UK Suddi
The news is by your side.

ಧಾರವಾಡ: ಅಪರೂಪದ ವಿಜ್ಞಾನ ಕೇ೦ದ್ರ 

ಈಗಾಗಲೇ ಕನಾ೯ಟಕ ಜಗತ್ತಿನಲ್ಲಿ ವಿಜ್ಞಾನ-ತ೦ತ್ರಜ್ಞಾನಕ್ಕೆ ಹೆಸರುವಾಸಿ. ಇದಕ್ಕೆ ಪೂರಕವೆ೦ಬ೦ತೆ ರಾಜ್ಯದ ಮೊದಲ ಹಾಗೂ ಅಪರೂಪದ ವಿಜ್ಞಾನ ಕೇ೦ದ್ರ ಧಾರವಾಡದಲ್ಲಿ ಕಾಯ೯ನಿವ೯ಹಿಸುತ್ತಿದೆ. ವಿಜ್ಞಾನ ಪ್ರಿಯರಿಗೆ ಹಾಗೂ ಶಾಲಾ ಮಕ್ಕಳಿಗೋಸ್ಕರ ಇಲ್ಲೊ೦ದು ವಿಜ್ಞಾನ ಲೋಕವೇ ಮ್ಯೆದಳೆದು ನಿ೦ತಿದೆ. ಹೌದು, ಕಳೆದ 2012 ರಲ್ಲಿ ಕನಾ೯ಟಕ ವಿಶ್ವವಿದ್ಯಾಲಯದ ಕ್ಯಾ೦ಪಸ್‍ನ ಎ೦ಟು ಎಕರೆ ಪ್ರದೇಶದಲ್ಲಿ ಸ್ಥಾಪನೆಗೊ೦ಡ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇ೦ದ್ರ ಈಗ ಕೇವಲ ಉತ್ತರ ಕನಾ೯ಟಕ ಮಾತ್ರವಲ್ಲ, ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಉತ್ತರ ಕನಾ೯ಟಕ ಪ್ರವಾಸ ಕೈಗೊಳ್ಳುವ ದಕ್ಷಿಣ ಕನಾ೯ಟಕದ ಶಾಲಾ ಮಕ್ಕಳು, ಶಿಕ್ಷಕರು ತಪ್ಪದೇ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅತ್ಯಾಧುನಿಕ ಶೈಲಿಯಲ್ಲಿ ನಿಮಿ೯ಸಿದ ತಾರಾಲಯ, ಖಗೋಳ ವಿಕ್ಷಣಾಲಯ, ವಿಜ್ಞಾನದ ಮಾದರಿ ಪ್ರದಶ೯ಕಗಳು, ಪುರಾತನ ಭಾರತೀಯರ ವೈಜ್ಞಾನಿಕ ಜೀವಶೈಲಿಯ ಗ್ಯಾಲರಿ, ಮೋಜಿನ ವಿಜ್ಞಾನ ಆಟದ ಪ್ರಾ೦ಗಣ, 3ಡಿ ಚಿತ್ರಮ೦ದಿರ, ಸಭಾ೦ಗಣವನ್ನು ಈ ಪ್ರಾದೇಶಿಕ ವಿಜ್ಞಾನ ಕೇ೦ದ್ರ ತನ್ನ ಒಳಾ೦ಗಣದಲ್ಲಿ ಹೊ೦ದಿದೆ. ಅಲ್ಲದೇ, ಹೊರಾ೦ಗಣದಲ್ಲಿ ವಿಜ್ಞಾನ ಪಾಕ್‍೯ನ್ನು ಸ್ಥಾಪಿಸಲಾಗಿದೆ. ಅಪರೂಪದ ವಿಜ್ಞಾನ ಪುಸ್ತಕಗಳ ಗ್ರ೦ಥಾಲಯ ಇಲ್ಲಿದೆ. ಅ೦ದಹಾಗೆ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇ೦ದ್ರ ಕನಾ೯ಟಕ ಸರಕಾರದಿ೦ದ ಸ್ಥಾಪಿಸಲ್ಪಟ್ಟು, ರಾಷ್ಟ್ರೀಯ ವಿಜ್ಞಾನ ವಸ್ತುಸ೦ಗ್ರಹಾಲಯಗಳ ಸ೦ಸ್ಥೆಯ (ಎನ್‍ಸಿಎಸ್‍ಎ೦) ಸುಪದಿ೯ಯಲ್ಲಿ ಕಾಯ೯ನಿವ೯ಹಿಸುತ್ತಿದೆ.

-ಮ೦ಜುನಾಥ ಭದ್ರಶೆಟ್ಟಿ 

Comments