UK Suddi
The news is by your side.

ದೊಡವಾಡದಲ್ಲಿ ಅಖಿಲ ಭಾರತೀಯ ಯುವ ರಕ್ಷಣಾ ಪಡೆ(ರಿ) ನೇತೃತ್ವದಲ್ಲಿ ಬ್ರಹತ ಪ್ರತಿಭಟನಾ ರ್ಯಾಲಿ.

​
ದೊಡವಾಡ:: ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿಂದು ಅಖಿಲ ಭಾರತೀಯ ಯುವ ರಕ್ಷಣಾ ಪಡೆ ನೇತೃತ್ವದಲ್ಲಿ  ಮಹಾದಾಯಿ ನ್ಯಾಧಿಕರಣದ ತೀರ್ಪಿನ ವಿರುಧ್ದ ಮತ್ತು ನವಲಗುಂದ ನರಗುಂದ ತಾಲೂಕುಗಳಲ್ಲಿ  ಪೋಲಿಸರಿಂದ ಅಮಾಯಕರ ಮೇಲಾದ ದೌರ್ಜನ್ಯ ಖಂಡಿಸಿ ಶಾಂತಿಯುತವಾದ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡು ಕೊಪ್ಪದ ಅಗಸಿಯಲ್ಲಿ ಮುಕ್ತಾಯಗೊಳಸಿ ಗ್ರಾಮದ ಪಿಡಿಓ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕು ತಹಶೀಲ್ದಾರರವರಿಗೆ ಮನವಿ ಅರ್ಪಿಸಲಾಯಿತು ಪ್ರತಿಭಟನೆಯಲ್ಲಿ ಅ ಭಾ ಯುವ ಪಡೆ ತಾಲುಕ ಅಧ್ಯಕ್ಷ ಬಸವರಾಜ ಧಾರವಾಡ,ವಿದ್ಯಾರ್ಥಿ ಘಟಕದ ಅಧ್ಯಕ್ಷ ರವಿ ಅಕ್ಕಿ ಮಧು ಬೆಳವಡಿ ಗುರು,ಮಲ್ಲಿಕಾರ್ಜುನ,ಮಂಜು,ನಾಗು,ಸಂಗಮೇಶ,ಜಿಪಂ ಸದಸ್ಯ ಶಂಕರ ಮಾಡಲಗಿ ತಾಪಂ ಸದಸ್ಯಸಂಗಯ್ಯ ಧಾಬಿಮಠ ಗ್ರಾಮ ಪಂ ಸದಸ್ಯ ಬಸವಂತ ಜಮನೂರ ಹಾಗೂ ಎಲ್ಲ ಶಾಲಾ ಕಾಲೇಜು ಶಿಕ್ಷಕ ವೃಂದ ಹಾಗೂ ವಿಧ್ಯಾರ್ಥಿ ಸಮೂಹ ಹಾಗೂ ಗ್ರಾಮದ ಅನೇಕ ಮುಖಂಡರು ಉಪಸ್ತಿತರಿದ್ದರು…

-ಗುರು ಎಸ್ ಎ..

Comments