ನಲುಗಿದ್ದ ನವಲಗುಂದದಲ್ಲಿ ಹೋರಾಟದ ಕಿಚ್ಚು
ನವಲಗುಂದ : ಮಹದಾಯಿ ನ್ಯಾಯಾಧಿಕರಣದಲ್ಲಿ ಮಧ್ಯಂತರ ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಗಲಾಟೆ, ಪ್ರತಿಭಟನೆ, ನಿಷೇಧಾಜ್ಞೆ ಹಾಗೂ ಪೊಲೀಸರ ಅಟ್ಟಹಾಸದ ಪರಿಣಾಮದಿಂದ ಮರೆಯಾಗಿದ್ದ ಮಹದಾಯಿ ಹೋರಾಟಕ್ಕೆ ಗುರುವಾರ ಮತ್ತೆ ಚಾಲನೆ ದೊರಕಿದೆ.
ನವಲಗುಂದ, ಯಮನೂರ, ಆರೇಕುರಹಟ್ಟಿ, ಅಳಗವಾಡಿ ಗ್ರಾಮಸ್ಥರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ವಿರೋಧಿಸಿ ನವಲಗುಂದ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಕೆ.ಎಸ್. ಪುಟ್ಟಣ್ಣಯ್ಯ, ಚಾಮರಸ ಮಾಲಿಪಾಟೀಲ ಸೇರಿದಂತೆ ವಿವಿಧ ರೈತ ಮುಖಂಡರ ನೇತೃತ್ವದಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಸಮಾವೇಶಕ್ಕೆ ಮೈಸೂರು, ಮಂಡ್ಯ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಹಾವೇರಿ, ಗದಗ, ಹಳಿಯಾಳ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ರೈತರು ಸ್ವಯಂ ಪ್ರೇರಿತರಾಗಿ ಆಗಮಿಸಿದ್ದರು.
ಕಚೇರಿಗಳ ಸುತ್ತ ನಿಷೇಧಾಜ್ಞೆ
ನವಲಗುಂದ ಪಟ್ಟಣದಲ್ಲಿ ರೈತ ಸಮಾ ವೇಶ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸ ಲಾ ಗಿತ್ತು. ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾ ಗ ಬಾರ ದೆಂಬ ಕಾರ ಣಕ್ಕೆ ಕ್ಯಾಮೆರಾ ಕಣ್ಗಾವಲು ಇರಿಸಲಾಗಿತ್ತು. ಎಲ್ಲ ಸರಕಾರಿ ಕಚೇರಿ ಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.