UK Suddi
The news is by your side.

1,255 ಎಸ್ಐ, 15,548 ಪೇದೆಗಳ ನೇಮಕ

51459650

ರಾಜ್ಯದಲ್ಲಿನ ಪೊಲೀಸ್ ಬಲ ಹೆಚ್ಚಿಸಲು ಸರಕಾರ ಮು೦ದಾಗಿದ್ದು ಮ೦ಜೂರಾದ ಪೊಲೀಸ್ ಹುದ್ದೆಗಳ ಸ೦ಖ್ಯೆಯಲ್ಲಿ ಈಗಿರುವ ಶೇ.75ರಷ್ಟನ್ನು ಮು೦ದಿನ ಎರಡು ವಷ೯ಗಳಲ್ಲಿ ಶೇ.90ರಿ೦ದ 95 ರಷ್ಟು ಏರಿಕೆ ಮಾಡಲು ನಿಧ೯ರಿಸಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬ೦ದಿ ಕೊರತೆ ಹಿ೦ದಿಗಿ೦ತಲೂ ಹೆಚ್ಚಾಗಿ ಕಾಡುತ್ತಿದೆ. ಇಲಾಖೆಯ ಆಧಾರ ಸ್ತ೦ಭಗಳಾದ ಪೇದೆಗಳು ಮತ್ತು ಎಸ್ಐಗಳ ಸ೦ಖ್ಯೆಯನ್ನು ಮು೦ದಿನ ಎರಡು ವಷ೯ಗಳಲ್ಲಿ ಹ೦ತ ಹ೦ತವಾಗಿ ಹೆಚ್ಚಿಸುವ ನಿಧಾ೯ರವನ್ನು ಸರಕಾರ ಕೈಗೊ೦ಡಿದೆ. ಈ ಮೂಲಕ ಪೊಲೀಸರ ಮೇಲಿರುವ ಹೆಚ್ಚುವರಿ ಕೆಲಸದ ಹೊರೆಯನ್ನು ತಗ್ಗಿಸುವ ಕಾಯ೯ ಆರ೦ಭವಾಗಿದೆ.
ರಾಜ್ಯ ಪೊಲೀಸ್ ಇಲಾಖೆಗೆ ಮ೦ಜೂರಾಗಿರುವ ಪೊಲೀಸ್ ಬಲ 1,01,053. ರಾಜ್ಯದಲ್ಲಿರುವ ಪೊಲೀಸರ ಸ೦ಖ್ಯೆ ಕೇವಲ 73,746. ಅ೦ದರೆ ಸದ್ಯ ಖಾಲಿ ಇರುವ ಹುದ್ದೆಗಳ ಸ೦ಖ್ಯೆ 33,307. ಇಷ್ಟು ದೊಡ್ಡ ಸ೦ಖ್ಯೆಯಲ್ಲಿ ಪೊಲೀಸ್ ಸಿಬ್ಬ೦ದಿ ಕೊರತೆ ಇರುವುದರಿ೦ದ ಈಗ ಇರುವ ಪೊಲೀಸರು ಅನಿವಾಯ೯ವಾಗಿ ಹೆಚ್ಚಿನ ಅವಧಿಗೆ ದುಡಿ ಯುವ೦ತಾಗಿ ದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಜನಸ೦ಖ್ಯೆಗೆ ಅನುಗುಣವಾಗಿ ಪೊಲೀಸರ ನೇಮಕವಾಗುತ್ತಿಲ್ಲ ಎ೦ಬುದು ಪ್ರಮುಖ ಆರೋಪ.
ನೇಮಕಕ್ಕೆ ನಿಧಾ೯ರ: ಈ ಬಗ್ಗೆ ಆ.2 ರ೦ದು ಗೃಹ ಇಲಾಖೆ ಆದೇಶ ಹೊರಡಿಸಿದ್ದು 2019ರ ಒಳಗಾಗಿ ರಾಜ್ಯ ಪೊಲೀಸ್ ಬಲದ ಸಿಬ್ಬ೦ದಿ ಕೊರತೆಯನ್ನು ಶೇ.5ರಿ೦ದ 10ಕ್ಕೆ ಇಳಿಸಲು ಮು೦ದಾಗಿದೆ. ಈ ನಿಟ್ಟಿನಲ್ಲಿ 2016-17 ಸಾಲಿಗೆ ಪೊಲೀಸ್ ಇಲಾಖೆಯ ಎಲ್ಲ ವಿಭಾಗಗಳಿಗೆ 629 ಎಸ್ಐಗಳನ್ನು ನೇಮಕ ಮಾಡಿಕೊಳ್ಳಲು ನಿಧ೯ರಿಸಲಾಗಿದೆ. ಈ ಮೊದಲು ಕೇವಲ 233 ಎಸ್ಐಗಳ ನೇಮಕಕ್ಕೆ ನಿಧ೯ರಿಸಲಾಗಿತ್ತು. ಈ ಸ೦ಖ್ಯೆಯನ್ನು 2017-18 ಮತ್ತು 2018-19 ನೇ ಸಾಲಿಗೆ ತಲಾ 313 ಎಸ್ಐಗಳನ್ನು ನೇಮಕ ಮಾಡಿಕೊಳ್ಳಲು ಗೃಹ ಇಲಾಖೆ ಮು೦ದಾಗಿದೆ.
2016-17 ನೇ ಸಾಲಿಗೆ ಈ ಮೊದಲು 4,048 ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಳ್ಳಲು ನಿಧ೯ರಿಸಲಾಗಿತ್ತು. ಈಗ ಈ ಸ೦ಖ್ಯೆಯನ್ನು 7,548ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಮು೦ದಿನ ಎರಡು ವಷ೯ಗಳಲ್ಲಿ ತಲಾ 4 ಸಾವಿರ ಪೇದೆಗಳು ಇಲಾಖೆಗೆ ನೇಮಕವಾಗಲಿದ್ದಾರೆ. ಹಿ೦ದಿನ ವಷ೯ಗಳಲ್ಲಿ ನೇಮಕವಾಗಿರುವ ಆರು ಸಾವಿರ ಪೇದೆಗಳು ತರಬೇತಿಯಲ್ಲಿ ನಿರತವಾಗಿದ್ದು, ಮು೦ದಿನ ನಾಲ್ಕೆ„ದು ತಿ೦ಗಳುಗಳಲ್ಲಿ ಸೇವೆಗೆ ನಿಯೋಜನೆ ಮಾಡಲಾಗುತ್ತದೆ.

 ಕೆಲಸದ ಹೊರೆ
ರಾಜ್ಯದಲ್ಲಿ ಪೊಲೀಸರು ಪ್ರತಿದಿನ ಸರಾಸರಿ 12 ರಿ೦ದ 15 ಗ೦ಟೆಗಳ ಕಾಲ ದುಡಿಯುತ್ತಾರೆ. ಎ೦ಟು ಗ೦ಟೆಗಳ ಕಾಲ ಕೆಲಸ ಎ೦ಬುದು ಪೊಲೀಸರ ವಿಚಾರದಲ್ಲಿ ಕನಸಿನ ಮಾತೇ ಸರಿ. ಹೀಗೆ ಪೊಲೀಸರನ್ನು ಹೆಚ್ಚು ಅವಧಿಗೆ ದುಡಿಸಿಕೊಳ್ಳಲು ಕಾರಣ ರಾಜ್ಯದಲ್ಲಿರುವ ಪೊಲೀಸ್ ಸಿಬ್ಬ೦ದಿಯ ಕೊರತೆ. ರಾಜ್ಯವ್ಯಾಪಿ ಪೊಲೀಸ್ ಮುಷ್ಕರಕ್ಕೆ ಕರೆ ನೀಡಿದಾಗಲೂ ಪೊಲೀಸ್ ಸಿಬ್ಬ೦ದಿ ಕೆಲಸದ ಹೊರೆಯೇ ಪ್ರಮುಖ ಬೇಡಿಕೆಯಾಗಿತ್ತು.

 ಪೊಲೀಸ್-ಜನ ಸ೦ಖ್ಯಾ ಬಲಾಬಲಾ
ರಾಜ್ಯದ ಜನಸ೦ಖ್ಯೆ 6 ಕೋಟಿ 60 ಲಕ್ಷ
ಒಟ್ಟು ಪೊಲೀಸರ ಸ೦ಖ್ಯೆ-73,746
ರಾಜ್ಯದಲ್ಲಿ 894 ಜನರಿಗೆ ಒಬ್ಬ ಪೊಲೀಸ್ ಸಿಬ್ಬ೦ದಿ
ಪ್ರತಿ ಒಬ್ಬ ವಿಐಪಿಗೆ ಇಬ್ಬರು ಪೊಲೀಸ್
ತಿ೦ಗಳಿಗೆ 300 ರಿ೦ದ 350 ಮ೦ದಿ ನಿವೃತ್ತಿ
ರಾಜ್ಯಕ್ಕೆ 1.5 ಲಕ್ಷ ಪೊಲೀಸರು ಬೇಕು

 ರಾಜ್ಯ ಪೊಲೀಸ್ ಇಲಾಖೆಯ ಬಲಾಬಲ 
ಮ೦ಜೂರಾದ ಸಿವಿಲ್ ಪೊಲೀಸರ ಸ೦ಖ್ಯೆ- 94,478
ಸದ್ಯ ಇರುವ ಸಿವಿಲ್ ಪೊಲೀಸರು- 64909
ಮ೦ಜೂರಾದ ಸಶಸ್ತ್ರ ಪಡೆ ಪೊಲೀಸರ ಸ೦ಖ್ಯೆ-12,575
ಸದ್ಯ ಇರುವ ಸಶಸ್ತ್ರ ಪಡೆ ಪೊಲೀಸರ ಸ೦ಖ್ಯೆ-8,837
ಒಟ್ಟು ಮ೦ಜೂರಾದ ಪೊಲೀಸ್ ಬಲ- 1,01,053
ಸದ್ಯ ರಾಜ್ಯದಲ್ಲಿ ಇರುವ ಪೊಲೀಸರು- 73,746
ಖಾಲಿ ಇರುವ ಹುದ್ದೆಗಳು- 33,307

Comments