UK Suddi
The news is by your side.

ಜುಲೈ 31 ರಂದು ಐಐಟಿ ಉದ್ಘಾಟನೆ

1-IIT-web ಧಾರವಾಡ: ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಜುಲೈ 31 ರಂದು ಧಾರವಾಡದಲ್ಲಿ ಐಐಟಿಯನ್ನು ಉದ್ಘಾಟಿಸಲಿದ್ದು, ಆಗಸ್ಟ್ 1 ರಿಂದ ತರಗತಿಗಳು ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಐಐಟಿ ಸ್ಥಾಪನೆಯಾಗುತ್ತಿರುವುದು ಅತ್ಯಂತ ಹರ್ಷದಾಯಕ, ರಾಜ್ಯಕ್ಕೆ ಇಂಥಹ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ಅವಶ್ಯಕತೆ ಇತ್ತು. ರಾಜ್ಯ ಸರ್ಕಾರ ಐಐಟಿಗೆ ಬೇಕಾದ ಎಲ್ಲಾ ಬೆಂಬಲ ನೀಡಲಿದೆ. ಐಐಟಿಗಾಗಿ ರಾಜ್ಯ ಸರ್ಕಾರ 470 ಎಕರೆ ಜಮೀನನ್ನು ಉಚಿತವಾಗಿ ನೀಡಲಿದೆ. ಇನ್ನು ಒಂದು ವಾರದಲ್ಲಿ ಭೂಮಿ ಹಸ್ತಾಂತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಯರೆಡ್ಡಿ ತಿಳಿಸಿದರು. ವಿವಿಗಳ ಕುಲಪತಿಗಳ ಶೃಂಗ ಸಭೆ ಆಗಸ್ಟ್ 1 ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಶೃಂಗ ಸಭೆ ನಡೆಯಲಿದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಇಂಥಹ ಸಭೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆ ಮತ್ತು ಶೈಕ್ಷಣಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ರಾಯರೆಡ್ಡಿ ತಿಳಿಸಿದರು.

 

Comments