UK Suddi
The news is by your side.

ಜೆಡಿಎಸ್‌ನ 8 ಶಾಸಕರು ಅಮಾನತು

ರಾಜ್ಯಸಭೆ ಚುನಾವಣೆಯಲ್ಲಿ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ ಎಂಟು ಜನ ಶಾಸಕರನ್ನು ಜೆಡಿಎಸ್‌ ಪಕ್ಷದಿಂದ ಭಾನುವಾರ ಅಮಾನತು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಡ್ಡ ಮತ ಚಲಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು 8  ಶಾಸಕರನ್ನು  ಅಮಾನತು ಮಾಡಲಾಗಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಸಭೆಯಲ್ಲಿ ಪ್ರಕಟಿಸಿದರು.

ಅಮಾನತುಗೊಂಡ ಜೆಡಿಎಸ್‌ ಶಾಸಕರು:  ಜಮೀರ್‌ ಅಹಮದ್ ಖಾನ್, ಎನ್. ಚಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ,ಅಖಂಡ ಶ್ರೀನಿವಾಸಮೂರ್ತಿ, ಕೆ. ಗೋಪಾಲಯ್ಯ, ಭೀಮಾ ನಾಯ್ಕ, ರಮೇಶ ಬಂಡಿಸಿದ್ದೆಗೌಡ, ಇಕ್ಬಾಲ್‌ ಅನ್ಸಾರಿ.

Comments