UK Suddi
The news is by your side.

ಕಾವೇರಿ ನೀರು ಬಿಡದಿರಲು ತೀರ್ಮಾನ

siddaramaiah_1518939f-e1473935615979

ಬೆಂಗಳೂರು: ಮಂಗಳವಾರ ಸುಪ್ರೀಂಕೋರ್ಟ್  ಮತ್ತೆ ನೀರು ಬಿಡುವಂತೆ ಆದೇಶ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ  ಸರ್ವಪಕ್ಷಗಳ ಸಭೆಗೆ ಎಲ್ಲಾ ಪಕ್ಷದ ಮುಖಂಡರು ಪಾಲ್ಗೊಂಡಿದ್ದು, ತಮಿಳುನಾಡಿಗೆ ನೀರು ಬಿಡದಂತೆ ತೀರ್ಮಾನ ಕೈಗೊಂಡಿದ್ದಾರೆ.

ನಾಳೆಯವರೆಗೂ ಯಾವುದೇ ಕಾರಣಕ್ಕೂ ನೀರು ಬಿಡಬೇಡಿ ಎಂದು ಸಭೆಯಲ್ಲಿ ಜೆಡಿಎಸ್, ಬಿಜೆಪಿ ನಾಯಕರು ಸಲಹೆ ನೀಡಿದ್ದಾರೆ.  ನಾಳೆ ಕೇಂದ್ರ ಸರಕಾರದ ಸಭೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಕೇಂದ್ರ ಸರಕಾರಕ್ಕೂ ಗೌರವ ನೀಡಿದಂತಾಗುತ್ತೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಈ ಬೆನ್ನಲ್ಲೇ  ಅಡ್ವೊಕೇಟ್ ಜನರಲ್ ಮಧುಸೂದನ್  ಆರ್ ನಾಯ್ಕ್ ಅವರು ರಾಜ್ಯ ಸರಕಾರಕ್ಕೆ ಮತ್ತೊಂದು ಸಲಹೆ ನೀಡಿದ್ದಾರೆ. ಅದೇನೆಂದರೆ ನೀರು ಬಿಟ್ಟು ಕೇಂದ್ರದೆದುರು ಹೋದರೆ ಒಳ್ಳೆಯದಾಗಬಹುದು. ಮುಂದಿನ ಸುಪ್ರೀಂಕೋರ್ಟ್ ವಿಚಾರಣೆಗೂ ಇದು ಪೂರಕವಾಗಲಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡುವುದು ಒಳ್ಳೆಯದು ಅವರು ಹೇಳಿದ್ದಾರೆ. ಇದೇ ವೇಳೆ ನಾಯ್ಕ್ ಅಭಿಪ್ರಾಾಯಕ್ಕೆ ಕೆಲ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದಾರೆ.

ಬದುಕಿದ್ದರೆ ಸಂವಿಧಾನ, ಸತ್ತರೆ ಯಾವ ಸಂವಿಧಾನ ಹೇಳಿ? 

ಬದುಕಿದ್ದರೆ ಸಂವಿಧಾನ, ಸತ್ತರೆ ಯಾವ ಸಂವಿಧಾನ ಹೇಳಿ? ಎಂದು ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಂವಿಧಾನ ಹೇಳ್ತಾ ಇದೆ ಎಂದ ಮಾತ್ರಕ್ಕೆ ನೀರು ಬಿಡ್ತೀವಿ ಅನ್ನಕಾಗತ್ತಾ? ಕುಡಿಯೋಕೆ ನೀರಿಲ್ಲದಾಗ ಬಿಡೋಕಾಗತ್ತಾ? ಎಂದು ಖಾರವಾಗಿ  ಈ ಶ್ವರಪ್ಪ ಪ್ರಶ್ನಿಸಿದ್ದಾರೆ. ನೀರು ಬಿಡುವ ಪರಿಸ್ಥಿತಿಯಲ್ಲಿ ರಾಜ್ಯವಿಲ್ಲ ಎಂದು ಹೇಳಿದರೂ ರಾಜ್ಯದ ವಿರುದ್ಧವಾಗಿಯೇ ಆದೇಶ ಬರುತ್ತಿದೆ.  ನಮಗೆ ಕುಡಿಯಲು ನೀರಿಲ್ಲದಿರುವಾಗಿ ತಮಿಳುನಾಡಿನ ಕೃಷಿಗೆ ನಾವು ನೀರು ಹರಿಸಲು ಸಾಧ್ಯವೇ? ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಜತೆ ನಾವು ನಿಲ್ಲುತ್ತೇವೆ. ಕಾವೇರಿ ನೀರು ವಿವಾದ ಸಂಬಂಧ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಅಂಬರೀಶ್ ಮತ್ತೆ ಗೈರು 

ಸಭೆಗೆ ಮಾಜಿ ಸಚಿವ ಅಂಬರೀಶ್ ಮತ್ತೆ ಗೈರಾಗಿದ್ದಾರೆ. ಕಾವೇರಿ ವಿಚಾರ ಸಂಬಂಧ ನಾಲ್ಕನೇ ಸರ್ವಪಕ್ಷ ಸಭೆ ಇದಾಗಿದ್ದು ಅಂಬರೀಶ್ ಗೈರಾಗಿದ್ದಾರೆ. ರೆಬೆಲ್ ಸ್ಟಾರ್ ಇನ್ನೂ ಕಾವೇರಿ ವಿಚಾರದಲ್ಲಿ ಹೋರಾಟಕ್ಕೆ ಇಳಿದಂತೆ ಕಾಣುತ್ತಿಲ್ಲ, ಅಲ್ಲದೇ ಮಾಧ್ಯಮಗಳ ಸಂರ್ಪಕಕ್ಕೂ ಸಿಗುತ್ತಿಲ್ಲ. ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರು ಜೆಡಿಎಸ್ ನಾಯಕರು ಭಾಗವಹಿಸಿದ್ದು,ಮುಂದಿನ ಕಾರ್ಯತಂತ್ರ ರೂಪಿಸಲು ಸರ್ಕಾರ ಸರ್ವಪಕ್ಷ ಸಭೆ ನಡೆಸುತ್ತಿದೆ. ಕಳೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಗೈರಾಗಿತ್ತು.

Comments