UK Suddi
The news is by your side.

ಗಿರ್ ಹಸುವಿನ ಮೂತ್ರದಲ್ಲಿ ಚಿನ್ನದ ಅಂಶಗೋಲ್ಡ್‌ಮೂತ್ರ!

29Jun16_BG_AE_1.indd

ಜುನಾಗಢ ; ಇಟ್ಟರೆ ಸಗಣಿಯಾದೆ..ತಟ್ಟಿದರೆ ಬೆರಣಿಯಾದೆ.. ಸುಟ್ಟರೆ ವಿಭೂತಿಯಾದೆ ಎಂಬ ಸಾಲುಗಳನ್ನು ನೀವೆಲ್ಲ ಕೇಳೇ ಇರುತ್ತೀರಾ. ಗೋವಿನ ಮೂತ್ರದಲ್ಲಿರುವ ಔಷಧಿಯ ಗುಣಗಳ ಬಗ್ಗೆಯೂ ಗೊತ್ತೇ ಇದೆ. ಆದರೆ ಗೋಮೂತ್ರದಲ್ಲಿ ಚಿನ್ನ ಸಿಗುತ್ತದೆ ಎಂಬುದನ್ನು ಕೇಳಿದ್ದೀರಾ?ನಂಬಿ ಸ್ವಾಮಿ. ಜುನಾಗಢ ಕೃಷಿ ವಿಶ್ವ ವಿದ್ಯಾಲಯದ ಸಂಶೋಧಕರು ಇದನ್ನು ಪತ್ತೆ ಮಾಡಿದ್ದಾರೆ. ಗಿರ್ ತಳಿಯ ಗೋವಿನ ಮೂತ್ರದಲ್ಲಿ ಚಿನ್ನದ ಅಂಶ ಇದೆಯಂತೆ!ಪುರಾತನ ಗ್ರಂಥಗಳಲ್ಲಿ ಗೋವಿನ ಮೂತ್ರದಲ್ಲಿ ಚಿನ್ನದ ಅಂಶವಿರುವ ಉಲ್ಲೇಖಗಳಿವೆ. ಆದರೆ ಈವರೆಗೂ ಅದನ್ನು ಸಾಬೀತುಪಡಿಸುವ ಸಂಶೋಧನೆಗಳು ನಡೆದಿರಲಿಲ್ಲ.

ಜುನಾಗಢ ಕೃಷಿ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಿ.ಎ. ಗೋಲಕಿಯಾ ನೇತೃತ್ವದ ತಂಡ ನಾಲ್ಕು ವರ್ಷಗಳ ನಿರಂತರ ಅಧ್ಯಯನದ ಬಳಿಕ ಈ ಸತ್ಯವನ್ನು ಕಂಡುಕೊಂಡಿದೆ.ಸುಮಾರು 400 ಗಿರ್ ತಳಿ ಹಸುಗಳ ಮೂತ್ರದ ಮಾದರಿಯನ್ನು ತಂಡ ಪರೀಕ್ಷೆಗೊಳಪಡಿಸಿದೆ. ಅಧ್ಯಯನದ ವೇಳೆ 388 ಹಸುಗಳ ಪ್ರತಿ ಒಂದು ಲೀಟರ್ ಮೂತ್ರದಲ್ಲಿ ಸುಮಾರು 3ರಿಂದ 10 ಮಿಲಿಗ್ರಾಂವರೆಗೆ ಚಿನ್ನದ ಅಂಶ ಇರುವುದು ಪತ್ತೆಯಾಗಿದೆ. ಇದು ಅಯಾನಿಕ್ ರೂಪದಲ್ಲಿದ್ದು, ಇದನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಗಟ್ಟಿಗೊಳಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Comments