UK Suddi
The news is by your side.

ಹುಬ್ಬಳ್ಳಿಯಲ್ಲಿ ಕೈಮಗ್ಗ ಉತ್ಪನ್ನಗಳ ಮಾಲ್

City-52

ರಾಷ್ಟ್ರದಲ್ಲಿ ಕೃಷಿ ಹೊರತುಪಡಿಸಿದರೆ, ಅತಿ ಹೆಚ್ಚು ಉದ್ಯೋಗ ಕಲ್ಪಿಸುತ್ತಿರುವ ಕೈಮಗ್ಗ ಉದ್ದಿಮೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಕೈಮಗ್ಗ ಉತ್ಪನ್ನಗಳಿಗೆಂದೇ ಪ್ರತ್ಯೇಕ ಮಾಲ್ ನಿರ್ವಿುಸಿ ಮಳಿಗೆಗಳನ್ನು ಬಾಡಿಗೆಗೆ ನೀಡಲು ರಾಜ್ಯದ ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ಧರಿಸಿದೆ. ಆ ಮೂಲಕ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ಸಮಸ್ಯೆ ಎದುರಿಸುತ್ತಿದ್ದ ಕೈಮಗ್ಗ ಉದ್ದಿಮೆದಾರರಿಗೆ ನೆರವಾಗಲು ಮುಂದಾಗಿದೆ.

ಕೈಮಗ್ಗ ಮತ್ತು ಜವಳಿ ಇಲಾಖೆ ಈ ಕುರಿತಂತೆ ಈಗಾಗಲೇ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದು, ಸರ್ಕಾರವೂ ಒಪ್ಪಿಗೆ ನೀಡಿದೆ. ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ ನೂರಾರು ಮಳಿಗೆಗಳ ಮಾಲ್ನಂತಹ ಕಟ್ಟಡ ನಿರ್ವಣವಾಗಲಿದೆ. ಆಸಕ್ತ ಕೈಮಗ್ಗ ಸಹಕಾರ ಸಂಘ ಸಂಸ್ಥೆಗಳು ಇಲ್ಲಿ ವ್ಯಾಪಾರವನ್ನು ಆರಂಭಿಸಬಹುದು. ಈ ಮಳಿಗೆಗಳನ್ನು ಬಾಡಿಗೆ ನೀಡಲು ಕೈಮಗ್ಗ ಅಭಿವೃದ್ಧಿ ನಿಗಮ ನಿರ್ಧರಿಸಿದೆ. ನಿರ್ವಣವಾಗಲಿರುವ ಮಾಲ್ನಲ್ಲಿ ಕೈಮಗ್ಗ ಉತ್ಪನ್ನಗಳಷ್ಟೇ ದೊರೆಯಲಿವೆ.

Comments