ಟೀಂ ಇಂಡಿಯಾಗೆ ಕನ್ನಡಿಗ ಕುಂಬ್ಳೆ ಕೋಚ್
ಬಹು ನಿರೀಕ್ಷಿತ ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆ ವಿಚಾರ ಕೊನೆಗೂ ತೆರೆಬಿದ್ದಿದ್ದು, ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಕ ಮಾಡಿದೆ.
ಸಲಹಾ ಸಮಿತಿ ನೀಡಿರುವ ಶಿಫಾರಸ್ಸಿನ ಮೇರೆಗೆ ಧರ್ಮಶಾಲಾದಲ್ಲಿ ಇಂದು ಸಂಜೆ ನಡೆದ ಸಭೆಯಲ್ಲಿ ಬಿಸಿಸಿಐ ಅಧಿಕೃತವಾಗಿ ನೂತನ ಕೋಚ್ ಹೆಸರನ್ನು ಬಹಿರಂಗ ಪಡಿಸಿದೆ.
ಪ್ರಧಾನ ಕೋಚ್ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರು