UK Suddi
The news is by your side.

ಇಂದಿನಿಂದ ರಣಜಿ ಟ್ರೋಫಿ ಕ್ರಿಕೆಟ್ 

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಯುವ ಆಟಗಾರರ ಪಾಲಿಗೆ ‘ಚಿಮ್ಮುಹಲಗೆ’ ಎನಿಸಿರುವ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ 83ನೇ ಆವೃತ್ತಿಗೆ ಗುರುವಾರ ಚಾಲನೆ ಸಿಗಲಿದೆ. ಲೋಧಾ ಸಮಿತಿ ಹಾಗೂ ಬಿಸಿಸಿಐ ಜಟಾಪಟಿಯ ನಡುವೆ ಟೂರ್ನಿಗೆ ಸದ್ದಿಲ್ಲದೆ ವೇದಿಕೆ ಸಜ್ಜಾಗಿದೆ. ಆಡಳಿತದಲ್ಲಿ ಸಾಕಷ್ಟು ಏರುಪೇರು ಕಂಡು ವೇಳಾಪಟ್ಟಿ ತಡವಾಗಿ ಪ್ರಕಟಗೊಂಡಿದ್ದರೂ, ಟೂರ್ನಿ ನಿಗದಿಯಂತೆಯೇ ಆರಂಭ ಕಾಣುತ್ತಿದೆ. ಟೂರ್ನಿ ಸ್ವರೂಪ ಹಿಂದಿನಂತೆಯೇ ಇದ್ದರೂ, ಲೀಗ್ ಹಂತದಿಂದಲೇ ಎಲ್ಲ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ (ಉಭಯ ತಂಡಗಳಿಗೂ ತವರು ನೆಲವಲ್ಲ) ನಡೆಯಲಿರುವುದು ಈ ಬಾರಿಯ ವಿಶೇಷ. 41 ಬಾರಿ ಪ್ರಶಸ್ತಿ ವಿಜೇತ ಹಾಲಿ ಚಾಂಪಿಯನ್ ಮುಂಬೈ, 8 ಬಾರಿ ಚಾಂಪಿಯನ್ ಕರ್ನಾಟಕ, ಸೌರಾಷ್ಟ್ರ, ತಮಿಳುನಾಡು ಹಾಗೂ ಪಂಜಾಬ್ ತಂಡಗಳು ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳೆನಿಸಿವೆ.

Comments