UK Suddi
The news is by your side.

ಆತ ಮನುಷ್ಯ ಅನ್ನೋದೇ ಅನುಮಾನ!

ಯಾವ ಅಮೇರಿಕಾ ಅವರಿಗೆ ವೀಸಾ ನಿರಾಕರಣೆ ಮಾಡಿತ್ತೋ ಅದೇ ಅಮೇರಿಕಾ ಇಂದು ಅವರನ್ನು ಮತ್ತೆ-ಮತ್ತೆ ಕರೆಯುತ್ತಿದೆ! ಅಧ್ಯಕ್ಷ ಬರಾಕ್ ಒಬಾಮಾರಿಗಂತೂ ಮೋದಿಯವರನ್ನು ಕಂಡರೆ ಅತೀವ ಪ್ರೀತಿ. ಅದೇನು ಸುಮ್ಮ ಸುಮ್ಮನೆ ಹುಟ್ಟಿಕೊಂಡಿದ್ದಲ್ಲ. ಅವರ ಹಿಂದಿರುವ 125 ಕೋಟಿ ಭಾರತೀಯರ ಶಕ್ತಿ ಅದು. ಹಾಗಂತ ಅಷ್ಟೇ ಅಂದರೆ ತಪ್ಪಾದೀತು. 125 ಕೋಟಿ ಜನ ಮನಮೋಹನ ಸಿಂಗರೊಂದಿಗೂ ಇದ್ದರಲ್ಲ! ಮೋದಿ ತಮ್ಮ ಸಾಧನೆಯಿಂದ ಅಪರೂಪದ ಶಕ್ತಿ ಸಿದ್ಧಿಸಿಕೊಂಡಿದ್ದಾರೆ. ತನ್ನೊಳಗಿನ ದೇಶಭಕ್ತಿಗೆ ನೀರು ಗೊಬ್ಬರ ಎರೆದು ಹೆಮ್ಮರವಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಭಾರತದ ಇತಿಹಾಸದಲ್ಲಿ ಅವರಿಗೊಂದು ಮಹತ್ವದ ಪಾತ್ರ ದಕ್ಕಿರೋದು.
ಅಲ್ಲವೇ ಮತ್ತೇ? ಐದು ದಿನದಲ್ಲಿ ಐದು ದೇಶವನ್ನು ಮುಟ್ಟಿ, 40 ಮೀಟಿಂಗುಗಳಲ್ಲಿ ಭಾಗವಹಿಸಿ ಮೂರು ರಾಷ್ಟ್ರಗಳಲ್ಲಿ ರಾತ್ರಿಯನ್ನೇ ಕಳೆಯದೇ ವಿಮಾನದಲ್ಲಿಯೇ ನಿದ್ದೆ ಮಾಡಿ ಆರನೇ ದಿನ ಮರಳಿ ಭಾರತಕ್ಕೆ ಬಂದು ಎಂದಿನ ಕೆಲಸಗಳಲ್ಲಿ ತೊಡಗಿಬಿಡೋದು ಮನುಷ್ಯ ಮಾತ್ರನಿಗೆ ಸಾಧ್ಯವಾಗೋ ಮಾತಲ್ಲ. ಒಂದೋ ಆತ ದೇವರೇ ಆಗಿರಬೇಕು ಇಲ್ಲವೇ ಭಾರತವನ್ನು ಜಗದ್ಗುರುವಾಗಿಸುವ ಭೂತ ಹೊಕ್ಕಿರಬೇಕು.

ಅನುಮಾನವೇ ಇಲ್ಲ. ನಾನು ಮಾತನಾಡುತ್ತಿರೋದು ನಮ್ಮ ಪ್ರಧಾನಿ ನರೇಂದ್ರಮೋದಿಯವರ ಬಗ್ಗೆಯೇ. ಹಿಂದಿನ ಪ್ರಧಾನಿ ಮತ್ತು ಈಗಿನ ಪ್ರಧಾನಿಯವರ ನಡುವೆ ಒಂದು ಸಾಮ್ಯವಿದೆ. ಅವರು ಕೆಲಸವನ್ನೇ ಮಾಡುತ್ತಿರಲಿಲ್ಲವಾದ್ದರಿಂದ ನಮಗೆ ಮಾತನಾಡಲು ಬಹಳ ಅವಕಾಶವಿತ್ತು. ಮೋದಿಯವರು ಅದೆಷ್ಟು ದುಡಿಯುತ್ತಾರೆಂದರೆ ಅದರ ಕುರಿತಂತೆ ಈಗ ವಿಪುಲವಾಗಿ ಮಾತನಾಡಬಹುದು. ಅತಿಶಯೋಕ್ತಿ ಎನಿಸಿದರೂ ಸತ್ಯವೇ ಸರಿ.

ಅವರ ಯಾತ್ರೆ ಅಫ್ಘಾನಿಸ್ತಾನದಿಂದ ಶುರುವಾಯ್ತು. ಇಸ್ಲಾಂ ಮೂಲಭೂತವಾದಿಗಳಿಂದ ನಲುಗಿ ಹೋಗಿದ್ದ ರಾಷ್ಟ್ರವೊಂದಕ್ಕೆ ಹಿಂದೂ ಪ್ರಧಾನಿಯೊಬ್ಬ ಭೇಟಿ ಕೊಟ್ಟು 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಲ್ಲ, 75 ಸಾವಿರ ಹೆಕ್ಟೇರು ಕೃಷಿ ಭೂಮಿಗೆ ನೀರುಣಿಸಬಲ್ಲ ಅಣೇಕಟ್ಟನ್ನು ಉದ್ಘಾಟಿಸಿದರು. ಅದನ್ನು ಭಾರತವೇ ಹಣ ಹೂಡಿ ಕಟ್ಟಿಕೊಟ್ಟದ್ದರಿಂದ ಅಲ್ಲಿನ ಜನಕ್ಕೆ ಮೋದಿಯವರ ಕುರಿತಂತೆ ಆಸ್ಥೆ, ಪ್ರೀತಿ ಎಲ್ಲವೂ. ಭಾರತ-ಅಫ್ಘಾನಿಸ್ತಾನಗಳ ಸ್ನೇಹ ಸೂಚಕವಾದ ಈ ಅಣೆಕಟ್ಟಿನ ಉದ್ಘಾಟನೆಗೆ ಭಾರತದ ಧ್ವಜ ಹಿಡಿದು ಬಂದ ಅಫ್ಘನ್ ಮುಸಲ್ಮಾನರು ಕಣ್ಣಿಗೆ ಹಬ್ಬವನ್ನೇ ಉಂಟುಮಾಡಿದ್ದರು! ಸದಾ ಕಾಶ್ಮೀರದಲ್ಲಿ ಭಾರತದ ಧ್ವಜ ಸುಡುವ ಕಮ್ಯುನಿಸ್ಟ್ ಪ್ರೇರಿತ ಜೀಹಾದಿಗಳ ಚಿತ್ರ ನೋಡಿ ಬೇಸತ್ತ ಮನಸ್ಸುಗಳಿಗೆ ಇದು ಮುದವಲ್ಲದೇ ಮತ್ತೇನು?
ಎಷ್ಟು ವಿಚಿತ್ರ ನೋಡಿ. ಭಾರತದ ಹಿಂದೂ ಪ್ರಧಾನಿ ಅಫ್ಘಾನಿಸ್ತಾನದ ಮುಸಲ್ಮಾನರ ನೀರಿನ ಹಂಬಲವನ್ನು ಇಂಗಿಸಿದ. ಇದರಿಂದ ಕುಪಿತರಾದ ಪಾಕೀ ಪೊಲೀಸ್ ಪಡೆ ಗಡಿ ಭಾಗದಲ್ಲಿದ್ದ ಅಫ್ಘನ್ ನಿರಾಶ್ರಿತರನ್ನು ಬಡಿದು-ಚಚ್ಚಿ ತಮ್ಮ ಆಕ್ರೋಶ ತೀರಿಸಿಕೊಂಡಿತು. ಅವರು ಹೆಚ್ಚೆಂದರೆ ಆ ಅಣೆಕಟ್ಟನ್ನು ಧ್ವಂಸಗೊಳಿಸಿ ಸುಖಿಸಬಹುದಷ್ಟೇ. ಇದರ ಅರಿವಿದ್ದೇ ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಕೊಟ್ಟು ಅಲ್ಲಿನ ಅಧ್ಯಕ್ಷ ಅಶ್ರಫ್ ಗನಿ ಮೋದಿಯನ್ನು ಗೌರವಿಸಿದ್ದು.
ಅಫ್ಘನ್ ಯಾತ್ರೆ ಸುಮ್ಮನೆ ದೇಶ ತಿರುಗುವ ಚಟಕ್ಕೆ ಹುಟ್ಟಿಕೊಂಡಿದ್ದಲ್ಲ, ನೆನಪಿರಲಿ. ನಿಮ್ಮೂರಿನ ಗ್ರಾಮ ಪಂಚಾಯ್ತಿ ಸದಸ್ಯನೂ ಅವಕಾಶ ಕೊಟ್ಟರೆ ಅಫ್ಘನ್ಗೆ ಹೋಗ ಬಯಸುವುದಿಲ್ಲ. ಕಳೆದ ಯಾತ್ರೆಯಲ್ಲಿ ಇರಾನಿನ ಚಾಬಹಾರ್ ಬಂದರು ಅಭಿವೃದ್ಧಿಯ ಬಗ್ಗೆ ಒಪ್ಪಂದ ಮುಗಿಸಿಕೊಂಡು ಬಂದಿದ್ದರಲ್ಲ, ಅದರೊಟ್ಟಿಗೇ ಅಫ್ಘನ್ ಸಂಬಂಧವನ್ನೂ ಬಲಗೊಳಿಸಿಕೊಂಡರೆ ತೈಲರಾಷ್ಟ್ರಗಳೊಂದಿಗೆ ಯಾವ ಮುಲಾಜೂ ಇಲ್ಲದೇ ನೇರ ಸಂಪರ್ಕ ಸಾಧಿಸಬಹುದೆಂಬುದು ನಿಚ್ಚಳವಾದ ಸಂಗತಿ. ಅದಕ್ಕೇ ಅಫ್ಘನ್ ಭೇಟಿಯನ್ನು ಬಲು ಬೇಗ ಮುಗಿಸಿ ಕತಾರ್ಗೆ ತೆರಳಿದರು ಮೋದಿ. ಮುಸಲ್ಮಾನ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಸಂಖ್ಯೆ ಬಲು ದೊಡ್ಡದು. ಕತಾರ್ನ ದೋಹಾದಲ್ಲಿ ಅಂತಹ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ, ನೀವು ಭಾರತದಿಂದ ಎಂದೂ ದೂರವಾಗಿಯೇ ಇಲ್ಲ, ಕತಾರ್ನಲ್ಲಿಯೇ ಭಾರತವನ್ನು ಬದುಕುತ್ತಿದ್ದೀರಿಎಂದರಲ್ಲ ಆಗ ಮುಗಿಲು ಮುಟ್ಟುವ ಕರತಾಡನ. ಅವರೆಲ್ಲರಿಗೂ ಒಮ್ಮೆ ಆಕಾಶದಲ್ಲಿ ತೇಲಾಡಿದ ಅನುಭವ. ಅಂದು ರಾತ್ರಿ ಅವರ್ಯಾರೂ ನಿದ್ದೆ ಮಾಡಿರಲಿಕ್ಕಿಲ್ಲ. ಪ್ರಧಾನಿ ತಮ್ಮನ್ನು ಭೇಟಿ ಮಾಡಲೆಂದೇ ಸಮಯ ಮಾಡಿಕೊಳ್ಳುವುದು ‘ಕಾಲರ್ ಟೈಟ್’ಮಾಡಬೇಕಾದ ಸಂಗತಿಯೇ. ಕತಾರ್ನ ಡೌನ್ ಟೌನ್ನ ಕ್ಯಾಂಪ್ನಲ್ಲಿ ಭಾರತೀಯ ಕಾಮರ್ಿಕರೊಂದಿಗೆ ಕುಳಿತು ತಿಂಡಿ ತಿನ್ನುತ್ತ ಮಾತನಾಡಿದ್ದಂತೂ ರೋಮಾಂಚನಕಾರಿಯೇ ಸರಿ. ಇದೇ ದೇಶದ ಕೆಲವು ನಾಯಕರು ಊಟ ಮಾಡಲು ದುಡ್ಡು ಪಡೆದು ಅಧಿಕಾರಕ್ಕೆ ಬಂದರು. ಆದರೆ ಮೋದಿ ಕಾಮರ್ಿಕರೊಂದಿಗೆ ತಿಂಡಿ ತಿಂದು ಅವರ ನೋವನ್ನು ಕತಾರಿನ ಮುಖ್ಯಸ್ಥರಿಗೆ ಮುಟ್ಟಿಸಿ ಪರಿಹಾರಕ್ಕೆ ಮನವಿ ಇಟ್ಟಿದ್ದಂತೂ ಮನೋಜ್ಞ. ಕತಾರ್ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ? ತನ್ನ ಜೈಲುಗಳಲ್ಲಿ ಕೊಳೆಯುತ್ತಿದ್ದ 23 ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿ ಸ್ನೇಹ ಬಲವಾಗಿರಲಿ ಎಂದಿತು! ಮೋದಿಯ ಮೋಡಿ ಅಂಥದ್ದು!

ಕತಾರ್ ಪ್ರಯಾಣ ಮುಗಿಸಿ ಸಂಜೆ ಮೋದಿ ಜಿನೀವಾ ಸೇರಿಕೊಂಡರು. ಅಲ್ಲಿಂದ ಅವರ ಸ್ವಿಟ್ಜರ್ಲ್ಯಾಂಡಿನ ಪ್ರವಾಸ ಶುರುವಾಯಿತು. ಅಧ್ಯಕ್ಷ ಶ್ನೀಡರ್-ಅಮನ್ರೊಂದಿಗೆ ಭಾರತ-ಸ್ವಿಸ್ಗಳ ಬಾಂಧವ್ಯದ ಕುರಿತಂತೆ ಸುದೀರ್ಘ ಚಚರ್ೆ ನಡೆದು ಅನೇಕ ವಿಚಾರಗಳಲ್ಲಿ ಒಪ್ಪಂದಕ್ಕೆ ಸಹಿ ಬಿತ್ತು. ವಿಶೇಷವೆಂದರೆ ಅಲ್ಲಿ ನಡೆದ ವ್ಯಾಪಾರಿಗಳೊಂದಿಗಿನ ಸಭೆ. ಎಬಿಬಿ, ನೆಸ್ಲೆ, ನೋವಾಟರ್ಿಸ್, ಶಿಂಡ್ಲರ್ ಹೋಲ್ಡಿಂಗ್. ನೀವು ಗುರುತಿಸಬಹುದಾದ ಸ್ವಿಸ್ನ ದೊಡ್ಡ ಕಂಪನಿಗಳ ಪ್ರಮುಖರೆಲ್ಲ ಮೋದಿಯೊಂದಿಗಿನ ಮಾತುಕತೆಗೆ ಉತ್ಸುಕರಾಗಿದ್ದರು! ಹಾಗಂತ ಮೋದಿ ಚಿದಂಬರಂರಂತೆ, ‘ನೀವು ನಮ್ಮನ್ನು 200 ವರ್ಷಗಳ ಕಾಲ ಆಳಿದ್ದೀರಿ ಮತ್ತೆ ಬನ್ನಿ’ರೆಂದು ಯೂರೋಪಿನ ವ್ಯಾಪಾರಿಗಳ ಮುಂದೆ ಗೋಗರೆದಿದ್ದರಲ್ಲ ಹಾಗೆ ಮಾಡಲಿಲ್ಲ. ಬದಲಿಗೆ ‘ಭಾರತ 125 ಕೋಟಿ ಜನರ ಮಾರುಕಟ್ಟೆ ಎಂದು ಭಾವಿಸಬೇಡಿ. ಕೌಶಲ್ಯಪೂರ್ಣ ಜನ ಮತ್ತು ವ್ಯಾಪಾರದ ಇಚ್ಛೆ ಇರುವ ಸಕರ್ಾರವೂ ಇದೆ ಎನ್ನುವುದನ್ನು ಮರೆಯಬೇಡಿ’ ಎಂದರು. ಎಷ್ಟಾದರೂ ಸ್ವಾಭಿಮಾನದ ಮುದ್ದೆಯಲ್ಲವೇ ಆತ ಹಾಗೆ ಸಲೀಸಾಗಿ ಭಾರತವನ್ನು ಬಿಟ್ಟುಕೊಡುತ್ತಾರಾ? ಈ ಹಿನ್ನೆಲೆಯಲ್ಲಿಯೇ ಕಪ್ಪು ಹಣದ ಕುರಿತಂತೆ ಅಧ್ಯಕ್ಷರೊಂದಿಗೆ ಮಾತನಾಡಿ ಹೆಸರುಗಳನ್ನು ಬಹಿರಂಗಪಡಿಸಲು ವಿನಂತಿಸಿಕೊಂಡರು. ಆಮೇಲೆ ಅಲ್ಲಿನ ಪ್ರತಿಷ್ಠಿತ ಸಂಸ್ಥೆ ಸಿಇಆರ್ಎನ್ ಗೆ ಭೇಟಿ ನೀಡಿ ಭಾರತೀಯ ವಿಜ್ಞಾನಿಗಳನ್ನು ಭೇಟಿ ಮಾಡಿ ಶಹಬ್ಬಾಶ್ ಎಂದು ಬಂದರು!

ಅಲ್ಲಿಂದ ಮುಂದೆ ಅಮೇರಿಕಾದತ್ತ ಅವರ ಯಾತ್ರೆ. ಯಾವ ಅಮೇರಿಕಾ ಅವರಿಗೆ ವೀಸಾ ನಿರಾಕರಣೆ ಮಾಡಿತ್ತೋ ಅದೇ ಅಮೇರಿಕಾ ಇಂದು ಅವರನ್ನು ಮತ್ತೆ-ಮತ್ತೆ ಕರೆಯುತ್ತಿದೆ! ಅಧ್ಯಕ್ಷ ಬರಾಕ್ ಒಬಾಮಾರಿಗಂತೂ ಮೋದಿಯವರನ್ನು ಕಂಡರೆ ಅತೀವ ಪ್ರೀತಿ. ಅದೇನು ಸುಮ್ಮ ಸುಮ್ಮನೆ ಹುಟ್ಟಿಕೊಂಡಿದ್ದಲ್ಲ. ಅವರ ಹಿಂದಿರುವ 125 ಕೋಟಿ ಭಾರತೀಯರ ಶಕ್ತಿ ಅದು. ಹಾಗಂತ ಅಷ್ಟೇ ಅಂದರೆ ತಪ್ಪಾದೀತು. 125 ಕೋಟಿ ಜನ ಮನಮೋಹನ ಸಿಂಗರೊಂದಿಗೂ ಇದ್ದರಲ್ಲ! ಮೋದಿ ತಮ್ಮ ಸಾಧನೆಯಿಂದ ಅಪರೂಪದ ಶಕ್ತಿ ಸಿದ್ಧಿಸಿಕೊಂಡಿದ್ದಾರೆ. ತನ್ನೊಳಗಿನ ದೇಶಭಕ್ತಿಗೆ ನೀರು ಗೊಬ್ಬರ ಎರೆದು ಹೆಮ್ಮರವಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಭಾರತದ ಇತಿಹಾಸದಲ್ಲಿ ಅವರಿಗೊಂದು ಮಹತ್ವದ ಪಾತ್ರ ದಕ್ಕಿರೋದು.
ಅಲ್ಲದೇ ಮತ್ತೇನು? ಅಮೇರಿಕಾದಲ್ಲಿ ಮತ್ತಷ್ಟು ಭೇಟಿಗಳು, ಮತ್ತಷ್ಟು ವ್ಯಾಪಾರಿಗಳೊಂದಿಗೆ ಚಚರ್ೆ ಇವುಗಳೊಟ್ಟಿಗೆ ವ್ಯವಸ್ಥಿತವಾಗಿ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜೀಮ್ಗೆ ಸೇರ್ಪಡೆಯಾಗುವ ಕಸರತ್ತು ಮಾಡಿ ಯಶಸ್ವಿಯೂ ಆಗಿಬಿಟ್ಟರು. ಇದು 1987 ರಲ್ಲಿ ರಚನೆಯಾದ ಸಮಿತಿ. ಈ ಸಮಿತಿಗೆ 34 ಸದಸ್ಯರು. ಕಳೆದ ಹನ್ನೆರಡು ವರ್ಷಗಳಿಂದ ಹೊಸಬರ್ಯಾರನ್ನೂ ಈ ಗುಂಪಿಗೆ ತೆಗೆದುಕೊಂಡೇ ಇಲ್ಲ. ಏಷ್ಯಾದಿಂದ ಪ್ರತಿನಿಧಿಸಬಲ್ಲ ಯಾವ ರಾಷ್ಟ್ರವೂ ಇರಲಿಲ್ಲ. ಈ ಗುಂಪಿಗೆ ಸೇರ್ಪಡೆಯಾಗುವುದರಿಂದ ವಿಶೇಷ ಲಾಭವೇನೂ ಇಲ್ಲ ನಿಜ. ಆದರೆ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಮಾರಾಟಕ್ಕೆ ಮುಕ್ತ ಪರವಾನಗಿ ಮತ್ತು ತಂತ್ರಜ್ಞಾನದ ಕೊಡು ಕೊಳ್ಳುವಿಕೆಗೆ ಸಮೃದ್ಧ ಅವಕಾಶ ದೊರೆವುದಂತೂ ಸತ್ಯ. ಎಲ್ಲಕ್ಕೂ ಮಿಗಿಲಾಗಿ ಈ ಸದಸ್ಯತ್ವ ಪಡೆಯುವುದರಿಂದ ಮುಂದಿನ ನ್ಯೂಕ್ಲಿಯರ್ ಸಪ್ಲೈ ಗ್ರೂಪಿಗೆ(ಎನ್ಎಸ್ಜಿ) ಸಹಜವಾಗಿ ಅರ್ಹತೆ ಪಡಕೊಳ್ಳಲು ಅನುಕೂಲ.

2003 ರಲ್ಲಿ ಅಟಲ್ ಬಿಹಾರಿ ವಾಜಪೇಯಿಜೀ ಈ ಎಂಟಿಸಿಆರ್ ನ ಪಕ್ಷಪಾತಿ ಧೋರಣೆ ವಿರುದ್ಧ ದನಿಯೆತ್ತಿದ್ದು ನೆನಪಿರಬೇಕು. ನಮಗೆ ಶಸ್ತ್ರಾಸ್ತ್ರ ಖರೀದಿಸುವಲ್ಲಿ ನಿರ್ಬಂಧ ಹೇರಿದ ಅಮೇರಿಕಾ, ಪಾಕೀಸ್ತಾನ-ಚೀನಾಗಳ ನಡುವಿನ ಬಾಂಧವ್ಯಕ್ಕೆ ಮಾತೂ ಆಡಿರಲಿಲ್ಲ. ಈಗ ಹಾಗಿಲ್ಲ. ಈ ಸಮಿತಿಯ ಸದಸ್ಯತ್ವ ಪಡೆದು ನಾವು ಪಡಕೊಂಡಿರುವ ಸಾಮಥ್ರ್ಯ ಎಂಥದ್ದೆಂದರೆ, ಗುಂಪು ಗೋಷ್ಠಿ ನಡೆಸಿ ಇತರೆ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರಬಹುದಾದ ಅವಕಾಶ ನಮಗೆ ದಕ್ಕಿದೆ. ಇದನ್ನು ದಕ್ಕಿಸಿಕೊಂಡದ್ದು ಸುಲಭವಾಗಿಯೇನೂ ಅಲ್ಲ. ವಿರೋಧಿಯಾಗಬಹುದಾಗಿದ್ದ ಇಟಲಿಯನ್ನು ಮೊದಲು ಒಲಿಸಿಕೊಂಡಿತು ಭಾರತ. ಅವರ ನಾವಿಕರ ಬಂಧನವಾದಾಗಿನಿಂದ ಹದಗೆಟ್ಟಿದ್ದ ಬಾಂಧವ್ಯವನ್ನು ನಾವಿಕರ ಬಿಡುಗಡೆಯಿಂದ ಸುಧಾರಿಸಿಕೊಂಡು ಮುಂದಡಿಯಿಟ್ಟಿತು. ಗೆಲುವು ಪಡೆಯಿತು.
ಅಚ್ಚರಿಯೇನು ಗೊತ್ತೇ? ಅತ್ತ ಈ ಕಸರತ್ತು ನಡೆಯುತ್ತಿರುವಾಗ ಇತ್ತ ಚೀನಾ ವಿಶೇಷ ಸಾಕ್ಷ್ಯ ಚಿತ್ರವೊಂದನ್ನು ಬಿಡುಗಡೆಮಾಡಿ ಮುಂಬೈ ದಾಳಿಗೆ ಪಾಕೀಸ್ತಾನವೇ ಕಾರಣ ಎಂಬುದನ್ನು ಸ್ಪಷ್ಟವಾಗಿ ಹೇಳಿತು. ಅಂತಹುದೊಂದು ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿತ್ತು. ಅದಾಗಲೇ ಭಯೋತ್ಪಾದನೆಗೆ ಬೆಂಬಲ ಕೊಡುವ ರಾಷ್ಟ್ರವಾಗಿ ಅದು ಹೊತ್ತಿರುವ ಹಣೆ ಪಟ್ಟಿಯನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ!
ಮೋದಿಯ ಅಮೇರಿಕಾ ಜಂಟಿ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ ಭಾರತದ್ದಷ್ಟೇ ಅಲ್ಲ; ಅಮೇರಿಕಾದಲ್ಲೂ ಐತಿಹಾಸಿಕವೇ. ಸುಮಾರು 70 ಬಾರಿ ಚಪ್ಪಾಳೆಗಳು, 9 ಬಾರಿ ನಿಂತು ಚಪ್ಪಾಳೆಕೊಟ್ಟು ಗೌರವ ಆಮೇಲೆ ಆಟೋಗ್ರಾಫ್ಗಾಗಿ ಸಾಲು ನಿಂತ ಸಂಸತ್ ಸದಸ್ಯರು! ಮೋದಿ ಹಾರಿಸಿದ ಹಾಸ್ಯ ಚಟಾಕಿಗಳು, ನವಿರಾಗಿ ಕಿವಿ ಹಿಂಡಿದ ರೀತಿ, ಭಾರತ ಮತ್ತು ಅಮೇರಿಕಾದ ನಡುವಣ ಘನಿಷ್ಠ ಸಂಬಂಧವನ್ನು ಅನಾವರಣ ಗೊಳಿಸಿದ್ದು ಕೊನೆಗೆ ಭಾರತದ ಸಾಮಥ್ರ್ಯವನ್ನು ಜಾಗತಿಕ ವೇದಿಕೆಯ ಮೇಲೆ ಬಿಂಬಿಸಿದ್ದೆಲ್ಲವೂ ಅಮೋಘವಾಗಿತ್ತು. ‘ಇಂಗ್ಲಿಷ್ ಬರದ ಪ್ರಧಾನಿ’ ಎಂದು ಮೂದಲಿಸುತ್ತಿದ್ದವರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಂಡು ಕುಳಿತಿದ್ದರು! ಭಾಷಣವನ್ನು ಮನೆ ಮನೆಯಲ್ಲಿ ಕುಳಿತು ವೀಕ್ಷಿಸಿದ ಅಮೇರಿಕಾದ ಭಾರತೀಯನ ಎದೆಯೂ 56 ಇಂಚು ಬೆಳೆದಿರಲಿಕ್ಕೆ ಸಾಕು. ಭಾಗವತ ಹೇಳುತ್ತಲ್ಲ, ಕೃಷ್ಣನ ಕೊಳಲ ನಾದಕ್ಕೆ ಗೋಪಿಕೆಯರು ಬಿಡಿ, ಗೋವುಗಳು ಮರ-ಗಿಡಗಳು ತಲೆ ದೂಗುತ್ತಿದ್ದವಂತೆ ಹಾಗಾಯ್ತು ಮೋದಿ ಕತೆ. ಜಗತ್ತೇ ಮೋದಿ ಗಾನದಲ್ಲಿ ಮೈಮರೆತು ತಲ್ಲೀನವಾಗಿಬಿಟ್ಟಿದೆ.
ಅದರ ಪ್ರಭಾವವೇ ಇಲ್ಲಿಂದ ಮೋದಿ ಮುಂದುವರಿದು ಮೆಕ್ಸಿಕೋಕ್ಕೆ ಬಂದಾಗ ಅಲ್ಲಿನ ಪ್ರಧಾನಿ ಎನ್ರಿಕ್ ಪೆನಾನೀಟೋ ತಾನೇ ಚಾಲಕನಾಗಿ ಕಾರು ಚಲಾಯಿಸಿ ಮೋದಿಯವರನ್ನು ಊಟಕ್ಕೆ ಕರೆದೊಯ್ದದ್ದು. ಇದಂತೂ ಅಚ್ಚರಿಯ ಪರಾಕಾಷ್ಠೆ, ಸ್ವತಃ ಮೋದಿಗೂ!
ಇಷ್ಟೆಲ್ಲಾ ಓಡಾಟ, ಸಾಹಸಗಳ ನಡುವೆಯೂ ಆ ಮನುಷ್ಯನ ಮುಖದಲ್ಲಿ ಒಂದು ಗೆರೆ ಆಯಾಸವಿರಲಿಲ್ಲ. ನಿದ್ದೆಯ ಕೊರತೆ ಕಾಣಲಿಲ್ಲ. ಅದೇ ನಗು ಮೊಗ, ಅದೇ ಉತ್ಸಾಹ. ಅದೇ ಧಾವಂತ ಕೂಡ! ಎಲ್ಲಿಂದ ಬರುತ್ತೆ ಅವರಿಗೆ ಶಕ್ತಿ? ಹಾಗೊಂದು ಪ್ರಶ್ನೆ ಕೇಳಿಕೊಂಡಾಗಲೇ ಅನಿಸೋದು ‘ಆತ ಮನುಷ್ಯ ಅನ್ನೋದೇ ಅನುಮಾನ!’

ಲೇಖಕರು
– ಶ್ರೀಯುತ ಚಕ್ರವರ್ತಿ ಸೂಲಿಬೆಲೆ.

Comments