UK Suddi
The news is by your side.

ಹುಕ್ಕೇರಿ: ಶಾಲೆ ಗೋಡೆ ಕುಸಿತಕ್ಕೆ ಇಬ್ಬರು ಸಾವು


ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಒಳಗೋಡೆ ಕುಸಿದು ಬಿದ್ದು ಇಬ್ಬರು ಬಾಲಕಿಯರು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.ಲಗಮವ್ವ ಕಟ್ಟಿಮನಿ (11), ಸವಿತಾ ಕೋಳಿ (11) ಮೃತ ವಿದ್ಯಾರ್ಥಿನಿಯರು. 5ನೇ ತರಗತಿಯ ಈ ಇಬ್ಬರು ಬಾಲಕಿಯರು ಶಾಲೆ ಪ್ರಾರಂಭವಾದ ತಾಸಿನಲ್ಲೇ ದುರ್ಘಟನೆಗೆ ಬಲಿಯಾಗಿದ್ದಾರೆ.

ಕಲ್ಲು ಮಿಶ್ರಿತ ಮಣ್ಣು ಬಿದ್ದಿದ್ದರಿಂದ ಗೋಡೆ ಪಕ್ಕದಲ್ಲೇ ಕುಳಿತಿದ್ದ ಒಬ್ಬ ಬಾಲಕಿಯ ತಲೆ ಒಡೆದು, ಇನ್ನೊಬ್ಬಳು ಉಸಿ ರಾಡಲಾಗದೇ ಮೃತಪಟ್ಟಿದ್ದಾಳೆ. ಇನ್ನೊಬ್ಬ ಬಾಲಕಿ ಸುಮಂಗಲಾ ಯಲ್ಲಪ್ಪ ಗೋಪಾಲಪ್ಪಗೋಳ ತೀವ್ರ ಗಾಯಗೊಂಡಿದ್ದು , ಸ್ಥಳೀಯ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾಳೆ. ಒಟ್ಟು ಗಾಯಗೊಂಡ 23 ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

Comments