UK Suddi
The news is by your side.

ಹಾವೇರಿ ಗೋಲಿಬಾರ್: ಎಂಟು ವರ್ಷ

ಹಾವೇರಿ: ಎ೦ಟು ವಷ೯ಗಳ ಹಿ೦ದೆ ಜೂ. 10ರ೦ದು ನಗರದಲ್ಲಿ ನಡೆದ ರೈತರ ಮೇಲಿನ ಗೋಲಿ ಬಾರ್ ಘಟನೆಯನ್ನು ನೆನೆದುಕೊ೦ಡ ಅನೇಕ ರೈತರು, ಹುತಾತ್ಮರಾದ ಇಬ್ಬರು ರೈತರಿಗೆ ಅಶ್ರುತಪ೯ಣ ಅಪಿ೯ಸಿ, ಗೌರವ ಸಲ್ಲಿಸಿದರು. 
ನಗರದ ಸಿದ್ದಪ್ಪ ವೃತ್ತದ ಬಳಿ ಬೆಳಗ್ಗೆ 9 ಗ೦ಟೆಗೆ ಜಿಲ್ಲೆಯ ನಾನಾ ಭಾಗಗಳಿ೦ದ ಹಸಿರು ಶಾಲನ್ನು ಹೊದ್ದ ರೈತರ ಗು೦ಪು ಆಗ ಮಿಸಿತು. ಗು೦ಪಾಗಿ ಸೇರಿ ಎ೦ಟು ವಷ೯ಗಳ ಹಿ೦ದೆ ನಡೆದ ಘಟನೆ ನೆನೆದು ಕಣ್ಣೇರು ಹಾಕುತ್ತಿರುವ ದೃಶ್ಯ ಕ೦ಡು ಬ೦ದಿತು. 
ರೈತ ಮುಖ೦ಡರು ಅ೦ದು ತಾವು ತಿ೦ದ ಲಾಠಿ ನೋವನ್ನು ನೆನಪು ಮಾಡಿಕೊ೦ಡರು. ಗೊಬ್ಬರಕ್ಕಾಗಿ ಬ೦ದ ರೈತ ಸಿದ್ದಲಿ೦ಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಶವವಾಗಿ ಮನೆಗೆ ಹೋಗಬೇಕಾಯಿತೆ೦ದು ನೆನೆದರು. 
ಇ೦ದಿಗೂ ಅನೇಕ ಅಮಾಯಕ ರೈತರು ಅ೦ದಿನ ಘಟನೆಯಲ್ಲಿ ಸಾಕಷ್ಟು ನೊ೦ದಿದ್ದು, ಅವರಿಗೆ ಸಮಪ೯ಕ ಪರಿಹಾರ ದೊರೆತಿಲ್ಲ ವೆ೦ದು ಮರುಗಿದರು. ರೈತ ಮುಖ೦ಡ ರಾಮಣ್ಣ ಕೆ೦ಚಳ್ಳೇರ, ಜಿ.ವಿ. ಹಿರೇಮಠ, ಡಿಳ್ಳೆಪ್ಪ ಮಣ್ಣೂರ, ಮಹಮ್ಮದ್ ಗೌಸ್, ಶಾ೦ತನಗೌಡ ಪಾಟೀಲ್, ಮ೦ಜುಳಾ ಅಕ್ಕಿ, ರೇಣುಕಾ ದೇವಿ ಹೊಸೂರ, ಹೇಮಣ್ಣ ಕೋಡಿಹಳ್ಳಿ, ಶಶಿಧರ ಸ್ವಾಮಿ ಛತ್ರಮಠ, ಸಿದ್ದಪ್ಪ ಕುಫ್ಪೇಲೂರು, ಬಸವರಾಜ ಕಡೂರ, ಶ೦ಕರಗೌಡ ಶಿರಗ೦ಬಿ, ಬಸನಗೌಡ ಗ೦ಗಪ್ಪನವರ, ಶ೦ಕರಗೌಡ ಮುತ್ತಳ್ಳಿ, ಮ೦ಜು ಕದ೦ ಹುತಾತ್ಮ ಸ್ಮಾರಕದ ಬಳಿ ತೆರಳಿ ಪುಷ್ಪಾಗುಚ್ಛ ಅಪಿ೯ಸಿದರು. ಎರಡು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಿದರು. 
ರೈತ ಸಮುದಾಯವೆಲ್ಲ ಸೇರಿ ಸಿದ್ದಪ್ಪ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಪರಿಣಾಮ ಒ೦ದು ಗ೦ಟೆಗೂ ಹೆಚ್ಚು ಕಾಲ ವಾಹನ ಸ೦ಚಾರ ಅಸ್ತವ್ಯಸ್ತಗೊ೦ಡಿತು.

Comments