ಸಾರಿಗೆ ಸಿಬ್ಬಂದಿ ವೇತನ ಹೆಚ್ಚಳ
ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ 1.15 ಲಕ್ಷ ಸಿಬ್ಬಂದಿಗೆ ಶೇ.8 ರಷ್ಟು ವೇತನ ಹೆಚ್ಚಳ ಮಾಡಲು ಸರಕಾರ ತೀರ್ಮಾನಿಸಿದೆ. ನಾಲ್ಕು ವರ್ಷಕ್ಕೊಮ್ಮೆ ಸಿಬ್ಬಂದಿಯ ವೇತನ ಪರಿಷ್ಕರಿಸಲಾಗುತ್ತದೆ. ವೇತನ ಹೆಚ್ಚಳದಿಂದ ಸಂಸ್ಥೆಗೆ ಮುಂದಿನ ನಾಲ್ಕು ವರ್ಷದವರೆಗೆ 1131.11 ಕೋಟಿ ರು. ಹೊರೆ ಬೀಳಲಿದೆ. ಪರಿಷ್ಕೃತ ವೇತನ ಜನವರಿ 1 ರಿಂದಲೇ ಪೂರ್ವಾನ್ವಯವಾಗಲಿದೆ.