UK Suddi
The news is by your side.

ಸೇನಾ ಕಮಾಂಡೋಗಳಿಗೆ ಬೆಳಗಾವಿಯಲ್ಲಿ ತರಬೇತಿ!

1-commando-1-web

ಬೆಳಗಾವಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಕಮಾಂಡೋಗಳು ತರಬೇತಿ ಪಡೆದಿದ್ದು ಬೆಳಗಾವಿಯ ಕಮಾಂಡೋ ತರಬೇತಿ ಶಾಲೆಯಲ್ಲಿ ಎಂಬುದು ಕರ್ನಾಟಕದ ಹೆಮ್ಮೆ.

ಬೆಳಗಾವಿಯ ಮರಾಠಾ ಲಘು ಪದಾತಿ ದಳ(ಎಂಎಲ್ಐಆರ್ಸಿ)ದ ಪ್ರದೇಶದಲ್ಲೇ ಕಮಾಂಡೋ ತರಬೇತಿ ಶಾಲೆಯಿದೆ. ಭಾರತೀಯ ಸೇನೆಯ ಎರಡನೇ ಹಾಗೂ ಏಕೈಕ ಕಿರಿಯ ಕಮಾಂಡೋ ತರಬೇತಿ ಶಾಲೆ ಎಂಬ ಹೆಗ್ಗಳಿಕೆಗೆ ಈ ಕೇಂದ್ರ ಪಾತ್ರವಾಗಿದೆ. ಗಡಿಯಲ್ಲಿ ತಂಟೆ ತೆಗೆಯುವ ಪಾಕ್ ಉಗ್ರರನ್ನು ಮಟ್ಟ ಹಾಕಲೆಂದೇ ಬೆಳಗಾವಿಯ ಕಿರಿಯ ಕಮಾಂಡೋ ಶಾಲೆಯಲ್ಲೇ ಭಾರತೀಯ ಸೇನೆಯ ಕಮಾಂಡೋಗಳನ್ನು ಸಿದ್ಧಗೊಳಿಸಲಾಗಿತ್ತು. 21 ವರ್ಷದೊಳಗಿನ ಕಮಾಂಡೋಗಳಿಗೆ ತರಬೇತಿ ನೀಡಲಾಗಿತ್ತು.

ಭಾರತೀಯ ಸೇನೆಯ ಮೊದಲ ಕಮಾಂಡೋ ತರಬೇತಿ ಶಾಲೆಯನ್ನು ಮಧ್ಯಪ್ರದೇಶದ ಮೌವ್ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಬಳಿಕ 1975ರಲ್ಲಿ ಬೆಳಗಾವಿಯ ಎಂಎಲ್ಐಆರ್ಸಿಯಲ್ಲಿ ಕಮಾಂಡೋ ತರಬೇತಿ ಶಾಲೆ ಸ್ಥಾಪಿಸಲಾಯಿತು. ಮೌವ್ ಪ್ರದೇಶದಲ್ಲಿ ಹಿರಿಯ ಕಮಾಂಡೋಗಳಿಗೆ ಮಾತ್ರ ಈಗ ತರಬೇತಿ ನೀಡಲಾಗುತ್ತಿದೆ. ಆದರೆ ಆರಂಭಿಕ ಹಂತದಲ್ಲಿ ಸೇನೆಗೆ ಸೇರುವ ಎಲ್ಲ ಕಮಾಂಡೋಗಳಿಗೆ ಬೆಳಗಾವಿಯ ಕಮಾಂಡೋ ತರಬೇತಿ ಶಾಲೆಯಲ್ಲಿ ಕ್ಲಿಷ್ಟ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿಸುವ ನಿಟ್ಟಿನಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಭಾರತೀಯ ಸೇನೆಯಲ್ಲಿರುವ ಬಹುತೇಕ ಕಮಾಂಡೋಗಳು ಬೆಳಗಾವಿಯ ಕಮಾಂಡೋ ತರಬೇತಿ ಶಾಲೆಯಲ್ಲೇ ತರಬೇತಿ ಪಡೆದಿದ್ದಾರೆ ಎಂಬುದು ವಿಶೇಷ.

Comments