ಶೇ 4ರ ಬಡ್ಡಿದರದಲ್ಲಿ ರೈತರಿಗೆ ಕೃಷಿ ಸಾಲ
ನವದೆಹಲಿ: ಹಾಲಿ ಆರ್ಥಿಕ ವರ್ಷದಲ್ಲಿ ರೈತರಿಗೆ ₹ 3 ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲ ಶೇಕಡ 4ರಷ್ಟು ಬಡ್ಡಿ ದರದಲ್ಲಿ ಸಿಗಲಿದೆ.
‘ಈ ಸಾಲದ ಅವಧಿ ಒಂದು ವರ್ಷ. ಈ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿಗೆ ಕೇಂದ್ರ ಸರ್ಕಾರದಿಂದ ಶೇಕಡ 5ರಷ್ಟು ಸಬ್ಸಿಡಿ ಸಿಗಲಿದೆ. ಹಾಗಾಗಿ ರೈತರು ತಮ್ಮ ಕಿಸೆಯಿಂದ ಶೇಕಡ 4ರಷ್ಟು ಬಡ್ಡಿ ಪಾವತಿಸಿದರೆ ಸಾಕು. ಒಂದು ವರ್ಷದ ಅವಧಿಯಲ್ಲಿ ರೈತರು ಈ ಸಾಲ ಮರುಪಾವತಿ ಮಾಡದೆ ಇದ್ದರೆ, ಶೇಕಡ 7ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ’ ಎಂದು ಕೇಂದ್ರ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಒಂದು ವರ್ಷದ ಅವಧಿಗೆ, ₹ 3 ಲಕ್ಷದವರೆಗೆ ಕೃಷಿ ಸಾಲ ಪಡೆಯುವ ಎಲ್ಲ ರೈತರಿಗೆ ಈ ಯೋಜನೆ ಅನ್ವಯ ಆಗುತ್ತದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.
ಸರ್ಕಾರಿ, ಖಾಸಗಿ ವಲಯದ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಮತ್ತು ನಬಾರ್ಡ್ ಈ ಯೋಜನೆ ವ್ಯಾಪ್ತಿಗೆ ಬರುತ್ತವೆ
.