UK Suddi
The news is by your side.

ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ? ಕೊಪ್ಪಳದಲ್ಲಿ ಕ್ಲೈಮ್ಯಾಕ್ಸ್ ?

bahubali2015 ರಲ್ಲಿ ಇಡೀ ವಿಶ್ವದ ಗಮನ ಸೆಳೆದ ಭಾರತೀಯ ಸಿನಿಮಾ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 550 ಕೋಟಿ ರೂಪಾಯಿಗಳ ದಾಖಲೆಯ ಗಳಿಕೆ ಕಂಡ ಸಿನಿಮಾ ಬಾಹುಬಾಲಿ. ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದ ಟಾಲಿವುಡ್ ನ ಬಾಹುಬಲಿಯ ಎರಡನೇ ಭಾಗವನ್ನು ಇದೇ ವರ್ಷ ಬಿಡುಗಡೆ ಮಾಡುವುದಾಗಿ ಹೇಳಿರುವ ನಿರ್ದೇಶಕ ರಾಜಮೌಳಿ, ಚಿತ್ರೀಕರಣಕ್ಕೆ ಚುರುಕು ನೀಡಿದ್ದಾರೆ.

ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎಂಬ ಕ್ಲೈಮ್ಯಾಕ್ಸ್ ತೋರಿಸದೆ, ಅದನ್ನು ಪಾರ್ಟ್ 2 ನಲ್ಲಿ ತೋರಿಸುವುದಾಗಿ ಹೇಳಿ ಕುತೂಹಲ ಮೂಡಿಸಿರುವ  ನಿರ್ದೇಶಕ ರಾಜಮೌಳಿ, ಬಾಹುಬಲಿ-2 ಚಿತ್ರದ ಚಿತ್ರೀಕರಣವನ್ನು ಭರದಿಂದ ಮಾಡುತ್ತಿದ್ದಾರೆ. ಆದರೆ, ಚಿತ್ರದ ಯುದ್ಧದ ಸನ್ನಿವೇಶದ ಒಂದು ಭಾಗವನ್ನು ಕೊಪ್ಪಳದಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದಾರೆ.
ಐತಿಹಾಸಿಕ, ಹನುಮ ಜನಿಸಿದ ಸ್ಥಳವೆಂದೇ ಕರೆಯಲ್ಪಡುವ ಕೊಪ್ಪಳದ ಕಿಷ್ಕಿಂದ್, ಅಂಜನಾದ್ರಿ ಪರ್ವತ ಹಾಗೂ ಅನೆಗುಂದಿ ಸೇರಿದಂತೆ ಪಂಪಾ ಸರೋವರಕ್ಕೆ ಚಿತ್ರ ತಂಡ ಭೇಟಿ ನೀಡಿ ಸೂಕ್ತ ಸ್ಥಳ ಪರಿಶೀಲನೆ ನಡೆಸಿದೆ.
ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಸ್ಥಳಗಳು ಇರುವ ಕಾರಣ ಗತಕಾಲದ ಇತಿಹಾಸ ಸಾರುವ ಅನೇಕ ಕುರುಹುಗಳಿವೆ. ಮಾತ್ರವಲ್ಲದೆ, ಬೆಟ್ಟಗಳು, ಕಲ್ಲು ಬಂಡೆಗಳು ಬಾಹುಬಲಿ ಚಿತ್ರಕ್ಕೆ ಹೇಳಿ ಮಾಡಿಸಿದಂತಿವೆ. ಹೀಗಾಗಿ ಈ ಎಲ್ಲಾ ಕುರುಹುಗಳಿಂದ ಈ ಚಿತ್ರಕ್ಕೆ ಪೂರಕವಾದ ಸ್ಥಳಗಳು ಇಲ್ಲಿ ಸಿಗುತ್ತವೆ ಎಂಬುದು ಜನರ ಅಭಿಪ್ರಾಯ.

Comments