UK Suddi
The news is by your side.

ಮಹಾರಾಷ್ಟ್ರದಲ್ಲಿ ಮಳೆ ; ಉತ್ತರ ಕರ್ನಾಟಕದಲ್ಲಿ ಹಲವೆಡೆ ಅವಾಂತರ

belg flood (2)

ಮಹಾರಾಷ್ಟ್ರದಲ್ಲಿ ಮಳೆ ಬೋರ್ಗರೆತ ; ಉತ್ತರ ಕರ್ನಾಟಕದ ಹಲವೆಡೆ ಅವಾಂತರ.. ವಾರದಿಂದೀಚೆಗಂತೂ ವರುಣನ ಆರ್ಭಟದಿಂದಾಗಿ ಮಹಾರಾಷ್ಟ್ರದ ಹಲವು ಜಿಲ್ಲೆಗಳು ತತ್ತರಗೊಂಡಿದ್ದು, ಕೋಯ್ನಾ ಹಾಗೂ ರಾಜಾಪುರ ಜಲಾಶಯ ಭರ್ತಿಯಾಗಿರ ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಬೆಳಗಾವಿ ಜಿಲ್ಲೆಗೆ ಇದರ ಪರಿಣಾಮ ತಟ್ಟಿದ್ದು, ನದಿ ಪಾತ್ರದ ಹಲವು ಗ್ರಾಮಗಳು ಜಲಾವೃತವಾಗಿವೆ., ದೂದ್ ಗಂಗಾ, ಕೃಷ್ಣೆ, ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಚಿಕ್ಕೋಡಿ, ರಾಯಭಾಗ, ಅಥಣಿ ಸುತ್ತಮುತ್ತಲ ಸುಮಾರು 13 ಸೇತುವೆಗಳು ಮುಳುಗಿವೆ. ಚಿಕ್ಕೋಡಿ ತಾಲೂಕಿನಾದ್ಯಂತ 8ಕ್ಕೂ ಹೆಚ್ಚು ದೇವಸ್ಥಾನಗಳು ಮುಳುಗಿವೆ.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಪ್ರವಾಹದಿಂದ ಅಪಾಯದಂಚಿನಲ್ಲಿದ್ದ ಸುಮಾರು 50 ಕುಟುಂಬಗಳನ್ನು ಜಿಲ್ಲಾಡಳಿತ ಸ್ಥಳಾಂತರ ಮಾಡಿದೆ.

Comments