UK Suddi
The news is by your side.

ಶಹನಾಯಿ ನುಡಿಸುತ್ತ ಬೈಕ್ ಸವಾರಿ ಮಾಡಿದ ಮೌನೇಶ

state-11

ಬಾಗಲಕೋಟೆ: ಕೈ ಬಿಟ್ಟು ಬೈಕ್ ಓಡಿಸುವುದು ಹಾಗೂ ಸ್ಟೇರಿಂಗ್ ಹಿಡಿಯದೆ ಕಾರು ಚಲಾಯಿಸಿ ಇಳಕಲ್ಲ ನಗರದ ಈರಣ್ಣ ಕುಂದರಗಿಮಠ ಈಗಾಗಲೇ ದಾಖಲೆ ನಿರ್ವಿುಸಿದ್ದು, ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಅದೇ ನಗರದ ಮೌನೇಶ ಭಜಂತ್ರಿ ಕೈಬಿಟ್ಟು ಬೈಕ್ ಓಡಿಸುವ ಜತೆಗೆ ಶಹನಾಯಿ ಕೂಡ ನುಡಿಸಿ ವಿಶಿಷ್ಟ ಸಾಹಸ ಮೆರೆದಿದ್ದಾರೆ. ಸಾಂಪ್ರದಾಯಿಕ ಶಹನಾಯಿ ವಾದ್ಯವನ್ನು ಜನಪ್ರಿಯಗೊಳಿಸಲು ವಿನೂತನ ಪ್ರಯೋಗ ಮಾಡಬೇಕು ಎನ್ನುವ ಭಜಂತ್ರಿ ಅವರು ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾರೆ. ಎರಡು ವರ್ಷಗಳಿಂದ ಕೈಬಿಟ್ಟು ಬೈಕ್ ಓಡಿಸುವುದರ ಜತೆಗೆ ಶಹನಾಯಿ ನುಡಿಸುವ ಅಭ್ಯಾಸ ಮಾಡಿ ಇದೀಗ ಅದರಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ಬಾಗಲಕೋಟೆ ನಗರದಲ್ಲಿ ಮಾಧ್ಯಮಗಳ ಎದುರು ಸಾಹಸ ಪ್ರದರ್ಶಿಸಿದರು.

Comments