UK Suddi
The news is by your side.

ಸಂಪುಟದಿಂದ ಕೈಬಿಟ್ಟ ಅಂಬರೀಶ್ ಗೆ ಜಗ್ಗೇಶ್ ಏನ್ ಹೇಳಿದ್ರು?

ಸಂಪುಟದಲ್ಲಿ ಅಂಬರೀಶ್ರನ್ನು ಕೈ ಬಿಟ್ಟಿದ್ದಕ್ಕೆ ನಟ ಜಗ್ಗೇಶ್ ತಮ್ಮ facebook ಪೇಜ್ ನಲ್ಲಿ ಏನು ಬರೆದು ಕೊಂಡಿದ್ದಾರೆ?

ಜಗ್ಗೇಶ್ ರವರ facebook ಸ್ಟೇಟಸ್ ಓದಿ..

ಇಂದು ಕನ್ನಡದ ಮೇರುನಟ ನೇರನುಡಿಯ ಮಗುವಿನ ಮನಸ್ಸಿನಂತ ಮನುಷ್ಯನಿಗೆ ಯಾವ ತಪ್ಪು ಮಾಡದೆ ಪ್ರಾಮಾಣಿಕವಾಗಿ ನಡೆದುಕೊಂಡವರಿಗೆ ಮಂತ್ರಿ ಪದವಿಯಿಂದ ಮುಕ್ತಗೊಳಿಸಿ ತಮಾನದ ‪#‎Congress‬ ಪಕ್ಷ ತಪ್ಪುಮಾಡಿಬಿಟ್ಟಿತು!!.. ಅದರಲ್ಲು ಒಬ್ಬ ಹೆಂಗಸಿನಿಂದ ಅಂತ ಟೀವಿಲಿ ನೋಡಿದ ಮೇಲಂತು ಬಹಳ ನೊಂದುಕೊಂಡೆ ಕಾರಣ ನಾನು ಅಂಬರೀಶರನ್ನ 1983ರಿಂದ ಬಲ್ಲೆ… ಆತ ಬೇದಭಾವ ಮಾಡದೆ ಎಲ್ಲರನ್ನು ಸಮಾನವಾಗಿ ಕೂರಿಸಿ ತಾನು ತಿನ್ನುವ ಊಟವನ್ನೆ ಹಂಚಿ ತಿನ್ನುವ ವಿಶಾಲಹೃದಯಿ… ಅವರ ಒಂದು ತಪ್ಪು ನಾನು ಕಂಡಿದ್ದು ದೇಹಿ ಅಂದವರನ್ನ ನಂಬೋದು… ಅದೆ ಇಂದು ಮುಳುವಾಯಿತು!! ನನ್ನ ಮಗ ಗುರುರಾಜ ಅವರ ಚಿತ್ರದಲ್ಲಿ ಬಾಲನಟನಾಗಿ 88ರಲ್ಲಿ ನಟಿಸಿದ್ದ, ಆಗಲೆ ಅವರು ಮುಂದೆ ನಾನು ರಾಜಕೀಯದಲ್ಲಿ ಸೇರಿ ಗೆದ್ದು ಎಂಪಿಯಾಗಿ ಮಂತ್ರಿಯಾಗುತ್ತೇನೆ ಅಂದಿದ್ದರು, ಅಷ್ಟು ಅವರಲ್ಲಿ ಅವರಿಗೆ ವಿಶ್ವಾಸವಿತ್ತು… ಅವರ ಪ್ರಥಮ ಚುನಾವಣೆಯಲ್ಲಿ ರಾಮನಗರದಲ್ಲಿ ಅಲ್ಪ ಮತದಲ್ಲಿ ಸೋತಾಗ ನಾನು ಅತ್ತಿದ್ದೆ… ನಂತರ ನಡೆದ ಮಂಡ್ಯ ಎಂಪಿ ಚುನಾವಣೆಯಲ್ಲಿ ಸುಮಾರು 400ಹಳ್ಳಿ ಅವರಿಗಾಗಿ ಸುತ್ತಿ ಪ್ರಚಾರ ಮಾಡಿ ಗೆದ್ದಾಗ ಕುಡಿದು ಕುಪ್ಪಳಿಸಿದ್ದೆ… ಶ್ರೀ ಬಾಲಗಂಗಾಧರ ಸ್ವಾಮೀಜಿ ನೇತೃತ್ವದ ಒಕ್ಕಲಿಗರ ಇತಿಹಾಸದ ಪ್ರತಿಭಟನೆಯಲ್ಲಿ ಅವರೊಟ್ಟಿಗೆ ಭಾಗವಹಿಸಿದ್ದೆ… ಅವರ ಅನೇಕ ಚಿತ್ರದಲ್ಲಿ ಸಹನಟನಾಗಿದ್ದೆ… ನನ್ನ ಪ್ರಥಮ ನಾಯಕ ನಟ ಚಿತ್ರ “ಭಂಡ ನನ್ನ ಗಂಡ” ಚಿತ್ರದಲ್ಲಿ ಹಿಂದುಮುಂದು ನೋಡದೆ ಪೋಷಕಪಾತ್ರ ಮಾಡಿ ನನಗೆ ಪ್ರೋತ್ಸಾಹಿಸಿದರು… ಇವೆ ನನ್ನ ಅವರ ಒಡನಾಟದ ಸಂಬಂಧ… ಅವರೆ ಬೇರೆ ಪಕ್ಷ, ನಾನೆ ಬೇರೆ ಪಕ್ಷ, ಆದರು ಅವರು ನನ್ನ ಅಣ್ಣನಂತೆ ಭಾವನೆ… ಇಡೀ ಕಾಂಗ್ರೇಸ್ ಪಕ್ಷದ ನಾಯಕರು ಒಟ್ಟು ಸೇರಿದರು ಅಂಬರೀಶ್ ಸಮ ಆಗಲು ಅಸಾಧ್ಯ… ಅಂತ ವ್ಯಕ್ತಿಯನ್ನ ಕಣ್ಣು ಬಿಡದ ಎಳಸು ಚಾಡಿಗೆ ಕೈಬಿಡುತ್ತಾರೆಂದರೆ ಇದಕ್ಕಿಂತ ದುರಂತ ಬೇರೆ ಯಾವುದಿಲ್ಲಾ ಅನ್ನಿಸಿತು… ರಾಜಕೀಯ ಪದವಿ 5ವರ್ಷ ಆದರೆ ಅವರ ಮೇಲೆ ಕನ್ನಡಿಗರ ಪ್ರೀತಿ ಶತಮಾನಗಳೂ ದಾಟಿ… Dear Ambi Sir ನೀವು ನೀವೆ 🙂2018 ಕ್ಕೆ ಕರ್ನಾಟಕದ ಜನ ರಾಜಕೀಯ ಬದಲಾವಣೆ ಮಾಡುತ್ತಾರೆ ಎಲ್ಲರನ್ನ ಮರೆಯುತ್ತಾರೆ… ನೀವು ಮಾತ್ರ ಕನ್ನಡಿಗರ ಹೃದಯದಲ್ಲಿ ಉಳಿಯುತ್ತೀರ… ಹೊಡಿರಿ ಗೋಲಿ… ಹಚ್ಚಿ ಬಣ್ಣ… ಪಡಿರಿ ಚಪ್ಪಾಳೆ… ಉರಿಲಿ ಉರಿಸಿದವರ ತಳ!! ಯಾರು ಏನೇ ಮಾಡಿದ್ರು ನೀವು ಬರೀ ಮಂಡ್ಯದ ಗಂಡಲ್ಲ, ಕರ್ನಾಟಕದ ಗಂಡು… ಇಡೀ ಚಿತ್ರರಂಗ ನಿಮ್ಮೊಟ್ಟಿಗೆ ‪#‎ಕನ್ನಡಿಗ‬… ಶುಭರಾತ್ರಿ…

image

Comments