UK Suddi
The news is by your side.

​ಮಹದಾಯಿ ಹೋರಾಟ: ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ ರಾಜೀನಾಮೆ


 
ಬೆಳಗಾವಿ: ಮಹದಾಯಿ ವಿಚಾರವಾಗಿ ಕರ್ನಾಟಕ ವಿರುದ್ಧ ನ್ಯಾಯಾಧಿಕರಣದಿಂದ ಮಧ್ಯಂತರ ಆದೇಶ ಬಂದ ಹಿನ್ನೆಲೆಯಲ್ಲಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗುರುವಾರ ರಾತ್ರಿ ದಿಢೀರ್ ಆಗಿ ತಮ್ಮ ಕ್ಷೇತ್ರ ರಾಮದುರ್ಗಕ್ಕೆ ಹೊರಟ ಅಶೋಕ್ ಪಟ್ಟಣ ರೈತರ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜೀನಾಮೆ ಬಳಿಕ ಮಾತನಾಡಿ ಅವರು, ನೋವಿನಿಂದ ನಿರ್ಧಾರ ಕೈಗೊಂಡಿದ್ದೇನೆ. ತೀರ್ಪಗೆ ನಮ್ಮ ವಿರೋಧವಿದೆ. ಕಳಸಾ ಬಂಡೂರಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಿಯ ಮಾಡುತ್ತಿದೆ. ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ರು

ನನ್ನ ಜತೆಗೆ ಇಬ್ಬರು ಜಿಪಂ ಸದಸ್ಯರು, 9 ತಾಪಂ ಸದಸ್ಯರು, 18 ಪುರಸಭೆ ಸದಸ್ಯರು, ಗ್ರಾಮ ಪಂಚಾಯತ್‍ನ 344 ಹಾಗೂ ಹೆಸ್ಕಾಂ, ಸಣ್ಣ ಕೈಗಾರಿಕೆ ನಿಗಮ, ಖಾದಿ ಗ್ರಾಮೋದ್ಯೋಗ ಮಂಡಳಿ ಸರ್ಕಾರದ 50 ನಾಮ ನಿರ್ದೇಶನ ಸದಸ್ಯರ ರಾಜೀನಾಮೆ ನೀಡಿದ್ದು, ತಹಶೀಲ್ದಾರ ಮೂಲಕ ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದ್ರು

ಸಂಸದರು ಮತ್ತು  ಎಲ್ಲಾ ಶಾಸಕರು ರಾಜೀನಾಮೆ ನೀಡಬೇಕು, ಯೋಜನೆ ಅನುಷ್ಠಾನ ಆಗುವ ತನಕ ನಿರಂತರ ಹೋರಾಟ ಮಾಡುವುದಾಗಿ ಶಾಸಕ ಅಶೋಕ ಪಟ್ಟಣ ಹೇಳಿದ್ರು.

Comments