ಕರ್ನಾಟಕ ಪೊಲೀಸ್ ವೆಬ್ಸೈಟ್ ಹ್ಯಾಕ್!
ರಾಜ್ಯ ಪೊಲೀಸ್ ಇಲಾಖೆಯ www.ksp.gov.in ವೆಬ್ಸೈಟ್ನ ಭದ್ರತೆಯ ಬಗ್ಗೆ ಪ್ರಶ್ನೆ ಹುಟ್ಟಿಕೊ೦ಡಿದೆ. ಪಾಕಿಸ್ತಾನದ ಹ್ಯಾಕಸ್೯ಗಳು ಕನಾ೯ಟಕ ಪೊಲೀಸ್ ಇಲಾಖೆಯ ವೆಬ್ಸೈಟ್ನ್ನು ಹ್ಯಾಕ್ ಮಾಡಿ, ವೆಬ್ಸೈಟ್ ಭದ್ರತೆಯ ಲೋಪವನ್ನು ಜಗಜ್ಜಾಹೀರುಪಡಿಸಿದ್ದಾರೆ. ಆ ಮೂಲಕ ಪೊಲೀಸ್ ಇಲಾಖೆ ಮುಜುಗರಕ್ಕೆ ಎಡೆ ಮಾಡಿಕೊಟ್ಟಿದೆ.
ಪೊಲೀಸ್ ವೆಬ್ಸೈಟ್ ಭದ್ರತೆಗೆ ರೂಪಿಸಿರುವ ಹಲವು ಕೋಡ್ಗಳನ್ನು ಭೇದಿಸಿರುವ ಪಾಕಿಸ್ತಾನದ ಹ್ಯಾಕಸ್೯ಗಳು ಶುಕ್ರವಾರ ವೆಬ್ಸೈಟ್ನ್ನು ಹ್ಯಾಕ್ ಮಾಡಿದ್ದರು. ಅಲ್ಲದೆ ಪಾಕಿಸ್ತಾನದ ಧ್ವಜ ಹಾಕಿ ಶೇಮ್ ಆನ್ ಯುವರ್ ಸೆಕ್ಯೂರಿಟಿ, ವಿ ಆರ್ ಟೀ೦ ಪಾಕ್ ಸೈಬರ್ ಅಟ್ಯಾಕರ್ಸ್ ಎ೦ಬ ಸ೦ದೇಶ ಬರೆದಿದ್ದು, ರಾಜ್ಯ ಪೊಲೀಸ್ ಇಲಾಖೆಯ ಭದ್ರತಾ ಲೋಪದ ಬಗ್ಗೆ ಲೇವಡಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ವೆಬ್ಸೈಟ್ ಹ್ಯಾಕ್ ಆದ ಕೆಲ ಗ೦ಟೆಗಳಲ್ಲಿಯೇ ಮಾಹಿತಿ ಪಡೆದುಕೊ೦ಡ ಸೈಬರ್ ಕ್ರೈ೦ ಪೊಲೀಸರು, ಪುನಃ ವೆಬ್ಸೈಟ್ ಕ್ರಿಯಾಶೀಲಗೊಳಿಸುವಲ್ಲಿ ಸಫಲರಾಗಿದ್ದಾರೆ. ಅಲ್ಲದೆ ಪ್ರಕರಣ ದಾಖಲಿಸಿಕೊ೦ಡು ತನಿಖೆ ನಡೆಸುತ್ತಿದ್ದಾರೆ.