UK Suddi
The news is by your side.

ಅಪೂರ್ವ ಸ್ವಾತಂತ್ರ್ಯ ಹೋರಾಟಗಾರ ರಾಜಗುರು

shiv-ram-hari-rajguru-india-stamp-2013

ರಾಜಗುರು ಭಾರತ ಸ್ವಾತಂತ್ರ್ಯದ ಅಪೂರ್ವ ಹೋರಾಟಗಾರರಲ್ಲೊಬ್ಬರು. ಮಧ್ಯಮವರ್ಗದ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಇವರು, ತೀರಾ ಎಳೆ ವಯಸ್ಸಿನಲ್ಲೇ ಕ್ರಾಂತಿಕಾರಿಯಾಗಿದ್ದ ಕೆಲವೇ ಮುಖಂಡರಲ್ಲಿ ಒಬ್ಬರು. ಭಗತ್‍ಸಿಂಗ್ ಅವರ ಪಕ್ಷದಲ್ಲಿ ಗನ್‍ಮ್ಯಾನ್ ಆಗಿದ್ದ ರಾಜಗುರು, ಲಾಲಾ ಲಜಪತ್‍ರಾಯ್ ಅವರ ಹತ್ಯೆಗೆ ಪ್ರತೀಕಾರವಾಗಿ ಸೌಂಡರ್ಸ್ ಅವರನ್ನು ಹತ್ಯೆ ಮಾಡಿದ ಬಳಿಕ ಅವರು ಅತ್ಯಂತ ಜನಪ್ರಿಯರಾದರು. ಈ ಅಪರಾಧಕ್ಕಾಗಿ ಅವರನ್ನು 23ನೇ ವಯಸ್ಸಿನಲ್ಲೇ ಗಲ್ಲಿಗೇರಿಸಲಾಯಿತು.

 1. ರಾಜಗುರು 1908ರ ಆಗಸ್ಟ್ 24ರಂದು ಹುಟ್ಟಿದರು. 2016ರ ಆಗಸ್ಟ್ 24ರಂದು ಅವರ 108ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
 2. ಪುಣೆ ಬಳಿಕ ಖೇಡ್‍ನಲ್ಲಿ ರಾಜಗುರು ಶಿವರಾಂ ಹರಿ ರಾಜಗುರು ಎಂಬ ಹೆಸರು ಹೊಂದಿದ್ದರು.
 3. ಗಾಂಧೀಜಿಯವರ ಅಹಿಂಸಾತ್ಮಕ ಕಾನೂನುಭಂಗ ಚಳವಳಿಯಲ್ಲಿ ಅವರು ನಂಬಿಕೆ ಇಟ್ಟಿರಲಿಲ್ಲ.
 4. ಬ್ರಿಟಿಷರು ನಡೆಸುದ ದಬ್ಬಾಳಿಕೆಗೆ ಕ್ರಾಂತಿಯೊಂದೇ ಮಾರ್ಗ ಎಂದು ಅವರು ಬಲವಾಗಿ ನಂಬಿದ್ದರು. ಆದ್ದರಿಂದ ಇದಕ್ಕಾಗಿ ಹಿಂದೂಸ್ತಾನ್ ಸೋಶಲಿಸ್ಟ್ ರಿಪಬ್ಲಿಕನ್ ಆರ್ಮಿ ಸೇರಿದರು. ಯಾವುದೇ ವಿಧಾನದಲ್ಲಾದರೂ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಬೇಕು ಎನ್ನುವುದೇ ಅವರ ಧ್ಯೇಯವಾಗಿತ್ತು.
 5. ರಾಜಗುರು ಅವರು ಭಗತ್ ಸಿಂಗ್ ಹಾಗೂ ಸುಖದೇವ್ ಅವರ ಜತೆ ಸೇರಿಕೊಂಡು, ಬ್ರಿಟಿಷ್ ಪೊಲೀಸ್ ಅಧಿಕಾರಿ ಜೆ.ಪಿ.ಸೌಂಡ್ರಸ್ ಅವರನ್ನು 1928ರಲ್ಲಿ ಲಾಹೋರ್‍ನಲ್ಲಿ ಹತ್ಯೆ ಮಾಡಿದರು. ಲಾಲಾ ಲಜಪತರಾಯ್ ಅವರ ಸಾವಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಂಡರು.
 6. 1930ರಲ್ಲಿ ರೂಪಿಸಿ ಜಾರಿಗೆ ತಂದ ಕಾಯ್ದೆಗೆ ಅನುಗುಣವಾಗಿ ಈ ಸಂಬಂಧ ಅವರನ್ನು ವಿಚಾರಣೆಗೆ ಗುರಿಪಡಿಸಲಾಯಿತು.
 7. ಈ ಅಪರಾಧಕ್ಕೆ ಸಂಬಂಧಿಸಿದಂತೆ ರಾಜಗುರುವನ್ನು ಅಪರಾಧಿ ಎಂದು ಘೋಷಿಸಿ, 1931ರ ಮಾರ್ಚ್ 23ರಂದು ಗಲ್ಲಿಗೇರಿಸಲಾಯಿತು. ಆಗ ಅವರಿಗೆ ಕೇವಲ 23 ವರ್ಷ.
 8.  ಆ ಬಳಿಕ ಅವರ ಗೌರವಾರ್ಥವಾಗಿ ಅವರ ಹುಟ್ಟೂರಿಗೆ ರಾಜಗುರುನಗರ ಎಂದು ಕರೆಯಲಾಗುತ್ತದೆ.
 9. ಬ್ರಿಟಿಷರು ಭಾರತೀಯರ ವಿರುದ್ಧ ಎಸಗುತ್ತಿದ್ದ ದೌರ್ಜನ್ಯ ಹಾಗೂ ಬ್ರಿಟಿಷ್ ಆಡಳಿತಶಾಹಿ ಪ್ರಭುತ್ವದ ವಿರುದ್ಧ ಸೆಟೆದು ನಿಲ್ಲುವ ಅವರ ಮನೋಭಾವ ಕ್ರಾಂತಿಕಾರಿಗಳ ಜತೆ ಕೈಜೋಡಿಸುವಂತೆ ಮಾಡಿತು.
 10. ಶಿವರಾಮ ಹರಿ ರಾಜಗುರು ಎಳೆ ವಯಸ್ಸಿನಲ್ಲೇ ವಾರಾಣಾಸಿಗೆ ಬಂದು, ಸಂಸ್ಕøತ ಕಲಿತು ಹಿಂದೂ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿದರು.
 11. ರಾಜಗುರು ಅವರು ಶಿವಾಜಿಯ ಮೇಲೆ ಅತೀವ ಗೌರವ ಭಾವನೆ ಹೊಂದಿದ್ದರು. ಹಾಗೂ ಅವರ ಗೆರಿಲ್ಲಾ ತಂತ್ರಗಳನ್ನು ಅತೀವವಾಗಿ ಮೆಚ್ಚಿಕೊಂಡಿದ್ದರು.
 12. ವಾರಣಾಸಿಯಲ್ಲಿ ಅಧ್ಯಯನ ಮಾಡುವಾಗ ಅವರು ಕ್ರಾಂತಿಕಾರಿ ಭಾರತೀಯರ ಸಂಪರ್ಕಕ್ಕೆ ಬಂದರು. ಸ್ವಾತಂತ್ರ್ಯ ಹೋರಾಟಕ್ಕೆ ಗಣನೀಯ ಕೊಡುಗೆ ನೀಡುವ ಮಹದುದ್ದೇಶದಿಂದ ಅವರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಹಾಗೂ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಆರ್ಮಿಯ ಸಕ್ರಿಯ ಸದಸ್ಯರಾದರು.
 13. ರಾಜಗುರು ಅವರು ನಿರ್ಭೀತಿಯ ಮನೋಭಾವ ಹಾಗೂ ಅಪ್ರತಿಮ ಸಾಹಸಕ್ಕೆ ಹೆಸರಾಗಿದ್ದರು.
 14. ಭಗತ್ ಸಿಂಗ್ ಅವರ ಪಕ್ಷದ ಗನ್‍ಮನ್ ಎಂದೇ ಅವರು ಪ್ರಖ್ಯಾತರಾಗಿದ್ದರು.
 15. ಅವರನ್ನು 1931ರ ಮಾರ್ಚ್ 23ರಂದು ಭಗತ್ ಸಿಂಗ್ ಹಾಗೂ ಸುಖದೇವ್ ಅವರ ಜತೆ ನೇಣುಗಂಬಕ್ಕೆ ಏರಿಸಲಾಯಿತು.

Comments