UK Suddi
The news is by your side.

ಅಬ್ಬಾ…! ರೈಲನ್ನೇ ಲೀಲಾಜಾಲವಾಗಿ ಎಳೆದ ಲ್ಯಾಂಡ್ ರೋವರ್

ಎಸ್ ಯುವಿ ಕಾರುಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲ್ಯಾಂಡ್ ರೋವರ್ ಕಂಪನಿಯ ನೂತನ ಡಿಸ್ಕವರಿ ಸ್ಪೋರ್ಟ್ ಕಾರು ಹೊಸದೊಂದು ಇತಿಹಾಸವನ್ನು ನಿರ್ಮಾಣ ಮಾಡಿದೆ.

ತನ್ನ ಕಾರುಗಳ ಕ್ಷಮತೆಯನ್ನು ಗ್ರಾಹಕರಿಗೆ ಪರಿಚಯಿಸುವ ಸಲುವಾಗಿ ವಿವಿಧ ಮಾದರಿಯಲ್ಲಿ ಟೆಸ್ಟ್ ಡ್ರೈವ್ ಮಾಡುವ ಲ್ಯಾಂಡ್ ರೋವರ್ ಕಂಪನಿ ತನ್ನ ನೂತನ ಡಿಸ್ಕವರಿ ಸ್ಪೋರ್ಟ್ ಕಾರಿನಿಂದ 100 ಟನ್ ತೂಕದ ರೈಲಿನ ಬೋಗಿಗಳನ್ನು ಎಳೆಸಿದೆ.

ಈ ಪರೀಕ್ಷೆಯನ್ನು ಲೀಲಾಜಾಲವಾಗಿ ಮಾಡಿ ಮುಗಿಸಿರುವ ಡಿಸ್ಕವರಿ ಸ್ಪೋರ್ಟ್ ಕಾರು, ಸ್ವಿಡ್ಜರ್ ಲ್ಯಾಂಡ್’ನ ಉತ್ತರ ಭಾಗದಲ್ಲಿರುವ ಸುಂದರ ನದಿಯ ಮೇಲಿನ ಸೇತುವೆಯೊಂದ ಮೇಲೆ 100 ಟನ್ ತೂಕದ ಬೋಗಿಗಳನ್ನು ಎಳೆದು ಇತಿಹಾಸ ನಿರ್ಮಿಸಿದೆ.

ಸೆಮಿ ಆಟೋ ಮಿಷನ್ ತಂತ್ರಜ್ಞಾನದ ಈ ಕಾರು ಬೋಯಿಂಗ್ 757 ವಿಮಾನವನ್ನು 10 ಕಿಮೀ ವರೆಗೆ ಎಳೆಯುವ ತಾಕತ್ತು ಹೊಂದಿದೆ ಎಂದು ಕಂಪನಿ ತಿಳಿಸಿದೆ.

 

Comments