ಕಿತ್ತೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣ?
ಬೆಳಗಾವಿ-ಹುಬ್ಬಳ್ಳಿ ಮಹಾನಗರಗಳ ಮಧ್ಯ-ದಲ್ಲಿರುವ ಐತಿಹಾಸಿಕ ಪಟ್ಟಣ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಒತ್ತಾಯ ಆಗಾಗ ಪ್ರತಿ ಧ್ವನಿಸುತ್ತಿರುತ್ತದೆ. ಬೆಳಗಾವಿಯಲ್ಲಿ ನಡೆದ ಐಟಿ ಸಮ್ಮೇಳನದಲ್ಲೂ ಉದ್ಯಮಿಗಳು ಇಂಥ ಸಲಹೆಯನ್ನು ಸರಕಾರಕ್ಕೆ ನೀಡಿದ್ದಾರೆ. ಬೆಳಗಾವಿಯಲ್ಲಿ 60 ವರ್ಷಕ್ಕೂ ಹಳೆಯ ವಿಮಾನ ನಿಲಾ ಣ, ಹುಬ್ಬಳ್ಳಿಯಲ್ಲೂ ಉನ್ನತ ಸೌಲಭ್ಯವುಳ್ಳ ವಿಮಾನ ನಿಲ್ದಾಣವಿದೆ. ಆದರೆ ಈ ನಗರಗಳ ಬೆಳವಣಿಗೆಗೆ ಪೂರಕವಾಗಿ ಎರಡೂ ನಗರಗಳಿಗೆ 45 ನಿಮಿಷಗಳ ಅಂತರಫ್ತುವಿರುವ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು ಎನ್ನುವುದು ಉದ್ಯಮಿಗಳ ದೂರದೃಷ್ಟಿಯ ಅಭಿಪ್ರಾಯವಾಗಿದೆ.
ರಾಣಿ ಚನ್ನಮ್ಮಳಿಂದಾಗಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಿತ್ತೂರು ಇಷ್ಟರಲ್ಲೇ ತಾಲೂಕು ಕೇಂದ್ರವಾಗಲಿದೆ. ಬೆಳಗಾವಿ-ಯಿಂದ 48 ಕಿ.ಮೀ. ದೂರದಲ್ಲಿದ್ದರೆ, ನೆರೆಯ ಧಾರವಾಡ 30 ಕಿ.ಮೀ., ಹುಬ್ಬಳ್ಳಿ 56 ಕಿ.ಮೀ. ಅಂತರದಲ್ಲಿದೆ. ಈ ತ್ರಿವಳಿ ನಗರಗಳ ಬೆಳವಣಿಗೆ ದೃಷ್ಟಿಯಿಂದ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು. ಇದರಿಂದ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು ಬೆಳೆಯಲು ಸಾಧ್ಯವಿದೆ. ಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಗರಫ್ತುಗಳ ನಡುವೆ ಅಭಿವೃದ್ಧಿ ಕೇಂದ್ರೀತ ಚಟುವಟಿಕೆ ನಡೆದಿದೆ. ಬೆಳಗಾವಿಯಲ್ಲಿ ಸುವರ್ಣವಿಧಾನಸೌಧ, ಧಾರವಾಡದ ಐಐಟಿ, ಹೈಕೋರ್ಟ್ ಪೀಠ, ಕಾನೂನು, ಕೃಷಿ ವಿಶ್ವವಿದ್ಯಾಲಯಗಳು, ಕರ್ನಾಟಕ ವಿವಿಸೇರಿದಂತೆ ಹಲವು ಆಡಳಿತಾತ್ಮಕ ಶಕ್ತಿ ಕೇಂದ್ರಗಳು ಈ ಮೂರು ನಗರಗಳ ನಡುವೆ ಸ್ಥಾಪನೆಗೊಂಡಿವೆ.
ಇವುಗಳಿಗೆ ದೇಶದ ನಾನಾ ಕಡೆಗಳಿಂದ ಗಣ್ಯರು ಆಗಮಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಮಗ್ರ ಅಭಿವೃದ್ಧಿ: ಕಿತ್ತೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಅಲ್ಲಿನ ಜನರಿಂದ ಅಂಥ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾ ಗದು. ಜತೆಗೆ ಒಟ್ಟಾರೆ, ಈ ಭಾಗದ ಸಮಗ್ರ ಅಭಿವೃದ್ಧಿಯಾಗುತ್ತದೆ. ಬೆಳಗಾವಿ–ಹುಬ್ಬಳ್ಳಿ ನಡುವೆ ಕೈಗಾರಿಕಾ ಕಾರಿಡಾರ್ ನಿರ್ಮಿಸಿ ಅವಳಿನಗರವನ್ನಾಗಿಸಬೇಕು.ಈ ನಗರಗಳ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವವರು ಸದ್ಯ ಬೆಂಗಳೂರು, ಮುಂಬ, ಹೈದ್ರಾಬಾದ್, ಪುಣೆ ನಗರಗಳಿಗೆ ವಲಸೆ ಹೋಗುವಂತಾಗಿದೆ. ಈ ಭಾಗದಲ್ಲೇ ಉದ್ದಿಮೆಗಳು ಆರಂಭವಾದರೆ ವಲಸೆ ತಪ್ಪಿಸಬ-ಹುದು. ಬೆಂಗಳೂರಿಗೆ ಪರ್ಯಾ ಯವಾಗಿ ಬೆಳಗಾವಿ-ಹುಬ್ಬಳ್ಳಿ ನಗರಗಳ ಅಭಿವೃದ್ಧಿ-ಪಡಿಸಬಹುದು. ಬೆಳಗಾವಿ ಅಭಿವೃದ್ಧಿಗೆ ದೀರ್ಘಾವಧಿ ಕಾರ್ಯ ಯೋಜನೆ ರೂಪಿಸ-ಬೇಕು. ಇನ್ನೊಂದೆಡೆ ಬೆಳಗಾವಿ-ಧಾರಫ್ತುವಾಡ-ಹುಬ್ಬಳ್ಳಿಗೆ ಸಂಪ ರ್ಕಕ್ಕೆ ರೈಲ್ವೆ ಮಾರ್ಗ ನಿರ್ಮಿಸಬೇಕು. ಭೂ ಸಾರಿಗೆ, ರೈಲ್ವೆ ಜತೆಗೆ ವಿಮಾನ ನಿಲ್ದಾಣವೂ ನಿರ್ಮಾಣಗೊಂಡರೆ ಈ ಭಾಗದ ಅಭಿವೃದ್ಧಿ ಪಥದಲ್ಲಿ ಭಾರಿ ಬದಲಾವಣೆಯಾಗುವುದು ಖಚಿತ.
ಕಿತ್ತೂರಿನಲ್ಲಿ ಅ೦ತಾರಾಷ್ಟ್ರೀಯವಿಮಾನ ನಿಲ್ದಾಣ ಸ್ಥಾಪಿಸಲು ಅಗತ್ಯವಾದ ಭೂಮಿ ಇತ್ತು. ಈಗ ವಿಮಾನ ನಿಲ್ದಾಣಕ್ಕೆ ಜಾಗದ ಕೊರತೆ ಇದೆ. ಎಸ್.ಎಂ ಕೃಷ್ಣ ಸರಕಾರ ಕಾಲದಲ್ಲಿ ಮನಸ್ಸು ಮಾಡಿದ್ದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸು ಸಾಕಾರವಾಗುತ್ತಿತ್ತು. ಆದರೆ, ಈಗ ಅಷ್ಟು ಜಾಗ ಸಿಗದು. ಜತೆಗೆ ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗುವತ್ತ ಹೆಜ್ಜೆ ಇಟ್ಟಿವೆ.
-ಎಸ್.ಎಫ್. ದೊಡಗೌಡರ ಜಿಪಂ ಮಾಜಿ ಅಧ್ಯಕ್ಷ, ಬೆಳಗಾವಿ