UK Suddi
The news is by your side.

ಕಲಬುರ್ಗಿ ಯೋಧನ ಸಾವು 

ಕಲಬುರಗಿ: ಜಮ್ಮು ಪ್ರಾಂತ್ಯದಲ್ಲಿ ಉಂಟಾದ ಭೂಕುಸಿತದಿಂದಾಗಿ ಯೋಧರು ಸಂಚರಿಸುತ್ತಿದ್ದ ಲಾರಿ ಉರುಳಿ ಬಿದ್ದ ಪರಿಣಾಮ ಆಳಂದ ತಾಲೂಕು ಸಾವಳೇಶ್ವರ ಗ್ರಾಮದ ಯೋಧ ಮೃತಪಟ್ಟಿದ್ದಾರೆ.
ಭಾರತೀಯ ಭೂಸೇನೆ ವ್ಯಾಪ್ತಿಯ ಸಾಂಗಧರಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಂತಪ್ಪ ನೆಲ್ಲಗಿ (೨೫) ಮೃತಪಟ್ಟಿರುವ ಯೋಧರಾಗಿದ್ದಾರೆ. ಗುರುವಾರ ನಸುಕಿನ ಜಾವ ಸಾಂಗಧರಾ ಪ್ರದೇಶದಲ್ಲಿ ಕರ್ತವ್ಯ ರ್ನಿಹಿಸುತ್ತಿದ್ದ ವೇಳೆ ಭೂ ಕುಷಿತ ಉಂಟಾಗಿ ಸಾವನ್ನಪ್ಪಿದ್ದಾರೆ. 
ಇವರ ಅಂತ್ಯಕ್ರಿಯೆ ಇಂದು ಸಂಜೆ ಅವರ ಸ್ವಗ್ರಾಮ ಸಾವಳೇಶ್ವರದ ತೋಟದಲ್ಲಿ ನಡೆಯಲಿದ್ದು. ಮೃತ ಯೋಧ ಅವಿವಾಹಿತರಾಗಿದ್ದಾರೆ. ತಂದೆ ಗುರುಪಾದಪ್ಪ ತಾಯಿ ಸುಗಲಾಬಾಯಿ ಅಣ್ಣ ಶಿವಲಿಂಗಪ್ಪ ಹಾಗೂ ಇಬ್ಬರು ಸಹೋದರಿಯರನ್ನು ಶಾಂತಪ್ಪ ಅಗಲಿದ್ದಾರೆ. ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಮಾತ್ರವಲ್ಲ ಇಡೀ ಗ್ರಾಮವೇ ದುಃಖದ ಮಡುವಿನಲ್ಲಿ ಮುಳುಗಿದೆ.

Comments