UK Suddi
The news is by your side.

ಸುಮೋ ಕುಸ್ತಿಯಲ್ಲಿ 8ನೇ ಸ್ಥಾನ ಪಡೆದ ಕಲಬುರ್ಗಿಯ ಮಲ್ಲೇಶಿ

ಭಾರತದ ಮಟ್ಟಿಗೆ ಅಷ್ಟೇನೂ ಚಿರಪರಿಚಿತವಲ್ಲದ ಸುಮೊ ಕುಸ್ತಿಯಲ್ಲಿ ಇದೀಗ ಕಲಬುರ್ಗಿಯ ಅಶೋಕ ಮಲ್ಲೇಶಿ ಹೊಸ ಹೆಜ್ಜೆ ಇಟ್ಟಿದ್ದಾರೆ.

ಕಲಬುರ್ಗಿ ನಗರದ ಅಶೋಕ ಮಲ್ಲೇಶಿ ಸುಮೊ ಕುಸ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಮೇ ತಿಂಗಳ ಕೊನೆಯ ವಾರ ಅಮೆರಿಕಾದಲ್ಲಿ ನಡೆದ 16 ನೇ ವಾರ್ಷಿಕ ಯುಎಸ್‌ ಓಪನ್‌ ಸುಮೊ ಚಾಂಪಿಯನ್‌ಷಿಪ್‌ನಲ್ಲಿ 8ನೇ ಸ್ಥಾನ ಪಡೆದಿದ್ದಾರೆ.

ಜುಲೈ 30 ರಂದು ಮಂಗೋ ಲಿಯಾದಲ್ಲಿ ನಡೆಯುವ ವಿಶ್ವ ಸುಮೊ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

Comments