ಮಳೆ ಪ್ರಮಾಣ ಇಳಿಮುಖ
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಭಾನುವಾರಕ್ಕೆ (ಜುಲೈ10)ಒಂದು ತಿಂಗಳಾಗುತ್ತದೆ. ಈ ಅವಧಿಯಲ್ಲಿ ಯಾದಗಿರಿ ಮತ್ತು ಚಾಮರಾಜ ನಗರದಲ್ಲಿ ಮಾತ್ರ ಮುಂಗಾರು ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಡಿಕೆ ಮಳೆಗೆ ಹೋಲಿಸಿದರೆ ಯಾದಗಿರಿಯಲ್ಲಿ ಶೇ.24 ಮತ್ತು ಚಾಮರಾಜನಗರದಲ್ಲಿ ಶೇ.25 ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರದಂದು ರಾಜ್ಯದೆಲ್ಲೆಡೆ ಮಳೆ ಪ್ರಮಾಣ ಇಳಿಮುಖವಾಗಿದೆ. ಮಂಗಳೂರಿನಲ್ಲಿ 4 ಸೆಂ.ಮೀ., ಮೂಡಬಿದಿರೆ, ಮಾಣಿ, ಧರ್ಮಸ್ಥಳ ಹಾಗೂ ಉಡುಪಿಯಲ್ಲಿ 3, ಪುತ್ತೂರು, ಕಾರ್ಕಳ, ಕುಂದಾಪುರ, ಜಯಪುರ ಹಾಗೂ ಸಕಲೇಶಪುರದಲ್ಲಿ 2 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದೊಂದು ವಾರದಿಂದ ಮಳೆ ಪ್ರಮಾಣ ರಾಜ್ಯದಲ್ಲಿ ಇಳಿಮುಖವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಪ್ಪಳ ರಾಯಚೂರು, ಯಾದಗಿರಿ, ವಿಜಯಪುರ, ಕಲಬುರ್ಗಿ ಹಾಗೂ ಬೀದರ್ನಲ್ಲಿ ಮಳೆ ಪ್ರಮಾಣ ಜೂನ್ 30ರಿಂದ ಜುಲೈ 7ರವರೆಗೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.