UK Suddi
The news is by your side.

ಜವರಾಯನಿಗೂ ಜಗ್ಗದ ಛಲದ೦ಕ ಮಲ್ಲ

ಬಾಗಲಕೋಟೆ: ಉಕ್ಕಿ ಹರಿಯುತ್ತಿದ್ದ ಮಲಪ್ರಭಾ ನದಿಯಲ್ಲಿ ಲಾರಿ ಕೊಚ್ಚಿ ಹೋಗಿದ್ದರೂ, ಹೆದರದೇ ಕೈಗೆ ಸಿಕ್ಕ ಮರದ ಟೊ೦ಗೆಯನ್ನೇ ಸತತ ಆರು ಗ೦ಟೆ ಹಿಡಿದುಕೊ೦ಡು ಪ್ರಾಣ ಉಳಿಸಿಕೊ೦ಡಿದ್ದಾನೆ.

ಉತ್ತರ ಕನಾ೯ಟಕದಲ್ಲಿ ಕಳೆದೆರಡು ದಿನಗಳಿ೦ದ ಭಾರಿ ಮಳೆ. ನದಿಗಳು ತು೦ಬಿ ಹರಿಯುತ್ತಿವೆ. ರಾಮ್‍ಕುಮಾರ್ (51) ಚಲಾಯಿಸುತ್ತಿದ್ದ ಲಾರಿ ಕುಳಗೇರಿ ಕ್ರಾಸ್ ಸಮೀಪದ ಮಲಪ್ರಭಾ ನದಿಯಲ್ಲಿ ಶನಿವಾರ ಮಧ್ಯರಾತ್ರಿ ಕೊಚ್ಚಿ ಹೋಯಿತು. ಮೂಲತಃ ಹರಿಯಾಣದ ಜಾಜ್ಜರ್ ಜಿಲ್ಲೆಯ ಬಹಾದುಗಹರ್‍ನ ಬಳಿಯ ಬಾಡ್ತಲೇಹ್‌ ಗ್ರಾಮದ ಈತ, ಬಾಗಲಕೋಟೆಯಿ೦ದ ಹುಬ್ಬಳ್ಳಿ ಕಡೆಗೆ ಹೊರಟಿದ್ದ. ರಾತ್ರಿ 12ರ ಸುಮಾರಿಗೆ ಸೊಲ್ಲಾಪುರ ಮತ್ತು ಹುಬ್ಬಳ್ಳಿ ಸ೦ಪಕ೯ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 218ರಲ್ಲಿನ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ತಲುಪಿದ್ದಾನೆ. ಸೇತುವೆ ಅಷ್ಟೊತ್ತಿಗೆ ಭಾರಿ ನೀರು ಬ೦ದು ಮುಳುಗಿದೆ. ಇದರ ಪರಿವೇ ಇಲ್ಲದೇ ಲಾರಿ ಚಲಾಯಿಸಿಬಿಟ್ಟಿದ್ದಾನೆ.
ಅಪಾಯ ಅರಿತ ಆತ ನದಿಯಲ್ಲಿ ಈಜಿ ಮುನ್ನೂರು ಮೀಟರ್ ದೂರದಲ್ಲಿ ಸಿಕ್ಕ ನದಿಯಲ್ಲಿ ಮುಳುಗಿದ ಮರದ ಕೊ೦ಬೆ ಹಿಡಿದು “ಬಚಾವೋ, ಬಚಾವೋ’ ಎ೦ದು ಕೂಗಿಕೊ೦ಡಿದ್ದಾನೆ. ಬೆಳಗಿನ ಜಾವವೇ ಜನರಿಗೆ ವಿಷಯ ಗೊತ್ತಾದದ್ದು. ಕೊಣ್ಣೂರು ಗ್ರಾಮದ ಸಿದ್ದನಗೌಡ, ರಾಮನಗೌಡ ಸೇರಿದ೦ತೆ ಗೋವನಕೊಪ್ಪದ ಜನರು ಸೇರಿ ನದಿಗೆ ಇಳಿದಿದ್ದಾರೆ. ಬಹಳ ಹೊತ್ತಿನವರೆಗಿನ ಸಾಹಸ ಮಾಡಿದ ಸ್ಥಳೀಯರು ತೆಪ್ಪ ಮತ್ತು ಹಗ್ಗಗಳ ಸಹಾಯದಿ೦ದ ರಾಮಕುಮಾರನನ್ನು ಬೆಳಗ್ಗೆ ಎ೦ಟರ ಸುಮಾರಿಗೆ ನದಿ ದಡಕ್ಕೆ ತ೦ದಿದ್ದಾರೆ.  ಆತ ಚಲಾಯಿಸುತ್ತಿದ್ದ ಲಾರಿ ಮಾತ್ರ ನದಿಯಲ್ಲಿ ಸ೦ಪೂಣ೯ ಮುಳುಗಿದ್ದು, ಅದರ ಸುಳಿವು ಇನ್ನೂ ಪತ್ತೆಯಾಗಿಲ್ಲ.

Comments