UK Suddi
The news is by your side.

ಮಹಾದಾಯಿ ಯೋಜನೆ: ಚರ್ಚೆಗೆ ಆಗ್ರಹ

11-29-08-newindianexpress-kalasabanduri-map.jpg

ನರಗುಂದ: ಮಹಾದಾಯಿ ಯೋಜನೆ ಅನುಷ್ಠಾನದ ಸಲುವಾಗಿ ಹಲವಾರು ಸಭೆ ನಡೆದಿವೆ. ಆದರೆ, ಯಶ ಕಂಡಿಲ್ಲ. ಹೀಗಾಗಿ ಜೂನ್ 19ರಂದು ನರಗಂದದ ತಾಲ್ಲೂಕು ಪಂಚಾಯ್ತಿಯಲ್ಲಿ ನಡೆಯುವ ಸಭೆ ಮಹಾದಾಯಿ ಸಮಸ್ಯೆಗೆ ಮೀಸಲಾಗಿ ರೈತರ ಸಮಸ್ಯೆ ಚರ್ಚೆಯಾಗಬೇಕು. ಅಲ್ಲಿ ರಾಜಕೀಯ ಚರ್ಚೆ ಆಗಬಾರದು ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 338ನೇ ದಿನ ಶುಕ್ರವಾರ ಅವರು ಮಾತನಾಡಿದರು. ಶಾಸಕರ ನೇತೃತ್ವದಲ್ಲಿ ಸಭೆ ನಡೆಯ ಲಿದೆ. ಸಭೆಯಲ್ಲಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ  ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಪಾಲ್ಗೊಳ್ಳುವಂತೆ ನಮಗೂ ಆಹ್ವಾನ ಬಂದಿದೆ.

ನಾವು ಭಾಗವಹಿಸಿ ನಮ್ಮ ಅಹವಾಲು ಹೇಳಿಕೊಳ್ಳುತ್ತೇವೆ. ಸಭೆಯಲ್ಲಿ ಮಹಾ ದಾಯಿ ಯೋಜನೆ ಅನುಷ್ಠಾನದ ಕುರಿತು ಚರ್ಚೆಯಾಗ ಬೇಕು. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಜನಪ್ರತಿನಿಧಿಗಳು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾದ  ಬಗ್ಗೆ ಪ್ರಧಾನಿ ಮೋದಿ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ವರ್ಷದ ಆಕ್ರೋಶ ಒಬ್ಬರ ಆಕ್ರೋಶ ಆಗದಿರಲಿ: ಮಹಾದಾಯಿ ಹೋರಾಟ ಸಮಿತಿ ಉಪಾಧ್ಯಕ್ಷ ಪರುಶರಾಮ ಜಂಬಗಿ ಮಾತನಾಡಿ, ಮಹಾದಾಯಿ ಹೋರಾಟ ನಡೆದು ವರ್ಷ ಸಮೀಪಿಸು ತ್ತಿದೆ. ಜುಲೈ 16ರಂದು ಹೋರಾಟ ವರ್ಷ ಪೂರೈಸಲಿದೆ. ಅಂದು ವರ್ಷ ವಿಡೀ ತಾವೇ ಹೋರಾಟ ಮಾಡಿರು ವಂತೆ ಪಂಚಮಸಾಲಿ ಜಗದ್ಗುರುಗಳು ‘ವರ್ಷದ ಆಕ್ರೋಶ’ ಸಮಾವೇಶ ಮಾಡಲು ಹೊರಟಿದ್ದಾರೆ.

ಈ ಬಗ್ಗೆ ಅವರು ಸ್ವ ಅವಲೋಕನ ಮಾಡಿಕೊಳ್ಳ ಬೇಕು. ಮಹಾದಾಯಿ ಹೋರಾಟಕ್ಕೆ ನಾಡಿನ ಬಹುತೇಕ ಮಠಾಧೀಶರು, ಸಾವಿರಕ್ಕೂ ಹೆಚ್ಚು ಸಂಘಟನೆಗಳು, ಲಕ್ಷಾಂತರ ರೈತರ ಬೆಂಬಲವಿದೆ. ಹೋರಾಟ ಜನಾಂದೋಲನದ ರೂಪ ಪಡೆದಿದೆ. ಹೀಗಿರುವಾಗ ಶ್ರೀಗಳು ರಾಜಕಾರಣಿಗಳ ಮಾತು ಕೇಳಿ, ‘ವರ್ಷದ ಆಕ್ರೋಶ’ ಸಮಾವೇಶಕ್ಕೆ ಯೋಜಿಸಿರು ವುದು ಸಲ್ಲ ಎಂದು ಕಿಡಿ ಕಾರಿದರು.

Comments