UK Suddi
The news is by your side.

‘ವಿಶ್ವ ಹುಲಿ ದಿನ’

ಇಂದು ವಿಶ್ವ ಹುಲಿ ದಿನ.. ರಾಜ್ಯದಲ್ಲಿ ಏತಕ್ಕಾಗಿ, ಹೇಗಿದೆ ಟೈಗರ್‌‌ ಪ್ರಾಜೆಕ್ಟ್‌‌?
ಮೈಸೂರು: ಹುಲಿ ಕಾರಿಡಾರ್ ಎಂಬ ಖ್ಯಾತಿಯ ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಸಂತತಿಯ ಬೆಳವಣಿಗೆ ಹೇಗಿದೆ, ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ‘ವಿಶ್ವ ಹುಲಿ ದಿನ’ದ ಪ್ರಯುಕ್ತ ಒಂದಿಷ್ಟು ಮಾಹಿತಿ ಇಲ್ಲಿದೆ.
ನಶಿಸುತ್ತಿರುವ ರಾಷ್ಟ್ರೀಯ ಪ್ರಾಣಿ ಹುಲಿ ಸಂತತಿಯ ಬಗ್ಗೆ ಅರಿವು ಮೂಡಿಸಲು 2010ರಲ್ಲಿ ಸೇಂಟ್ ಪೀಟರ್ಸ್ ಬರ್ಗ್‌ ಅವರಿಂದ ‘ವಿಶ್ವ ಹುಲಿ ದಿನ’ ಆರಂಭವಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 29ರಂದು ಹುಲಿಗಳ ಆಹಾರ ಪದ್ಧತಿ, ಅದರ ಜೀವನ ಕ್ರಮವನ್ನ ಜನರಿಗೆ ತಿಳಿಸಲು ಈ ದಿನವನ್ನ ‘ವಿಶ್ವ ಹುಲಿ ದಿನ’ವಾಗಿ ಆಚರಿಸಲಾಗುತ್ತಿದೆ. 
ಭಾರತದಲ್ಲಿ ಹುಲಿ ಸಂತತಿ ನಶಿಸುತ್ತಿರುವುದನ್ನ ಮನಗಂಡ ಅಂದಿನ ಪ್ರಧಾನಿ ಇಂದಿರಾ ಗಾಂಧಿ 1972ರಲ್ಲಿ ರಾಷ್ಟ್ರದ 9 ಹುಲಿ ವಾಸ ಮಾಡುವ ಅರಣ್ಯಗಳನ್ನ ಹುಲಿ ಯೋಜನೆ ವ್ಯಾಪ್ತಿಗೆ ತಂದರು. ಈ ಯೋಜನೆಗೆ ತಗಲುವ ಸಂಪೂರ್ಣ ವೆಚ್ಚವನ್ನ ಅಂದು ಕೇಂದ್ರ ಸರ್ಕಾರ ಭರಿಸುತ್ತಿತ್ತು. ಇದರನ್ವಯ ಈ ಹುಲಿ ಯೋಜನಗೆ ಒಳಪಟ್ಟ ಅರಣ್ಯ ಪ್ರದೇಶಗಳು ನಿಷೇಧಿತ ಪ್ರದೇಶವಾಗಿದ್ದು, ಇಲ್ಲಿ ಜನರು ಅತಿಕ್ರಮಣ ಮಾಡುವಂತಿಲ್ಲ. ಮರಗಳನ್ನ ಕಡೆಯುವಂತಿಲ್ಲ. ಯಾವುದೇ ಖಾಸಗಿ ರೆಸಾರ್ಟ್‌ಗಳನ್ನ ತೆರೆಯುವಂತಿಲ್ಲ. ಹಾಡಿಗಳು ಇರುವಂತಿಲ್ಲ. ಅಲ್ಲದೆ ಯಾವುದೇ ಕಾಡು ಪ್ರಾಣಿಗಳನ್ನ ಬೇಟೆ ಆಡದಂತೆ ನಿಷೇಧವಿರುತ್ತದೆ. ಈ ಹುಲಿ ಯೋಜನೆ (ಎನ್‌ಟಿಸಿಎ)ಗೆ ಪ್ರಧಾನಿಯವರೇ ಅಧ್ಯಕ್ಷರಾಗಿರುತ್ತಾರೆ.  
ಹುಲಿಗಳ ವಿವರ:
ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶವನ್ನು ಹುಲಿ ಕಾರಿಡಾರ್ ಎಂದು ಕರೆಯುತ್ತಾರೆ. ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 2006ರಲ್ಲಿ 290 ಹುಲಿಗಳು, 2010ರಲ್ಲಿ 300, 2014ರಲ್ಲಿ 406 ಹುಲಿಗಳಿದ್ದವು. ಅದರಲ್ಲಿ 2014ರಲ್ಲಿ ನಾಗರಹೊಳೆಯಲ್ಲಿ 93 ಹುಲಿಗಳು, ಬಂಡೀಪುರದಲ್ಲಿ 110 ಹುಲಿಗಳು ಇವೆ. ಇಲ್ಲಿಯವರೆಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ನಡೆಸಲಾಗುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಅರಣ್ಯ ಪ್ರದೇಶಗಳಲ್ಲಿ ಅಳವಡಿಸಿರುವ ಕ್ಯಾಮರಾಗಳು ಹುಲಿಗಳ ಫೋಟೋಗಳನ್ನ ತೆಗೆಯುತ್ತಿರುವುದರಿಂದ ಈಗ ಪ್ರತಿ ವರ್ಷವೂ ಹುಲಿ ಗಣತಿ ನಡೆಸಲು ತೀರ್ಮಾನಿಸಲಾಗಿದೆ. 
ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶಗಳು ಹುಲಿ ಸಂತತಿಯ ಹೆಚ್ಚಳಕ್ಕೆ ಅನುಕೂಲವಾದ ವಾತಾವರಣ ಹೊಂದಿದ್ದು, ಇಲ್ಲಿ ಆಹಾರ ಸಮಸ್ಯೆ ಇರುವುದಿಲ್ಲ. ಇದರಿಂದ ಪ್ರತಿ ವರ್ಷವೂ ಹುಲಿ ಸಂತತಿ ಹೆಚ್ಚಾಗುತ್ತಿರುವುದುಕ್ಕೆ ಕಾರಣವಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು. 
ಕರ್ನಾಟಕದಲ್ಲಿ ಎಲೆಲ್ಲಿ: 
ನಶಿಸುತ್ತಿರುವ ಹುಲಿ ಸಂತತಿಯನ್ನ ರಕ್ಷಿಸಲು ಜಾರಿಗೆ ತಂದ ಪ್ರಾಜೆಕ್ಟ್ ಟೈಗರ್ ಪ್ಲಾನ್‌ ಡಿ. ಇತ್ತೀಚೆಗೆ ಕೇಂದ್ರ ಸರ್ಕಾರ ಶೇ. 60ರಷ್ಟು, ರಾಜ್ಯ ಸರ್ಕಾರ ಶೇ. 40ರಷ್ಟು ಕೆಲವು ಯೋಜನೆಗಳಿಗೆ ಹಣ ನೀಡಿದರೆ, ಟೈಗರ್‌‌ ಪ್ರಾಜೆಕ್ಟ್‌‌ನ ಶಾಸ್ವತ ಯೋಜನೆಗಳ ನಿರ್ಮಾಣಕ್ಕೆ ಶೇ.50 ರಷ್ಟು ಕೇಂದ್ರ ಸರ್ಕಾರ, 50ರಷ್ಟು ರಾಜ್ಯ ಸರ್ಕಾರ ಹಣವನ್ನ ನೀಡುತ್ತದೆ. ಇತ್ತೀಚೆಗೆ ಈ ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂತತಿಯನ್ನ ಹೆಚ್ಚಿಸಲು ಈ ಖರ್ಚು ಮಾಡುತ್ತದೆ. 
ಅದರಂತೆ 2014ರ ಹುಲಿ ಗಣತಿಯ ಪ್ರಕಾರ ಕರ್ನಾಟಕದ ಹುಲಿ ರಕ್ಷಿತಾರಣ್ಯ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಕಾಳಿ ಮೀಸಲು ಅರಣ್ಯ ಪ್ರದೇಶ ಹಾಗೂ ಭದ್ರ ರಿಸರ್ವ್ ಅರಣ್ಯ ಪ್ರದೇಶದಳಲ್ಲಿ ಟೈಗರ್ ಪ್ರಾಜೆಕ್ಟ್‌‌ ಯೋಜನೆಯಲ್ಲಿವೆ. 
ಗ್ರಾಮಗಳತ್ತ ಹುಲಿ:
ಹುಲಿಗಳು ತಮ್ಮ ವ್ಯಾಪ್ತಿಗಾಗಿ ಪರಸ್ಪರ ಕಾದಾಡುವುದು ಜೊತೆಗೆ ವಯಸ್ಸಾದ ಹುಲಿಗಳು ಬೇಟೆಯಾಡಲಾರದೆ ಗ್ರಾಮಗಳ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯ. ಇದರಂತೆ ಕಳೆದ ಮೂರು ವರ್ಷಗಳಿಂದ 12 ಕ್ಕೂ ಹೆಚ್ಚು ಹುಲಿಗಳು ಕಾಡಾಂಚಿನ ಗ್ರಾಮಗಳತ್ತ ಬಂದು ಜನ, ಜನುವಾರಗಳ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ದಾಖಲಾಗಿದೆ. ಹೆಚ್.ಡಿ. ಕೋಟೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಮೂರು ಜನರನ್ನ ಕೊಂದು ಹಾಕಿದ್ದು, ಇದರಲ್ಲಿ ಹತ್ತು ಹುಲಿಗಳನ್ನ ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದಾರೆ.

Comments