UK Suddi
The news is by your side.

ಗೋಕಾಕ ಫಾಲ್ಸಗೆ ಸಿದ್ದೇಶ್ವರ ಶ್ರೀಗಳು

ಗೋಕಾಕ: ವಿಜಯಪುರದ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಗೋಕಾಕ ಫಾಲ್ಸ ಹಾಗೂ ಗೊಡಚಿನಮಲ್ಕಿ ಜಲಪಾತಗಳು ಮತ್ತು ಧುಪದಾಳ ಜಲಾಶಯಕ್ಕೆ ಶುಕ್ರವಾರದಂದು ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಿದರು. ಇಂದು ಮುಂಜಾನೆ 11 ಗಂಟೆಗೆ ಗೋಕಾಕ ಫಾಲ್ಸಕ್ಕೆ ಆಗಮಿಸಿ ಜಲಪಾತದ ಕೆಳಗೆ ತೊಟ್ಟಿಲು ಮುಖಾಂತರ ಹೋಗಿ ವಿದ್ಯುತ್ ಉತ್ಪಾದನಾ ಘಟಕವನ್ನು ವೀಕ್ಷಿಸಿದರು.

Comments