UK Suddi
The news is by your side.

‘ಮೂಢನಂಬಿಕೆ’ ಜೈ ಎಂದ ಸಿಎಂ

BREAKING NEWS.
ನಮ್ ಸಿಎಂ ಕಾರ್ ಮೇಲೆ ಕಾಗೆ ಕುತ್ಗೊಂತು ಅಂತ ಮರುದಿನವೇ ಕಾರ್ ಚೇಂಜ್…

ನಮ್ಮ ಸಿದ್ದರಾಮಯ್ಯ ಸರ್ಕಾರ ಬಂದ್ ಸ್ವಲ್ಪೇ ದಿನದಲ್ಲಿ ರಾಜ್ಯದಲ್ಲಿ ಮೂಢನಂಬಿಕೆ ತಾಂಡವಾಡ್ತಾಯಿದೆ ಮೂಢ ನಎಂಬಿಕೆ ತೊಲಗಿಸ್ತಿವಿ, ಮುಢನಂಬಿಕೆ ವಿರೋಧಿ ಕಾಯ್ದೆ ತರ್ತಿವಿ ಅಂತ  ಸಿದ್ದರಾಮಯ್ಯನವರು ಹವಾ ಮಾಡಿದ್ರು ಇದು ಜನ ವಿರೋಧಿಕೂಡ ಆಗಿತ್ತು.

ಸಿಎಂ ಸರ್ ನೀವು ದೆವ್ರನ್ನ ನಂಬಲ್ವಾ ಅಂತ ಕೇಳಿದ್ರೆ ನಾನ್ ದೇವರ ಪೂಜೆನೆ ಮಾಡಲ್ಲ ಅನ್ನೋದಾ???

ಇರ್ಲಿ ಬಿಡಿ ಸಿಎಂ ಸಾಹೆಬ್ರೆ ..
ಹೌದು ಏನೋ ಒಂದ್ ಹೊಸ ಸುದ್ದಿ ಕೆಲಿದ್ನಲ್ಲ . ನಿಮ್ ಕಾರ್ ಮೇಲೆ ಕಾಗೆ ಕುಟ್ಕೊಂತು ಅಂತ ಕಾರೇ ಚೇಂಜ್ ಮಾಡಿದ್ರಂತೆ?  ಕಾರ್ ಮೇಲೆ ಕಾಗೆ ಕುಡಬಾರ್ದಾ ಸರ್? ಪಾಪ ಅದ್ಕೆನ್ ಗೊತ್ತು ನಾನ್ ಕುಂತಿರೋದು ಸಿಎಂ ಕಾರ್ ಅಂತ.

ಮೊದ್ಲೇ ಟೈಮ್ ಸರಿಯಿಲ್ಲ  ದರಿದ್ರದ್ದು ಈ ಕಾಗೆ ಬೇರೆ ನನ್ ಕಾರ್ ಮೇಲೆ ಕುತ್ಕೊಬೇಕಾ? ಇನ್ಮೇಕೆ ನನ್ನ್ ಕುರ್ಚಿಗೆನಾದ್ರೂ ತೊಂದ್ರೆ ಆದ್ರೇ? ಅಂತ ಭಯಪಟ್ಟು ನಮ್ ಸಿಎಂ ಸಾಹೇಬ್ರು ಕಾರೇ ಚೇಂಜ್ ಮಾಡಿದರೆ.

ಅಯ್ಯೋ ಮುಖ್ಯ ಮಂತ್ರಿಗಳೇ ಮೂಢನಂಬಿಕೆ ತೊಲಗಿಸ್ತಿವಿ ಅಂತ ಸಾಮಾನ್ಯ ಜನರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡೋಕ್ಕಿಂತ ಮುಂಚೆ ನೀವು ನಿಮ್ ತಲೆಲಿರೋ ಮೂಢನಂಬಿಕೆ ತೆಗಿರಿ ಆಮೇಲೆ ರಾಜ್ಯದ ಜನ ಸರಿ ಹೋಗ್ತಾರೆ. ಯಥಾ ರಾಜ ತಥಾ ಪ್ರಜಾ ಅಂತ ಹಿರಿಯರು ಸುಮ್ನೆ ಹೆಳಿದಾರಾ? ನೀವು ಮಾಡಿರೋ ಈ ಘನಂದಾರಿ ಕೆಲಸ ರಾಜ್ಯದ ಎಷ್ಟು ಜನರ ಮೇಲೆ ಕೆಟ್ಟ ಪರಿಣಾಮ ಬಿರುತ್ತೆ ಅಂತ ಗೊತ್ತ? ಎಷ್ಟು ಜನ  ನಿಮ್ಮ ಉದಾಹರಣೆ ಕೊಟ್ಟು ಜನ ಸಾಮಾನ್ಯರ ಲೂಟಿ ಮಾಡ್ತಾರೆ ಗೊತ್ತಾ?
ಕಾಗೆ ಕುತ್ಕೋಂತು ಅಂತ ಕಾರ್ ಚೇಂಜ್ ಮಾಡೋ ನಿಮ್ ತಲೆಲಿರೋ ಮೂಢನಂಬಿಕೆ ರಾಜ್ಯದ ಜನರಗಿಂತ ಸ್ವಲ್ಪ ಜಾಸ್ತಿನೇ ಆಯ್ತು. ಜನಸಾಮಾನ್ಯನಾದ್ರೆ ಕಾಗೆ ನೋಡಿ ಅದನ್ನ ಓಡ್ಸಿ ಸುಮ್ನಾಆಗ್ತಾಇದ್ದ. ನಿಮ್ಮಷ್ಟು ಮೂಢನಂಬಿಕೆ ತೊರಿಸ್ತಇರ್ಲಿಲ್ಲ.

ರಾಜ್ಯದ ಜನಾನೇ ನಿಮ್ನ ನೋಡಿ ನಗೋ ಸ್ಥಿತಿ ಬಂತಲ್ರಿ….

ಹೌದು ಮುಖ್ಯಮಂತ್ರಿಗಳೇ ನೀವ್ ಹೊಸ ಕಾರ್ ತುಗೊಂಡಿದ್ರೆ ಅದು ನಮ್ ದುಡ್ಡೇ ಆಲ್ವಾ??

-ಗಂಗಾಧರ್ ಅಮ್ಮಲಜೇರಿ

Comments