ರಾಹುಲ್ ಗೆ ಮುಖಭಂಗ
ದೆಹಲಿ: ಮಹಾತ್ಮ ಗಾಂಧಿ ಹತ್ಯೆಗೆ ಆರ್ ಎಸ್ಎಸ್ ಕಾರಣ ಎಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮತ್ತೊಮ್ಮೆ ಮುಖಭಂಗವಾಗಿದ್ದು, ತಮ್ಮ ಹೇಳಿಕೆಯ ವಿಚಾರವಾಗಿ ಆರ್ ಎಸ್ಎಸ್ ಸಂಘಟನೆಗೆ ಕ್ಷಮಕೋರಬೇಕು ಇಲ್ಲವೇ ವಿಚಾರಣೆ ಎದುರಿಸಲು ಮುಂದಾಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
2014ರ ಲೋಕಸಭಾ ಚುನಾವಣೆಯ ಮತ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ, ಮಹಾತ್ಮಾ ಗಾಂಧಿಯವರ ಸಾವಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೇ ಮೂಲ ಕಾರಣ ಎಂದು ಆರೋಪಿಸಿದ್ದರು. ಈ ಹೇಳಿಕೆಯ ಆಧಾರದ ಮೇಲೆ ರಾಹುಲ್ ಗಾಂಧಿ ವಿರುದ್ದ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರದಂದು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮ್ಮ ಹೇಳಿಕೆಯ ಪರ ಆರ್ ಎಸ್ಎಸ್ ಸಂಘಟನೆಯ ಬಳಿ ಕ್ಷಮೆಯಾಚಿಸಬೇಕು ಇಲ್ಲವೇ ವಿಚಾರಣೆ ಎದುರಿಸಲು ಸಿದ್ದರಾಗಬೇಕು, ಒಂದು ಸಂಘಟನೆಯನ್ನು ಸಾರ್ವಜನಿಕವಾಗಿ ದೂಷಿಸುವ ಹಕ್ಕು ಯಾರಿಗೂ ಇಲ್ಲ ಎಂದು ಆದೇಶಿಸಿದೆ.
ರಾಹುಲ್ ಗಾಂಧಿಗೆ ತಮ್ಮ ನಿಲುವನ್ನು ತಿಳಿಸಲು ಜುಲೈ 27ರ ತನಕ ಕಾಲಾವಕಾಶ ನೀಡಿದೆ.