ಮಹದಾಯಿ ಬಂದ್!ಧಾರವಾಡದಲ್ಲಿ ರಸ್ತೆಯಲ್ಲೇ ಭಜನೆ ನಡೆಸಿ ಪ್ರತಿಭಟನೆ!
ಇಲ್ಲಿನ ಆಲೂರು ವೆಂಕಟರಾವ್ ವೃತ್ತದಲ್ಲಿ ಸೇರಿದ ನೂರಾರು ಜನರು ವೃತ್ತದಲ್ಲೇ ಕುಳಿತು ಭಜನೆ ಪದಗಳನ್ನು ಹಾಡಿದರು. ಅಲ್ಲದೇ ಬಸವರಾಜ ಸೂಳಿಭಾವಿ ಅವರು ಮಹದಾಯಿ ನೀರಿನ ಕುರಿತಾಗಿ ಬರೆದ ಕೆಲವೊಂದಿಷ್ಟು ಹಾಡುಗಳನ್ನು ಹಾಡಲಾಯಿತು. ರಸ್ತೆಗಳಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಓಸವಾಲ್ ಟವರ್ ಮುಂಭಾಗದಲ್ಲಿ ಕೆಲವೊಂದಿಷ್ಟು ಹುಡುಗರು ಕ್ರಿಕೆಟ್ ಆಡಿದರು. ಈ ವೇಳೆ ವೃತ್ತದಲ್ಲೇ ವಿವಿಧ ಸಂಘಟನೆ ಮುಖಂಡರು, ಸರ್ಕಾರಗಳ ವಿರುದ್ಧ ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.