UK Suddi
The news is by your side.

ಉತ್ತರಾಖಂಡ-ಮಾನಸಸರೋವರ ಹೆದ್ದಾರಿ ಕೆಲಸ ಏಪ್ರಿಲ್​ನಲ್ಲಿ ಪೂರ್ಣ

 ಪ್ರಧಾನ ಯಾತ್ರಾಸ್ಥಳಗಳಾದ ಕೈಲಾಸ ಪರ್ವತ ಹಾಗೂ ಮಾನಸಸರೋವರಕ್ಕೆ ಉತ್ತರಾಖಂಡದ ಮೂಲಕ ಸಂಪರ್ಕ ಕಲ್ಪಿಸುವ ಹೆದ್ದಾರಿ ಕೆಲಸ ಇದೇ ಏಪ್ರಿಲ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತೀನ್ ಗಡ್ಕರಿ ತಿಳಿಸಿದ್ದಾರೆ. ಈ ಮೂಲಕ ಮುಂದಿನ ವರ್ಷದಿಂದ ಉತ್ತರಾಖಂಡ ಮಾರ್ಗವಾಗಿ ಟಿಬೇಟ್ನಲ್ಲಿರುವ ಮಾನಸಸರೋವರ, ಕೈಲಾಸ ಪರ್ವತಗಳಿಗೆ ಸುಲಭವಾಗಿ ಭೇಟಿನೀಡಬಹುದಾಗಿದೆ ಎಂದು ಅವರು ಹೇಳಿದರು.

75.54 ಕಿ.ಮೀ ದೂರದ ಘಟಿಯಾಬಾಗರ್-ಲಿಪುಲೇಕ್ ಹೆದ್ದಾರಿ ಕೆಲಸವನ್ನು ಗಡಿ ರಸ್ತೆ ಸಂಸ್ಥೆಯು ಭರದಿಂದ ನಡೆಸುತ್ತಿದೆ.

ಈ ಹೆದ್ದಾರಿ ಪೂರ್ಣಗೊಂಡಲ್ಲಿ ಭಕ್ತಾದಿಗಳಿಗೆ ಒಂದೇ ದಿವಸದಲ್ಲಿ ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆ ಮುಗಿಸಿ ಮರಳ ಬಹುದು. ಇದೇ ಯಾತ್ರೆಗೆ ಪ್ರಸ್ತುತ ಕನಿಷ್ಠ ಇಪ್ಪತೈದು ದಿನಗಳು ಬೇಕಾಗುತ್ತಿವೆ.

Comments