UK Suddi
The news is by your side.

ಜಿಂಬಾಬ್ವೆಗೆ ಭಾರತ ಟೀಮ್ ಶರಣು

SPORTS-6

ಹರಾರೆ: ಏಕದಿನ ಕ್ರಿಕೆಟ್ ಸರಣಿ ಕ್ಲೀನ್ಸ್ವೀಪ್ ಮಾಡಿದ ಗುಂಗಿನಲ್ಲಿದ್ದ ಎಂಎಸ್ ಧೋನಿ ಸಾರಥ್ಯದ ಭಾರತ ತಂಡಕ್ಕೆ ಜಿಂಬಾಬ್ವೆ ತಂಡ ಮೊದಲ ಟಿ20 ಪಂದ್ಯದಲ್ಲೆ ಶಾಕ್ ನೀಡಿದೆ. ಬ್ಯಾಟ್ಸ್ಮನ್ಗಳು ತೋರಿದ ಆತಿಯಾದ ಅತ್ಮವಿಶ್ವಾಸದ ಜತೆಗೆ ಅಂತಿಮ ಓವರ್ಗಳಲ್ಲಿ ಬೌಲರ್ಗಳ ‘ದುಬಾರಿ’ ಕೊಡುಗೆಯಿಂದಾಗಿ ಭಾರತ ತಂಡ 2 ರನ್ಗಳಿಂದ ಆತಿಥೇಯ ತಂಡಕ್ಕೆ ಶರಣಾಯಿತು.

ಇದರಿಂದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆ ಅನುಭವಿಸಿತು. ಮತ್ತೊಂದೆಡೆ, ಏಕದಿನ ಸರಣಿಯಲ್ಲಿ ಅನುಭವಿಸಿದ್ದ ಹೀನಾಯ ಸೋಲಿಗೆ ಜಿಂಬಾಬ್ವೆ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಜತೆಗೆ ಟಿ20 ಕ್ರಿಕೆಟ್ನಲ್ಲಿ ಭಾರತ ವಿರುದ್ಧ ಜಿಂಬಾಬ್ವೆ ಸತತ 2ನೇ ಜಯ ದಾಖಲಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಎಲ್ಟನ್ ಚಿಗುಂಬುರಾ (54*ರನ್, 26 ಎಸೆತ, 1 ಬೌಂಡರಿ, 7 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ಗೆ 170ರನ್ ಪೇರಿಸಿತು. ಮೊತ್ತ ಬೆನ್ನಟ್ಟಿದ ಭಾರತ ತಂಡ ಮನೀಷ್ ಪಾಂಡೆ (48ರನ್, 35 ಎಸೆತ, 1 ಬೌಂಡರಿ, 3 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ 6 ವಿಕೆಟ್ಗೆ 168ರನ್ ಕಲೆಹಾಕಲಷ್ಟೆ ಶಕ್ತವಾಯಿತು. ಈ ಮೂಲಕ ಟಿ20 ಸರಣಿಯಲ್ಲೂ ಕ್ಲೀನ್ಸ್ವೀಪ್ ಮಾಡುವ ಕನಸಿನಲ್ಲಿದ್ದ ಭಾರತದ ಆಸೆ ಕಮರಿತು.

Comments