UK Suddi
The news is by your side.

ಬಿವಿವಿ ಸಂಘದ ವಿದ್ಯಾರ್ಥಿನಿ ಪೋರ್ಚುಗಲ್ ರಾಯಭಾರಿ

Nacional-5

ಬಾಗಲಕೋಟೆ: ನಗರದ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯಾಗಿದ್ದ ನಂದಿನಿ ಸಿಂಗ್ಲಾ ಪೋರ್ಚುಗಲ್ನ ಭಾರತದ ರಾಯಭಾರಿಯಾಗಿ ನಿಯುಕ್ತಿಗೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿ ಸಂಜೀವ ಸಿಂಗ್ಲಾ ಅವರ ಪತ್ನಿ ನಂದಿನಿ, ಬಿವಿವಿ ಸಂಘದ ಮಹಾವಿದ್ಯಾಲಯದಲ್ಲಿ ಪಿಯುಸಿ ಓದಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.88 ಅಂಕ ಪಡೆದಿದ್ದ ನಂದಿನಿ ಕಲಾ ವಿಷಯ ಆಯ್ಕೆ ಮಾಡಿಕೊಂಡು 1988 ರಿಂದ 1990ರ ವರೆಗೆ ಬಸವೇಶ್ವರ ಕಲಾ ಕಾಲೇಜಿನಲ್ಲಿ ದ್ವಿತೀಯ ಪಿಯು ಓದಿದ್ದರು. ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು ಮಹಾವಿದ್ಯಾಲಯ ಕೀರ್ತಿ ಹೆಚ್ಚಿಸಿದ್ದರು. 1997 ರಲ್ಲಿ ಐಎಫ್ಎಸ್ ಪರೀಕ್ಷೆಯಲ್ಲಿ 46ನೇ ರ್ಯಾಂಕ್ ಪಡೆದು ಭಾರತದ ಪ್ರತಿನಿಧಿಯಾಗಿ ಫ್ರಾನ್ಸ್, ಬಾಂಗ್ಲಾ ಮುಂತಾದ ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ನಂದಿನಿ ಅವರ ಸಾಧನೆ ಬಿವಿವಿ ಸಂಘಕ್ಕೆ ಹೆಮ್ಮೆ ತರುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿರುವ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ದೂರವಾಣಿ ಮೂಲಕ ಅವರನ್ನು ಅಭಿನಂದಿಸಿ ಶುಭಾಶಯ ಕೋರಿದ್ದಾರೆ.

 

Comments