UK Suddi
The news is by your side.

ತಿಂಗಳೊಳಗೆ ಧಾರವಾಡ ಐಐಟಿ ಕಾರ್ಯಾರಂಭ

1-IIT-webಧಾರವಾಡದಲ್ಲಿ ಇನ್ನು ಕೇವಲ 2 ರಿಂದ 3 ವಾರಗಳಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.

ಧಾರವಾಡದ ಜಲ ಮತ್ತು ಭೂ ನಿರ್ವಹಣೆ ಸಂಸ್ಥೆ (ವಾಲ್ಮಿ) ಕ್ಯಾಂಪಸ್ನಲ್ಲಿ ತಾತ್ಕಾಲಿಕವಾಗಿ ಕಟ್ಟಡ ವ್ಯವಸ್ಥೆ ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಐಐಟಿ ಮುಖ್ಯ ಕ್ಯಾಂಪಸ್ ಕಟ್ಟಡ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ಧಾರವಾಡದ ಶಿಕ್ಷಣ ಗರಿಮೆಗೆ ಐಐಟಿ ಮತ್ತಷ್ಟು ಪುಷ್ಠಿ ನೀಡಿದೆ. ಈ ವರ್ಷ 120 ವಿದ್ಯಾರ್ಥಿಗಳೊಂದಿಗೆ ಆರಂಭವಾಗಲಿರುವ ಐಐಟಿ ವಿದ್ಯಾರ್ಥಿಗಳ ವಸತಿಗಾಗಿ ಹಾಸ್ಟೆಲ್ ಒಂದನ್ನು ಬಾಡಿಗೆಗೆ ಪಡೆದಿದ್ದು, ಮೂಲ ಕಟ್ಟಡ ಅಂದಾಜು 3.05 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಧಾರವಾಡದಿಂದ 12 ಕಿ. ಮೀ. ದೂರದಲ್ಲಿ 590 ಎಕರೆ ವಿಶಾಲ ಜಾಗದಲ್ಲಿ ಐಐಟಿ ಹೊಸ ಕಟ್ಟಡ ತಲೆ ಎತ್ತುತ್ತಿದೆ. ಇದರೊಂದಿಗೆ ಧಾರವಾಡಕ್ಕೆ ಬೃಹತ್ ಉದ್ಯಮಗಳು ಎಂಟ್ರಿ ಕೊಡಲಿವೆ. ಇದರಿಂದ ಐಐಟಿ ವಿದ್ಯಾರ್ಥಿಗಳ ಅಧ್ಯಯನದ ಜತೆ ಸ್ಥಳೀಯ ನಾಗರಿಕರಿಗೆ ಉದ್ಯೋಗವಕಾಶಗಳು ಹೆಚ್ಚಲಿವೆ.

Comments