UK Suddi
The news is by your side.

13 ನೂತನ ಸಚಿವರ ಪ್ರಮಾಣ ವಚನ

ಬೆಂಗಳೂರು: ಅಂತು ಸಿಎಂ ಸಿದ್ದರಾಮಯ್ಯ ಸಂಪುಟವನ್ನು ವಿಸ್ತರಣೆ ಮಾಡಿದ್ದರೆ. ಕಿಕ್ ಔಟ್ ಸಚಿವರ ಬೆಂಬಲಿಗರ ವಿರೋಧದ ಮಧ್ಯೆ ರಾಜಭವನದ ಗಾಜಿನ ಮನೆಯಲ್ಲಿ ಸಂಜೆ 4 ಗಂಟೆಗೆ 13 ನೂತನ ಸಚಿವರಿಗೆ ರಾಜ್ಯಪಾಲ ವಿಆರ್ ವಾಲಾ ಪ್ರಮಾಣ ವಚನ ಬೋಧಿಸಿದರು.

ಎಲ್ಲರೂ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರಿಸಿದರೆ, ಸಿಎಂ ಕಾಲಿಗೆ ಸಂತೋಷ್ ಲಾಡ್, ಪ್ರಮೋದ್ ಮಧ್ವರಾಜ್ ನಮಸ್ಕರಿಸಿದ್ದು ವಿಶೇಷವಾಗಿತ್ತು.

ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಾಗೋಡು ತಿಮ್ಮಪ್ಪ, ರಮೇಶ್‍ಕುಮಾರ್, ಬಸವರಾಜ ರಾಯರೆಡ್ಡಿ, ತನ್ವೀರ್ ಸೇಠ್, ಎಚ್.ವೈ. ಮೇಟಿ, ಎಸ್.ಎಸ್. ಮಲ್ಲಿಕಾರ್ಜುನ್, ರಮೇಶ್ ಜಾರಕಿಹೊಳಿ, ಸಂತೋಷ್ ಲಾಡ್, ಎಂ.ಆರ್ ಸೀತಾರಾಂ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಸಚಿವರಾಗಿ ಈಶ್ವರ್ ಖಂಡ್ರೆ, ಪ್ರಮೋದ್ ಮಧ್ವರಾಜ್, ಪ್ರಿಯಾಂಕ್ ಖರ್ಗೆ, ರುದ್ರಪ್ಪ ಲಮಾಣಿ, ಪ್ರಮಾಣ ವಚನ ಸ್ವೀಕರಿಸಿದರು.

[review]

Comments