ಪಾಕಿಸ್ತಾನ ಭಾರತಕ್ಕೆ ಧನ್ಯವಾದ ಹೇಳ್ಬೇಕು ಅಲ್ವಾ?
ಅಷ್ಟಕ್ಕೂ ಈ ಪಾಕಿಸ್ತಾನ ಯಾಕೆ ಇಷ್ಟೊಂದು Confuse ಆಗಿದೆ ತಿಳಿತ್ತಿಲ್ಲ.. ನಮ್ಮ ಸೈನಿಕರು ಹೊಡೆದುರುಳಿಸಿದ್ದು ಭಯೋತ್ಪಾದಕರನ್ನು, ಪಾಕಿಸ್ತಾನದ ಯಾವುದೇ ಅಮಾಯಕ ಜನರನ್ನಲ್ಲ.
ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಕ್ಕೆ ಪಾಕಿಸ್ತಾನ ಭಾರತದ ಸೈನಿಕರಿಗೆ ಧನ್ಯವಾದ ಹೇಳಬೇಕು ಅಲ್ವ? ಭಯೋತ್ಪಾದಕರೆಂದರೆ ಅವರು ಯಾವುದೇ ದೇಶಕ್ಕೂ ಭಯೋತ್ಪಾದಕರೇ ಅಲ್ವ.?
ಆದರೆ ಪಾಕಿಸ್ತಾನವು ನಡೆ ದುಕೊಳ್ಳುತ್ತಿರುವ ರೀತಿ ಹೇಗಿದೆ ಅಂದ್ರೆ ಅವರ ಬಂಧುಗಳೇ ಹತ್ಯೆ ಆಗಿದ್ದಾರೆ ಅನ್ನೊಥರ ಇದೆ. ಭಯೋತ್ಪಾದಕರೇ ಅವರ ಬಂಧುಗಳಾ?
ಹೌದು.. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದು. ಕಾಶ್ಮೀರದ ವಿಷಯದಲ್ಲಿ ಅದು ಭಯೋತ್ಪಾದಕರನ್ನು ಬಳಸಿಕೊಳ್ಳುತ್ತಿದೆ.
LOCಯಲ್ಲಿ ಭಯೋತ್ಪಾದಕರ ಇರುವಿಕೆ ಹಾಗು ಅವರು ಲಾಂಚ್ ಪ್ಯಾಡ್ ಮೂಲಕ ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿರುವ ಮಾಹಿತಿಯನ್ನು ನಮ್ಮ ಅಧಿಕಾರಿಗಳು ಪಡೆದಿದ್ದರು.
ನಮ್ಮ ಸೈನಿಕರು ಮುಹೂರ್ತ fix ಮಾಡಿದ್ದು 28ರ ರಾತ್ರಿ. ಪ್ರದಾನ ಮಂತ್ರಿಯನ್ನೊಳಗೊಂಡ ತಂಡ ಅಂದು ರಾತ್ರಿ 12 ಗಂಟೆಗೆ ದಾಳಿಗೆ ಸಿಗ್ನಲ್ ಹೊರಡಿಸಿದರು. 12.30 ರಿಂದ ಬೆಳಿಗ್ಗೆ 4.30, 4 ಗಂಟೆ ಸಮಯದಲ್ಲಿ ನಮ್ಮ 150 ಸೈನಿಕರು ಸುಮಾರು 5 ತಂಡದಲ್ಲಿ 2ಕಿಲೋ ಮೀಟರ್ LOC ದಾಟಿ 7 ಲಾಂಚ್ ಪ್ಯಾಡ್ ಮೇಲೆ ದಾಳಿ ಮಾಡಿದ್ರು.
ಮೂಲಗಳ ಪ್ರಕಾರ ದಾಳಿಯಲ್ಲಿ 40ಕ್ಕೂ ಹೆಚ್ಚು ಭಯೋತ್ಪಾದಕರು ಹಾಗು 9 ಪಾಕಿಸ್ತಾನಿ ಯೋಧರನ್ನು ಹತ್ಯೆ ಮಾಡಲಾಗಿತ್ತು.
ಹೌದು,, ಪಾಕಿಸ್ತಾನಿ ಯೋಧರ ಹತ್ಯೆ ಯಾಕೆ? ಯಾಕೆ ಅಂದ್ರೆ ಪಾಕಿಸ್ತಾನಿ ಯೋಧರು ಭಯೋತ್ಪಾದಕರ ರಕ್ಷಣೆಗೆ ನಿಂತಿದ್ದು. ಹೌದು ರಕ್ಷಣಾ ಅಧಿಕಾರಿಗಳ ಹೇಳಿಕೆ ಪ್ರಕಾರ ಭಯೋತ್ಪಾದಕರ ರಕ್ಷಣೆಗೆ ಅವರ ಯೋಧರೇ ಬಂದಿದ್ದು.
ರಕ್ಷಣೆಗೆ ಬಂದ ಪಾಕಿಸ್ತಾನಿ ಯೋಧರು ಬಲಿಯಾಗಿದ್ದಾರೆ.
ನಿಜ ಹೇಳ್ಬೇಕು ಅಂದ್ರೆ ಪಾಕಿಸ್ತಾನ ಸೈನ್ಯದಲ್ಲಿ ಯಾರು ಸೈನಿಕರು ಯರು ಭಯೋತ್ಪಾದಕರು ಅಂತ ಗುರುತಿಸೋದು ಕಷ್ಟ..
ಅದಕ್ಕೆ ಹೇಳೋದು ಭಯೋತ್ಪಾದಕರನ್ನು ಸ್ವತಃ ಪಾಕಿಸ್ತಾನ ಹಾಗು ಅವರ ಸೈನಿಕರೇ ಬೆಳಸ್ತಾ ಇದ್ದಾರೆ ಅಂತ.
ನಮ್ಮಂತ ಸಾಮಾನ್ಯ ಜನರಿಗೆ ಪಾಕಿಸ್ತಾನದ double game ಅರ್ಥ ಆಗದೇ ಇರುತ್ತಾ?
ಏನೇ ಇರ್ಲಿ ನಮ್ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಹಾಗು ಭಯೋತ್ಪಾದಕರಿಗೆ ಭಾರತದ ಶಕ್ತಿ ಏನು ಅಂತ ತೋರಿಸಿಕೊಟ್ಟ ನಮ್ಮ ಸೈನಿಕರಿಗೆ ಹಾಗು ನಮ್ಮ ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹ್ಯಾಟ್ಸ್ ಆಫ್..
ಜಗತ್ತು ಭಾರತದತ್ತ ನೋಡುತ್ತಿದೆ..
-ಗಂಗಾಧರ್ ಅಮ್ಮಲಜೇರಿ