ಕೆ.ಜೆ. ಜಾರ್ಜ್ ಕಡೆಗೂ ತಲೆದಂಡ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿದ್ದ ಸಚಿವ ಕೆ.ಜೆ. ಜಾರ್ಜ್ ಕಡೆಗೂ ತಲೆದಂಡ. ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಸಲ್ಲಿಸಿದ ಜಾರ್ಜ್.
ಜಾರ್ಜ್ ರಾಜೀನಾಮೆ: ಗಣಪತಿ ಆತ್ನಹತ್ಯೆಗೆ ಮೊದಲ ತಲೆದಂಡ
ಮಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಮೊದಲ ತಲೆದಂಡವಾಗಿ ಸಚಿವ ಕೆ.ಜೆ. ಜಾರ್ಜ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಗಣಪತಿ ಪತ್ನಿ ಪಾವನಾ ಹೋರಾಟಕ್ಕೆ ಸಿಕ್ಕ ಮೊದಲ ಜಯ ಇದಾಗಿದೆ. ಕೆಜೆ ಜಾರ್ಜ್ ಎಎಂ ಪ್ರಸಾದ್ ಹಾಗೂ ಪ್ರಣವ್ ಮೊಹಾಂತಿ ವಿರುದ್ಧ FIR ದಾಖಲಿಸುವಂತೆ ಕೋರ್ಟ್ ಆದೇಶಿಸಿತ್ತು. ಪಕ್ಷಕ್ಕಾಗುತ್ತಿರುವ ಮುಜುಗರ ತಪ್ಪಿಸಿಕೊಳ್ಳುವ ಸಲುವಾಗಿ ಜಾರ್ಜ್ ರಾಜೀನಾಮೆ ತೆಗೆದುಕೊಳ್ಳುವಂತೆ ಹಿರಿಯ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರನ್ನ ಒತ್ತಾಯಿಸಿದ್ದರು. ಕೊನೆಗೆ ಸಿಎಂ ತಮ್ಮ ದೋಸ್ತಿ ರಾಜೀನಾಮೆ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ.