UK Suddi
The news is by your side.

ಬೆಳಗಾವಿಯಲ್ಲಿ ಸಿಮಿ ಉಗ್ರನ ಬಂಧನ

ಅಹಮದಾಬಾದ್: 2008ರ ಸರಣಿ ಬಾಂಬ್ ಸ್ಫೋಟಗಳಲ್ಲಿ ಭಾಗಿದ್ದಾನೆ ಎನ್ನಲಾದ ಶಂಕಿತ ಉಗ್ರನ್ನು ಗುಜರಾತ್ ಭಯೋತ್ಪದಾಕ ವಿರೋಧಿ ಪಡೆ (ಎಟಿಎಸ್) ಸೋಮವಾರದಂದು ಬೆಳಗಾವಿಯಲ್ಲಿ ಬಂಧಿಸಿದೆ. 

ಬೆಳಗಾವಿ ಮೂಲದ ನಾಸಿರ್ ರಂಗ್ರೇಜ್ (38) ಬಂಧಿತ ಉಗ್ರನಾಗಿದ್ದು, ನಗರದಲ್ಲಿ ಆಟೋ ಚಾಲಕನಾಗಿದ್ದನು.  ಈತನನ್ನು ಎಸ್ಐಟಿ ಪೊಲೀಸರು ಖಡೇ ಬಜಾರ್ ರಸ್ತೆಯಲ್ಲಿರುವ ಅವನ ಮನೆ ದಾಳಿ ನಡೆಸಿ ಬಂಧಿಸಿದ್ದಾರೆ. 

ಮೂಲಗಳ ಪ್ರಕಾರ ರಂಗ್ರೇಜ್, ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತನಾಗಿದ್ದು ಇಂಡಿಯನ್ ಮುಜಾಹಿದ್ದೀನ್‌ ಸಂಘಟನೆಯ ಜೊತೆಗೂ ಸಂಪರ್ಕಹೊದ್ದಿದ್ದನು. ಗುಜರಾತ್‌ನ ಗೋಧ್ರಾ ಹತ್ಯಾಕಾಂಡದಲ್ಲಿ ಮೃತ ಪಟ್ಟ ಮುಸ್ಲಿಂ ಪರವಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಈತ ತನ್ನ ಸಂಗಡಿಗರ ಜೊತೆಗೂಡಿ ಸಿಮಿ ಹಾಗೂ ಐಎಂನಲ್ಲಿ ನೇಮಕವಾದ ಉಗ್ರಿರಿಗೆ ಗುಜರಾತ್‌ನ ಪಾವಗಡ, ಮಧ್ಯಪ್ರದೇಶದ ಕಂಡ್ವಾ ಹಾಗೂ ಕೇರಳದ ವಾಗಾಮಾನ್‌ನಲ್ಲಿ ತರಬೇತಿ ನೀಡಿದ್ದನು ಎನ್ನಲಾಗಿದೆ. 

Comments