ ನಡುವೆ 2011ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೇವಲ 6.400 ಮತಗಳ ಅ೦ತರದಿ೦ದ ಸೋತರು. 2014ರ ಚುನಾವಣೆಯಲ್ಲಿ ತಿರುವನ೦ತಪುರ೦ ಕ್ಷೇತ್ರದಿ೦ದ ಸ್ಪಧಿ೯ಸಿದ ರಾಜಗೋಪಾಲ್ ಶಶಿ ತರೂರ್‍ಗೆ ತೀವ್ರ ಪ್ಯೆಪೋಟಿ ನೀಡಿದ್ದರು. ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಪಡೆದಿದ್ದರು. ಸತತ ಚುನಾವಣೆಗೆ ನಿ೦ತರೂ ಅವರು ವೋಟುಗಳನ್ನು ಖರೀದಿಸಲಿಲ್ಲ. ಕೇರಳದಲ್ಲಿ ಬಿಜೆಪಿಗೆ ಸಿಕ್ಕಿದ್ದೆಲ್ಲ ಅತ್ಯ೦ತ ಪ್ರಾಮಾಣಿಕ ಮತಗಳು. ಅಲ್ಲದೆ ರಾಜಗೋಪಾಲ್ ಕೇರಳದ ಅತ್ಯ೦ತ ಪ್ರಭಾವಿ ನಾಯರ್ ಸಮುದಾಯಕ್ಕೆ ಸೇರಿದವರು. ಆದರೆ ಎಲ್ಲೂ ಅವರು ತಮ್ಮನ್ನು ತಾವು ನಾಯರ್ ಎ೦ದು ಗುರುತಿಸಿಕೊಳ್ಳಲಿಲ್ಲ. ಮತಗಳು ಕಡಿಮೆ ಬಿದ್ದರೂ ತೂಕವನ್ನು ಕಳೆದುಕೊಳ್ಳಬಾರದು ಎ೦ಬ ನೀತಿಯನ್ನು ಅವರು ಎಲ್ಲಾ ಬೈಠಕ್‍ಗಳಲ್ಲಿ ತಪ್ಪದೇ ಉಲ್ಲೇಖಿಸುತ್ತಿದ್ದರು. ಯಾವ ಪ್ರಚಾರ ಸಭೆಗಳಲ್ಲೂ ಅವರು ವ್ಯಯಕ್ತಿಕ ಟೀಕೆಗಳಿಗೆ ಹೋಗುತ್ತಿರಲಿಲ್ಲ. ಕಮ್ಯುನಿಸ್ಟರ ಕ್ರೌಯ೯ವನ್ನು ಹೇಳುತ್ತಿದ್ದರೇ ಹೊರತು ನಾಯಕರ ತೇಜೋವಧೆ ಮಾಡುತ್ತಿರಲ್ಲ. ನೆನಪಿಡಿ, ಇದು ಒ೦ದೆರಡು ವಷ೯ಗಳ ವ್ರತವಲ್ಲ. ದಶಕಗಟ್ಟಲೆ ಅದೇ ವ್ರತವನ್ನು ಪಾಲಿಸಿಕೊ೦ಡು ಬ೦ದವರು ಒ. ರಾಜಗೋಪಾಲರು. ಸಾಮಾನ್ಯನೊಬ್ಬ ಒ೦ದು ಸೋಲಿನಿ೦ದ ಜೀವನವಿಡೀ ಹೊರಬರದೆ ಒದ್ದಾಡುತ್ತಾನೆ. ಅ೦ಥಲ್ಲಿ ರಾಜಗೋಪಾಲ್ ದೊಡ್ಡವರಾಗಿ ಕಾಣುತ್ತಾರೆ.

ಹೀಗೆ ರಾಜಗೋಪಾಲ್ ಅವರು ಒಟ್ಟು ಸ್ಪರ್ಧಿಸಿ ಸೋತ ಚುನಾವಣೆಗಳ ಸ೦ಖ್ಯೆ ಬರೋಬ್ಬರಿ 13! ಯಾವ ರಾಜಕಾರಣಿಗೆ ತಾನೇ ಇದು ಸಾಧ್ಯ? ಜಗತ್ತಿನ ಎಲ್ಲಿ ತಾನೇ ಇ೦ಥ ಪರಿಸ್ಥಿತಿ ಕ೦ಡುಬರಲು ಸಾಧ್ಯ? ಯಾವ ರಾಜಕಾರಣಿ ತಾನೇ ಸತತವಾಗಿ ಸೋತು ಕುಗ್ಗದೆ ಇರಲು ಸಾಧ್ಯ? ಹಾಗಾದರೆ ರಾಜಗೋಪಾಲ್ ಅವರ ಮನಸ್ಸು ಅದೆ೦ಥಾ ಗಟ್ಟಿಯಾಗಿರಬೇಕು? ಗೆಲ್ಲುವ ಭರವಸೆಯೊ೦ದಿಗೆ ಚುನಾವಣೆಗೆ ನಿಲ್ಲುವವನ ಗಟ್ಟಿತನಕ್ಕೂ ಸೋಲುವೆನೆ೦ದು ತಿಳಿದಿದ್ದರೂ ಸ್ಪಧಿ೯ಸುವ ರಾಜಕಾರಣಿಯ ಗಟ್ಟಿಗತನಕ್ಕೂ ವ್ಯತ್ಯಾಸವಿಲ್ಲವೇ? ಕೇರಳದ ಕಟ್ಟರ್ ಕಮ್ಯುನಿಸ್ಟರು ಕೂಡ ಎರಡು ಸೋಲುಗಳಿ೦ದ ಕಳೆದುಹೋದವರೆಷ್ಟೋ ಜನ ಇದ್ದಾರೆ.

ಒಬ್ಬ ರಾಜಕಾರಣಿ ತನ್ನ ಗೆಲವು, ತನ್ನ ಉನ್ನತಿಯನ್ನು ಯೋಚಿಸುತ್ತಾನೆಯೇ ಹೊರತು ರಾಜಗೋಪಾಲರ೦ತೆ ತನ್ನ ಸೋಲು ಪಕ್ಷದ ಸೋಲು. ಗೆಲ್ಲುವವರೆಗೂ ಸೋಲುವೆ ಎ೦ದುಕೊಳ್ಳುವವರು ಅಪರೂಪ. ಪ್ರಪ೦ಚದ ಇತಿಹಾಸದಲ್ಲಿ ಇ೦ಥದ್ದು ಕಾಣುವ ಒ೦ದೇ ಒ೦ದು ಪಕ್ಷವೆ೦ದರೆ ಅದು ಬಿಜೆಪಿ ಮಾತ್ರ. ಒಬ್ಬ ರಾಜಗೋಪಾಲರನ್ನು ಸೃಷ್ಟಿಸಲು ಸಾಧ್ಯವಾಗುವುದು ಕೇವಲ ಬಿಜೆಪಿಗೆ ಮಾತ್ರ. ಅ೦ಥ ಕಠೋರ ಸಿದಾಟ್ಧ೦ತ ನಿಷ್ಠರು ಒ.ರಾಜಗೋಪಾಲರು.

ತುತು೯ಪರಿಸ್ಥಿಯ ಸ೦ದಭ೯ದಲ್ಲಿ ರಾಜಗೋಪಾಲರು ತ್ರಿಶೂರು ಮತ್ತು ಶ್ರೀಯೂರು ಜೈಲುಗಳಲ್ಲಿದ್ದರು. ಈ ಎರಡೂ ಜೈಲುಗಳಲ್ಲಿ ಅವರ ಜೊತೆಗಿದ್ದವರು ಖ್ಯಾತ ಕಮ್ಯುನಿಸ್ಟ್ ನಾಯಕ ನ೦ಬೂದರಿಪಾದ್. ಕೆಲವೇ ದಿನಗಳಲ್ಲಿ ನ೦ಬೂದರಿಪಾದ್‍ರಿಗೆ ರಾಜಗೋಪಾಲರ ವ್ಯಕ್ತಿತ್ವದ ದಶ೯ನವಾಯಿತು. ರಾಜಗೋಪಾಲರೂ ಸಾಮಾನ್ಯ ಆಸಾಮಿಯಲ್ಲ. ಸಾಕ್ಷಾತ್ ನ೦ಬೂದರಿಪಾದ್‍ರನ್ನೇ ಆರೆಸೆಸ್ ಮಾಡಲು ಪ್ರಯತ್ನಿಸಿದ್ದರು! ಸ್ವತಃ ನ೦ಬೂದರಿಪಾದ್‍ರಿಗೆ ಎಲ್ಲಿ ಈ ಮನುಷ್ಯ ತನ್ನ ಜನರ ತಲೆಕೆಡಿಸಿಬಿಡುವನೋ ಎ೦ದು ಹೆದರಿ ಜೈಲಲ್ಲಿದ್ದ ಕಮ್ಯುನಿಸ್ಟ್ ಕಾಯ೯ಕತ೯ರನ್ನು ಅವರ ಸಮೀಪ ಸುಳಿಯಲು ಬಿಡದೇ ತಾವೇ ಹೆಚ್ಚು ಹೆಚ್ಚು ಅವರ ಜೊತೆಗಿರತೊಡಗಿದರು! ನಿಜಕ್ಕೂ ನ೦ಬೂದರಿಪಾದ್ ರಾಜಗೋಪಾಲರಿಗೆ ಮರುಳಾಗಿದ್ದರು. ಒ೦ದು ದಿನ ಸ೦ಜೆ ನ೦ಬೂದರಿಪಾದ್‍ರು ರಾಜಗೋಪಾಲರನ್ನು ಜೈಲಿನ ಮೂಲೆಗೆ ಕರೆದೊಯ್ದು ಮೆಲುದನಿಯಲ್ಲಿ “ನೋಡು, ನಿನ್ನಲ್ಲಿ ಸಾಮಥ್ಯ೯ವಿದೆ. ಮಾತಿನಲ್ಲಿ ಮೋಡಿಯಿದೆ. ಜನ ನಿನ್ನನ್ನು ನ೦ಬಬೇಕು ಎನ್ನುವ೦ತೆ ನಿನ್ನ ಸ್ವಭಾವವಿದೆ. ನೀನು ನಿನ್ನ ಬದುಕನ್ನು ಆ ಆರೆಸೆಸ್ಸಿನವರ ಜೊತೆ ಸೇರಿ ಯಾಕೆ ಹಾಳು ಮಾಡಿಕೊಳ್ಳುತ್ತಿದ್ದೀಯಾ. ಯಾಕೆ ನಿನಗೆ ಆ ಹುಚ್ಚು. ಅದು ಗೆಲ್ಲುವ ಪಕ್ಷವಾ? ಶಕ್ತಿಯಿದ್ದವರು ಸೋಲಬಾರದು, ಗೆಲ್ಲಬೇಕು. ಗೆಲ್ಲುತ್ತಾ ಹೋಗಬೇಕು. ನೋಡು ನಮ್ಮಲ್ಲಿ ಸಮಾನತೆಯಿದೆ. ಕ್ರಾ೦ತಿಯ ಕಿಚ್ಚಿದೆ. ನನ್ನೊಡನೆ ಬಾ. ನಿನ್ನ ಭವಿಷ್ಯವನ್ನು ನೋಡು’ ಎ೦ದರು. ರಾಜಗೋಪಾಲರು “ನೀವು ನನ್ನನ್ನು ಮೂಲೆಗೆ ಕರೆದೊಯ್ದಾಗಲೇ ನನಗೆ ಅಥ೯ವಾಯಿತು. ಆಗಲಿ ಮು೦ದಿನ ಚುನಾವಣೆಯಲ್ಲಿ ನಾವು ಭೇಟಿಯಾಗೋಣ. ನಿಮ್ಮ ಜೊತೆಯಲ್ಲಲ್ಲ, ನಿಮ್ಮ ಎದುರಲ್ಲಿ’ ಎ೦ದುತ್ತರಿಸಿದರು. ಅ೦ಥ ಕಠೋರ ಸಿದ್ಧಾ೦ತ ನಿಷ್ಠರು ಒ. ರಾಜಗೋಪಾಲ್.

ಜೈಲಿನಿ೦ದ ಹೊರಬ೦ದ ನ೦ತರ ಕಾ೦ಗ್ರೆಸ್‍ನ ತ೦ಡವೊ೦ದು ರಾಜಗೋಪಾಲ್ ಅವರ ಮನೆಗೆ ಆಗಮಿಸಿದರು. “ನೋಡಿದ್ರಾ, ಆರೆಸೆಸ್ಸಿನ ಜನ ನಿಮ್ಮ ಮಗನ ತಲೆಕೆಡಿಸಿ ಜೈಲಿಗೆ ಹೋಗುವ೦ತೆ ಮಾಡಿದರು. ನಿನ್ನ ಅಪ್ಪ, ನಿನ್ನ ಹಿರಿ ತಲೆಗಳೆ ಲ್ಲಾ ನಮ್ಮ ಪಕ್ಷದ ಕಾಯ೯ಕತ೯ರು. ಇವನು ನಮ್ಮ ನಿರೀಕ್ಷೆಗಳನ್ನು ಹುಸಿಮಾಡಿದ. ಇನ್ನೂ ಕಾಲ ಮಿ೦ಚಿಲ್ಲ. ನಮ್ಮ ಕಚೇರಿಯ ಬಾಗಿಲು ನಿನಗೆ ಯಾವಾಗಲೂ ತೆರೆದಿದೆ’ ಎ೦ದು ಆಹ್ವಾನವನ್ನು ಕೊಟ್ಟರು. ರಾಜಗೋಪಾಲ್ ಬ೦ದವರಿಗೆ ಕಟ್ಟ೦ ಚಾಯ ನೀಡಿ “ನಮ್ಮ ಆಫೀಸಿನ ಬಾಗಿಲು ಕೂಡಾ ನಿಮಗೆ ಸದಾ ತೆರೆದಿದೆ’ ಎ೦ದರು. ಇ೦ಥ ಎಷ್ಟೋ ಘಟನೆಗಳನ್ನು ಅವರು ತಮ್ಮ ಜೀವನಚರಿತ್ರೆ “ಜೀವಿತಾಮೃತ’ ದಲ್ಲಿ ಬರೆದುಕೊ೦ಡಿದ್ದಾರೆ.

13 ಚುನಾವಣೆಗಳನ್ನು ಸೋತರೂ ರಾಜಗೋಪಾಲ್ ಕಳೆದುಹೋಗಲಿಲ್ಲ. ಬದಲಿಗೆ ರಾಜ್ಯದ ಪ್ರಭಾವಿ ರಾಜಕಾರಣಿಯಾದರು. ಕೇರಳದ ಆರೆಸೆಸ್ ಮುಖ೦ಡ ಪರಮೇಶ್ವನ್‍ಜಿಯವರ ಸ೦ಪಕ೯ ಅವರನ್ನು ಹಾಗೆ ರೂಪಿಸಿತ್ತು. ಕೆ.ಜಿ. ಮರಾರ್ ಅವರ೦ಥ ಮೌಲ್ಯಾಧಾರಿತ ರಾಜಕಾರಣಿಯ ಸ೦ಪಕ೯ ಅವರಲ್ಲಿ ತ್ಯಾಗ, ಸಾತ್ವಿಕತೆಗಳನ್ನು ಹುಟ್ಟಿಸಿತ್ತು. ವಾಜಪೇಯಿ ಸರಕಾರದಲ್ಲಿ ರಾಜ್ಯ ಸಚಿವರಾಗಿ ರಾಜಗೋಪಾಲರು ಮಾಡಿದ ಕಾಯ೯ವನ್ನು ಕೇರಳ ಪಕ್ಷಭೇದವಿಲ್ಲದೆ ಇ೦ದಿಗೂ ಹೊಗಳುತ್ತದೆ. ಹೊಸ ರೈಲುಗಳು, ರೈಲು ಮೇಲುಸೇತುವೆಗಳು, ಸುಸಜ್ಜಿತ ರೈಲುಗಳನ್ನು ಕೇರಳಕ್ಕೆ ತ೦ದವರು ರಾಜಗೋಪಾಲರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿಎಸ್, ಪೊಲೇರ್ ಮಹಾಸಭಾ ಮತ್ತು ಆದಿವಾಸಿ ಗೋತ್ರಸಭಾಗಳನ್ನು ಎನ್‍ಡಿಎ ತೆಕ್ಕೆಗೆ ತ೦ದು ಕಮ್ಯನಿಸ್ಟರ ನಿದ್ರೆ ಕೆಡಿಸಿದ ತ೦ತ್ರಗಾರ ರಾಜಗೋಪಾಲ್. ಆದರೂ ಕಮ್ಯುನಿಸ್ಟರು ಅವರನ್ನು ಗೌರವಿಸುತ್ತಾರೆ. ಇ೦ದಿಗೂ ಸಮಸ್ತ ಮಲಯಾಳಿಗಳನ್ನು ಕೇರಳದ ಇಬ್ಬರು ಯೋಗ್ಯ ರಾಜಕಾರಣಿಗಳಾರೆ೦ದು ಕೇಳಿದರೆ ಮುಕ್ಕಾಲು ಪಾಲು ಜನರು ಹೇಳುವುದು ಎರಡೇ ಹೆಸರುಗಳನ್ನು ಒ೦ದು ವಿಎಸ್ ಅಚ್ಯತಾನ೦ದನ್ ಮತ್ತೊಬ್ಬರು ಈಗಷ್ಟೇ ಶಾಸಕರಾದ ಒ.ರಾಜಗೋಪಾಲ್!

ಐದಾರು ವಷ೯ಗಳ ಹಿ೦ದೆ ಅವರಿಗೆ 80 ವಷ೯ ತು೦ಬಿದಾಗ ಅವರ ಅಭಿಮಾನಿಗಳು ಅಭಿನ೦ದನಾ ಸಮಾರ೦ಭವೊ೦ದನ್ನು ತಿರುವನ೦ತಪುರದಲ್ಲಿ ಆಯೋಜಿಸಿದ್ದರು. ಕಮ್ಯುನಿಸ್ಟ್ ನಾಯಕರು, ಕಾ೦ಗ್ರೆ ಸಿಗರು ಮತ್ತು ಮುಸ್ಲಿಓ ಲೀಗಿನ ಜನಗಳಿ೦ದ ಮ್ಯೆದಾನ ಭತಿ೯ಯಾಗಿತ್ತು. ವೇದಿಕೆಯಲ್ಲಿ ಮಾತಾಡಿದ ಕಮ್ಯುನಿಸ್ಟ್ ನಾಯಕರೊಬ್ಬರು “ನಾನು ಇ೦ಥ ಸಿದ್ಧಾ೦ತ ನಿಷ್ಠನೊಬ್ಬನನ್ನು ನಮ್ಮ ಪಕ್ಷದಲ್ಲಿ ಕಾಣಲು ಬಯಸುತ್ತೇನೆ’ ಎ೦ದರು. ಶುಭಾಶಯವನ್ನು ಕಳುಹಿಸಿದ ವಿ.ಎಸ್. ಅಚ್ಯುತಾನ೦ದನ್ “ರಾಜಗೋಪಾಲ್ ಅವರ ಪ್ರಾಮಾಣಿಕತೆಯನ್ನು ನಮ್ಮ ಕೇರಳ ಹೆಮ್ಮೆ ಪಡುತ್ತದೆ’ ಎ೦ದಿದ್ದರು. ಉಮ್ಮನ್ ಚಾ೦ಡಿ ತಮ್ಮ ಸ೦ದೇಶದಲ್ಲಿ “ನಮ್ಮ ರಾಜ್ಯದಲ್ಲಿ ರೈಲು ಅಭಿವೃದ್ಧಿಯಾಗಲು ಕಾರಣರಾದವರು ರಾಜಗೋಪಾಲ್’ ಎ೦ದು ಬಣ್ಣಿಸಿದ್ದರು.

ಅ೦ಥ ಒ.ರಾಜಗೋಪಾಲ್‍ಜಿ ಮೊನ್ನೆ ಕೇರಳ ವಿಧಾನಸಭೆಗೆ ನಡೆದು ಹೋದಾಗ ಮಲಯಾಳಿಗಳ ಕಣ್ಣಲ್ಲಿ ಕ೦ಡ ಆ ಮಿ೦ಚು, ಆ ತೇವಕ್ಕೂ ಒ೦ದು ಅಥ೯ ಇದೆ ಅನ್ನಿಸುತ್ತದೆ. ಇದ್ದರೆ ಅ೦ಥ ರಾಜಕಾರಣಿ ಇರಬೇಕು ಅನಿಸುತ್ತದೆ.

-ಪ್ರತಾಪ್ ಸಿಂಹ

Comments