UK Suddi
The news is by your side.

ಓಡಿದರೆ ಹೆಚ್ಚುತ್ತದೆ ನೆನಪಿನ ಶಕ್ತಿ

BaseTraining620

ಪ್ರತಿನಿತ್ಯ ನಿಯಮಿತವಾಗಿ ಓಡುತ್ತಿದ್ದರೆ ಮೆದುಳಿನ ಸ್ಮರಣ ಶಕ್ತಿ ಹೆಚ್ಚುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಅಮೆರಿಕ ಮತ್ತು ಜರ್ಮನಿಯ ಅಧ್ಯಯನಕಾರರು ನಡೆಸಿದ ಜಂಟಿ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ನಿಯಮಿತವಾಗಿ ಓಡುವುದರಿಂದ ದೇಹದಲ್ಲಿ ಕ್ಯಾಥೆಪ್ಸಿನ್ ಬಿ ಪ್ರೊಟೀನ್ ಪ್ರಮಾಣ ಏರಿಕೆಯಾಗುತ್ತದೆ. ಇದರಿಂದ ಸ್ಮರಣಾ ಶಕ್ತಿ ಹೆಚ್ಚುತ್ತದೆ ಎಂದು ತಿಳಿದುಬಂದಿದೆ. ಈ ಪ್ರೊಟೀನ್ ಪ್ರಮಾಣ ಪ್ರಾಥಮಿಕ ಕಲಿಕೆಗೆ ಹೆಚ್ಚು ಸಹಕಾರಿ ಯಾಗಿದೆ. ಈ ಬಗ್ಗೆ ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದ್ದು, ಸಾಮಾನ್ಯವಾಗಿರುವ ಇಲಿಗಳಲ್ಲಿ ಕ್ಯಾಥೆಪ್ಸಿನ್ ಬಿ ಪ್ರೊಟೀನ್ ಪ್ರಮಾಣ ಮತ್ತು ಹೆಚ್ಚಾಗಿ ಓಡುವ ಇಲಿಗಳಲ್ಲಿರುವ ಪ್ರಮಾಣ ಮತ್ತು ಅವುಗಳ ಸ್ಮರಣ ಶಕ್ತಿಯ ತುಲನೆ ಮಾಡಿದ್ದು, ಓಡುವ ಇಲಿಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಕ್ಯಾಥೆಪ್ಸಿನ್ ಪ್ರೊಟೀನ್ ಬಿಡುಗಡೆಯಾಗುತ್ತಿ ರುವುದು ಮತ್ತು ಅಂತಹ ಇಲಿಗಳ ನೆನಪಿನ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಕ್ಯಾಥೆಪ್ಸಿನ್ ಬಿ ಪ್ರೊಟೀನ್ನಿಂದ ಅಲ್ಜೆಮರ್ ಕಾಯಿಲೆಯ ನಿಯಂತ್ರಣವೂ ಸಾಧ್ಯ ಎಂಬುದು ತಿಳಿದುಬಂದಿದೆ. ಅಲ್ಜೆಮರ್ಗೆ ಪ್ರಮುಖ ಕಾರಣವಾಗಿರುವ ಮೆದುಳಿನ ಅಮ್ಲಿಯಾಯ್್ಡ ಪ್ಲಾಕ್ನ ನಿವಾರಣೆಯನ್ನೂ ಇದು ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ಅಗತ್ಯ ಎಂದಿದ್ದಾರೆ.

Comments