UK Suddi
The news is by your side.

ಧಾರವಾಡ ಆಕಾಶವಾಣಿ ಸುದ್ದಿ ವಿಭಾಗ ಬ೦ದ್

1007BCB
ಆಕಾಶವಾಣಿ ಧಾರವಾಡ, ಪ್ರದೇಶ ಸಮಾಚಾರ ಓದುತ್ತಿರುವವರು…
       ಪ್ರತಿದಿನ ಬೆಳಗ್ಗೆ ತಣ್ಣನೆ ಹೊತ್ತಲ್ಲಿ, ಅಲೆ ಅಲೆಯಾಗಿ ತೇಲಿ ಬರುವ ಸ೦ಕ್ಷಿಪ್ತ ಸುದ್ದಿ “ವಾಣಿ’ ಗೆ ಈಗ ಪೂಣ೯ವಿರಾಮ. ಬರೋಬ್ಬರಿ ಮೂವತೈದು ವಷ೯ ಮನೆಮನೆಗಳಿಗೆ ಸುದ್ದಿ ತಲುಪಿಸುತ್ತಿದ್ದ ಧಾರವಾಡ ಪ್ರದೇಶ ಸಮಾಚಾರ ಕೇ೦ದ್ರ ಬೆ೦ಗಳೂರಿಗೆ ವಗಾ೯ವಣೆ ಯಾಗಿದೆ. ಆಕಾಶವಾಣಿ ಸಮಾಚಾರಕ್ಕೆ ಮು೦ಬ್ಯೆ, ಹ್ಯೆದರಬಾದ್ ಕನಾ೯ಟಕದ ಲಕ್ಷಾ೦ತರ ಜನರ ಮನಸ್ಸು ಭಾವನಾತ್ಮಕವಾಗಿ ಬೆಸೆದುಕೊ೦ಡಿತ್ತು. ಪ್ರತಿದಿನ ಬೆಳಗ್ಗೆ ಆ ಸಮಾಚಾರ ಕೇಳಿದರೇನೆ ಸ೦ತೃಪ್ತಿ ಎನ್ನುವ ಭಾವ ಒಡಮೂಡುತ್ತಿತ್ತು. ಆದರೆ ಇನ್ನುಮು೦ದೆ ಅವೆಲ್ಲ ಕೇವಲ ನೆನಪು ಮಾತ್ರ.
     ಕೇ೦ದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ದೇಶದಲ್ಲಿ ಈಗಾಗಲೇ ಕಾಯ೯ ನಿವ೯ಹಿಸುತ್ತಿರುವ 12 ಸಮಾಚಾರ ಕೇ೦ದ್ರಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಅವುಗಳಲ್ಲಿ ಧಾರವಾಡ ಸಮಾಚಾರ ಕೇ೦ದ್ರವೂ ಒ೦ದಾಗಿ ದ್ದು, ಅಲ್ಲಿ ಕಾಯ೦ ಉದ್ಯೋಗಿಯಾಗಿ ಕಾಯ೯ನಿವ೯ಹಿಸುತ್ತಿ ರುವ ಸಹಾಯಕ ನಿದೇ೯ಶಕರನ್ನು ಪೋಟ್‍೯ ಬ್ಲೇರ್ ಹಾಗೂ ಸಹಾಯಕ ಸುದ್ದಿ ಸ೦ಪಾದಕರನ್ನು ಬೆ೦ಗಳೂರು ದೂರದಶ೯ನ ಕೇ೦ದ್ರಕ್ಕೆ ತಕ್ಷಣದಿ೦ದ ಜಾರಿಗೆ ಬರುವ೦ತೆ ಆದೇಶಿಸಿ ವಗಾ೯ವಣೆ ಮಾಡಿದೆ. ಈಗಾಗಲೇ ದೂರದಶ೯ನ ಕೇ೦ದ್ರವನ್ನು ಮೇಲ್ದಜೆ೯ಗೇರಿಸಬೇಕು ಎನ್ನುವ ಕೂಗು ಬಲವಾಗುತ್ತಿರುವ ಬೆನ್ನಲ್ಲೇ, ಕೇ೦ದ್ರ ಸಮಾಚಾರ ಇಲಾಖೆ ಸಮಾಚಾರ ಕೇ೦ದ್ರವನ್ನೇ ರದ್ದು ಪಡಿಸಲು ಮು೦ದಾಗಿದ್ದು, ಉತ್ತರ ಕನಾ೯ಟಕ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಮು೦ದಿನ ದಿನಗಳಲ್ಲಿ ಈ ಭಾಗದ ಸುದ್ದಿಗಳನ್ನು ಬೆ೦ಗಳೂರು ಕೇ೦ದ್ರದಿ೦ದ ಪ್ರಸಾರ ಮಾಡುವ ಉದ್ದೇಶವಿಟ್ಟುಕೊ೦ಡಿದೆ ಎ೦ದೂ ಹೇಳಲಾಗುತ್ತಿದೆ. ಆದರೆ ಇದ್ಯಾವುದಕ್ಕೂ ಸ್ಪಷ್ಟ ಉತ್ತರ ಮಾತ್ರ ಎಲ್ಲಿಯೂ ಇಲ್ಲ.
     35 ವಷ೯ದ ಪ್ರಯಾಣ: ಪ್ರದೇಶ ಸಮಾಚಾರಕ್ಕೂ ಧಾರವಾಡ ಕೇ೦ದ್ರಕ್ಕೂ ಎಲ್ಲಿಲ್ಲದ ನ೦ಟು. 1981 ರ ರಾಜ್ಯೋತ್ಸವದ ದಿನ ಆರ೦ಭವಾಗಿದ್ದ ಪ್ರದೇಶ ಸಮಾಚಾರ, ಮೊದಲು ವಾಚನ ಮಾಡಿದ್ದು ಪ್ರಹ್ಲಾದ್ ಕೆ.ಆರ್. ಎ೦ಬ ಸುದ್ದಿವಾಚಕರು. ಮು೦ದೆ ಸುದ್ದಿಗೊ೦ದು ಹೊಸ ಆಯಾಮ ನೀಡಿ ಕೇಳುಗರು ಮತ್ತೆ ಮತ್ತೆ ಆ ಧ್ವನಿಯನ್ನು ಕೇಳುವ೦ತೆ ಮಾಡಿದ ಕೀತಿ೯ ನಾಗೇಶ ಶ್ಯಾನಭಾಗ ಎ೦ಬವರಿಗೆ ಸಲ್ಲಬೇಕು. “ಈಗ ಪ್ರದೇಶ ಸಮಾಚಾರ. ಓದುತ್ತಿರುವವರು ನಾಗೇಶ ಶ್ಯಾನಭಾಗ’ ಎ೦ದ ತಕ್ಷಣವೇ, ಮನೆ ಮನೆಗಳಲ್ಲಿ ನಿಶ್ಯಬ್ದದ ವಾತಾವರಣ ಸೃಷ್ಠಿಯಾಗುತ್ತಿದ್ದ ದಿನಗಳು ಇ೦ದಿಗೂ ಹಸಿರಾಗಿವೆ. 35 ವಷ೯ಗಳಿ೦ದ ಉತ್ತರ ಕನಾ೯ಟಕವಷ್ಟೇ ಅಲ್ಲದೇ ಸಮಗ್ರ ಕನಾ೯ಟಕದ ಸುದ್ದಿಗಳನ್ನು ಮನೆ ಮನೆಗೆ ತಲುಪಿಸಿದ್ದ ಕೀತಿ೯ಗೆ ಪಾತ್ರವಾಗಿದ್ದ ಪ್ರದೇಶ ಸಮಾಚಾರವನ್ನು ನಿಲ್ಲಿಸಲು ಆದೇಶ ನೀಡಿರುವ ಕೇ೦ದ್ರ ಸರಕಾರದ ಆದೇಶ ನಿಜಕ್ಕೂ ಆಕ್ಷೇಪಾಹ೯.
ಇದು ಕಾರಣವೇ? 

     ಧಾರವಾಡ ಸಮಾಚಾರ ಕೇಂದ್ರಕ್ಕೆ ಇಬ್ಬರು ಶಿಕ್ಷೆಯ ನೆಪದಲ್ಲಿ ವರ್ಗಾವಣೆಯಾಗಿ ಬಂದಿದ್ದರು. ಈ ಹಿನ್ನಲೆಂಜಿ ಲ್ಲಿ ಅವರಿಬ್ಬರು ಧಾರವಾಡ ಸಮಾಚಾರ ಕೇಂದ್ರಕ್ಕೆ ಸಂಬಂಧಿಸಿದ ಕಾರ್ಯಗಳು ಸಮರ್ಪಕವಾಗಿಲ್ಲ, ವಾತಾ ವರಣ ಸರಿಯಾಗಿಲ್ಲ, ಹೆಚ್ಚುವರಿ ಯಾಗಿ ಹಣ ವ್ಯಯವಾ ಗುತ್ತದೆ ಎನ್ನುವ ದೂರುಗಳ ನ್ನು ಕೇಂದ್ರ ಸಮಾಚಾರ ಇಲಾಖೆಗೆ ಪತ್ರ ಮುಖೇನ ಮೇಲಿಂದ ಮೇಲೆ ಬರೆದು ತಿಳಿಸುತ್ತಿ ದ್ದರು. ನಿರಂತರವಾಗಿ ಅವರಿಬ್ಬರು ಇದೇ ಕಾರ್ಯ ನಡೆಸುತ್ತ ಬಂದಿದ್ದರಿಂದ, ಸಮಾಚಾರ ಇಲಾಖೆ ಆ ದೂರನ್ನು ಪರಿಶೀಲನೆ ಮಾಡದೆಯೇ ಕೇಂದ್ರವನ್ನು ಮುಚ್ಚುವ ಆದೇಶ ಹೊರಡಿಸಿದೆ ಎನ್ನಲಾಗಿದೆ.

 

ಇದು ಸರಿಯಾದ ಕ್ರಮವಲ್ಲ. ಎಲ್ಲದಕ್ಕೂ ಬೆ೦ಗಳೂರು ಎನ್ನುವುದಾದರೆ ಉತ್ತರ ಕನಾ೯ಟಕದ ಮಧ್ಯಭಾಗದಲ್ಲಿರುವ ಧಾರವಾಡಕ್ಕೆ ಯಾವುದೇ ಬೆಲೆಯಿಲ್ಲ ಎ೦ಬುದು ಇದರಿ೦ದ ಸ್ಪಷ್ಟವಾಗಿದೆ. ಈ ಆದೇಶವನ್ನು ಕೂಡಲೇ ಹಿ೦ಪಡೆಯಬೇಕು. ಅನಿವಾಯ೯ವಾದರೆ ಅಖಿಲ ಕನಾ೯ಟಕ ಕ್ರಿಯಾ ಸಮಿತಿ ಅಡಿಯಲ್ಲಿ ಈ ಕುರಿತು ಹೋರಾಟಕ್ಕೂ ಸಹ ನಾವೆಲ್ಲರೂ ಸಿದ್ಧ. 

      -ಗಿರಡ್ಡಿ ಗೋವಿ೦ದರಾಜು ಹಿರಿಯ ಸಾಹಿತಿ 
ಇದು ನಿಜಕ್ಕೂ ದುದೈ೯ವದ ಸ೦ಗತಿ. ಉತ್ತರ ಕನಾ೯ಟಕ ಜನರ ಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಿದೇ ಎ೦ದರೆ ಎಲ್ಲವನ್ನೂ ಹೋರಾಟ ಮಾಡಿಯೇ ಪಡೆಯಬೇಕಾಗಿದೆ. ಈ ಆದೇಶ ವಿರುದ್ಧ ಈ ಭಾಗದ ಸ೦ಸದರು ಧ್ವನಿ ಎತ್ತಬೇಕು. ಇಲ್ಲದಿದ್ದರೇ ಮತ್ತೊ೦ದು ಹೋರಾಟ ನಡೆಸಲಾಗುವುದು.
      -ಬಿ.ಡಿ. ಹಿರೇಮಠ ಹಿರಿಯ ನ್ಯಾಯವಾದಿ

Comments