UK Suddi
The news is by your side.

ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಹೃದಯಾಘಾತದಿಂದ ಸಾವು

ಚಿಕ್ಕೋಡಿ: ಕರ್ತವ್ಯ ನಿರತ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಘಟನೆ ನಡೆಸದಿದೆ. ಅಡಿವೆಪ್ಪಾ ಸುಳ್ಳದ (36) ನಿಧನರಾದ ಪೇದೆ.

ಚಿಕ್ಕೋಡಿ ಪಟ್ಟಣದ ಟ್ರಾಫಿಕ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಡಿವೆಪ್ಪಾ ಎಂದಿನಂತೆ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಡ್ಯುಟಿ ಆರಂಭಿಸಿ ಕೆಲ ಕ್ಷಣಗಳಲ್ಲಿ ಎದೆ ನೋವು ಕಾಣಿಸಿಕೊಂಡು ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ. ಕೆಲ ಕ್ಷಣದಲ್ಲಿಯೇ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತಾದರೂ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗೋಕಾಕ ತಾಲೂಕಿನ ಇರನಟ್ಟಿ ಗ್ರಾಮದವರಾದ ಅಡಿವೆಪ್ಪಾ, ಕಳೆದ ಕೆಲ ವರ್ಷಗಳಿಂದ ಚಿಕ್ಕೋಡಿ ಪಟ್ಟಣ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಡಿವೆಪ್ಪ ಅವರ ಮೃತ ದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, 

Comments